Puneeth Rajkumar cutout; ಪುನೀತ್ ನೆನಪಲ್ಲಿ 50 ಅಡಿ ಕಟೌಟ್ ನಿಲ್ಲಿಸಿದ ‘ಅಪ್ಪು ಅಭಿಮಾನಿ’ ಚಿತ್ರತಂಡ

ಮೂರು ವರ್ಷಗಳ ಹಿಂದೆ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ 30 ಕಟೌಟ್‍ಗಳನ್ನು ವೀರೇಶ ಚಿತ್ರಮಂದಿರದಲ್ಲಿ ನಿಲ್ಲಿಸಿದ್ದು ನೆನಪಿರಬಹುದು. ಈ ಚಿತ್ರವು ಪುನೀತ್ ಹುಟ್ಟುಹಬ್ಬದ ಪ್ರಯುಕ್ತ 2022ರ ಮಾರ್ಚ್ 17ರಂದು ಬಿಡುಗಡೆಯಾಯಿತು. ಪುನೀತ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ಅಪ್ಪು’ವಿನಿಂದ ‘ಜೇಮ್ಸ್’ವರೆಗೂ 20 ವರ್ಷಗಳಲ್ಲಿ ಬಿಡುಗಡೆಯಾದ ಒಟ್ಟು 30 ಚಿತ್ರಗಳ ಕಟೌಟ್‍ಗಳನ್ನು ನಿಲ್ಲಿಸಲಾಗಿತ್ತು.
ಈಗ ಪುನೀತ್ ನಿಧನದ ಮೂರೂವರೆ ವರ್ಷಗಳ ನಂತರ ನರ್ತಕಿ ಚಿತ್ರಮಂದಿರದ ಎದುರು ಅವರ 50 ಅಡಿ ಕಟೌಟ್ ನಿಲ್ಲಿಸಲಾಗಿದೆ. ಪುನೀತ್ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಅಪ್ಪು’ ಇತ್ತೀಚೆಗೆ ಮರುಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ‘ಅಪ್ಪು ಅಭಿಮಾನಿ’ ಚಿತ್ರತಂಡದ ವತಿಯಿಂದ ‘ಅಪ್ಪು ಅಭಿಮಾನಿ’ ಚಿತ್ರದ 50 ಅಡಿ ಕಟೌಟ್ ನಿಲ್ಲಿಸಲಾಗಿದೆ.
`ತಾರಕಾಸುರ’ ಖ್ಯಾತಿಯ ರವಿಕಿರಣ್ ಅಭಿನಯಿಸುತ್ತಿರುವ ‘ಅಪ್ಪು ಅಭಿಮಾನಿ’ ಚಿತ್ರತಂಡದ ವತಿಯಿಂದ ಪುನೀತ್ ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ 50 ಅಡಿ ಎತ್ತರದ ಕಟ್‌ಔಟ್ ನರ್ತಕಿ ಚಿತ್ರಮಂದಿರದ ಆವರಣದಲ್ಲಿ ಇತ್ತೀಚೆಗೆ ಅನಾವರಣಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ರಾಘವೇಂದ್ರ ರಾಜಕುಮಾರ್, ಸಾ.ರಾ. ಗೋವಿಂದು, ಎಂ.ಎನ್. ಸುರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುನೀತ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು.
ಚಿತ್ರದಲ್ಲಿ ನಾಯಕ ರವಿಕಿರಣ್, ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವುದರಿಂದ ಕಟ್‌ಔಟ್‌ದಲ್ಲಿ ಅಪ್ಪು ನಂತರ ನಾಯಕನ ಚಿತ್ರವೂ ಇದೆ. ಅಕ್ಷಯ ಮೂವಿ ಫ್ಯಾಕ್ಟರಿ ಸಂಸ್ಥೆ ನಿರ್ಮಿಸಿರುವ ಈ ಚಿತ್ರವು ಡಾ. ರೆಡ್.ಡಿ ನಿರ್ದೇಶನ ಮಾಡಿದ್ದಾರೆ.
‘ಅಪ್ಪು ಅಭಿಮಾನಿ’ ಚಿತ್ರದಲ್ಲಿ ರವಿಕಿರಣ್ ಜೊತೆಗೆ ರಾಘವೇಂದ್ರ ರಾಜಕುಮಾರ್, ಶರತ್ ಲೋಹಿತಾಶ್ವ, ಸುಮನ್, ಚಿದಾನಂದ್, ಥ್ರಿಲ್ಲರ್ ಮಂಜು, ಶಿವಪ್ಪಕುಡ್ಲೂರು ಮುಂತಾದವರು ನಟಿಸುತ್ತಿದ್ದಾರೆ. ಶೇಖ್ ಮುನೀರ್ ಪಾಷಾ ಕಥೆ, ಮಣಿಕಾಂತ್ ಕದ್ರಿ ಸಂಗೀತ ಈ ಚಿತ್ರಕ್ಕಿದೆ.


