Arjun Sarja; ತ್ರಿಭಾಷೆಯಲ್ಲಿ ಸೀತಾ ಪಯಣ; ನಿರ್ದೇಶನದ ಜೊತೆ ನಿರ್ಮಾಣಕ್ಕೂ ಕೈಹಾಕಿದ ಅರ್ಜುನ್‌ ಸರ್ಜಾ

ಅರ್ಜುನ್‌ ಸರ್ಜಾ (Arjun Sarja) ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಮಗಳು ಐಶ್ವರ್ಯ ಸರ್ಜಾ ಅಭಿನಯದ ‘ಸೀತಾ ಪಯಣ’ (Seetha Payana) ಚಿತ್ರದ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ (Niranjan) ನಾಯಕ ನಾಟಕನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.‘ಜೈ ಹಿಂದ್’, ‘ಅಭಿಮನ್ಯು’ ಮತ್ತು ‘ಪ್ರೇಮಬರಹ’ ಸಿನಿಮಾಗಳನ್ನು ಅರ್ಜುನ್‌ ಸರ್ಜಾ ನಿರ್ದೇಶನ ಮಾಡಿದ್ದರು.

‘ಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಪಯಣ ಕುರಿತಾದ ಚಿತ್ರವಾಗಿದ್ದು, ಅಭಿ ಮತ್ತು ಸೀತಾ ಎಂಬ ಹದಿಹರೆಯದವರ ಭಾವನಾತ್ಮಕ ಪಯಣವಿದೆ. ಈಗಾಗಲೇ ಚಿತ್ರದ ಡಬ್ಬಿಂಗ್‌ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಏಪ್ರಿಲ್‌ನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ’ ಎಂದಿದೆ ಚಿತ್ರತಂಡ.

ಪ್ರಕಾಶ್‍ ರಾಜ್‌, ಸತ್ಯರಾಜ್‍ ಮುಂತಾದವರು ನಟಿಸಿದ್ದಾರೆ. ಅರ್ಜುನ್‌ ಸರ್ಜಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪ್‌ ರುಬೆನ್ಸ್‌ ಸಂಗೀತ, ಬಾಲಮುರುಗನ್‌ ಛಾಯಾಚಿತ್ರಗ್ರಹಣವಿದೆ. ‘ದೃಶ್ಯಂ’ ಸಿನಿಮಾ ಖ್ಯಾತಿಯ ಸಂಕಲನಕಾರ ಆಯೂಬ್‌ ಖಾನ್‌ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *