ವಾಣಿಜ್ಯ ಮಂಡಳಿಯಲ್ಲಿ Rachita Ram ಮೇಲೆ ಇನ್ನೊಂದು ದೂರು …

‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ರಚಿತಾ ರಾಮ್ (Rachita Ram) ಬರುತ್ತಿಲ್ಲ ಎಂದು ಅವರ ನಿರ್ದೇಶಕ ನಾಗಶೇಖರ್ ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು. ತಮ್ಮ ಚಿತ್ರದ ಪ್ರಚಾರಕ್ಕೆ ರಚಿತಾ ಬರದೇ ಆಟ ಆಡಿಸುತ್ತಿದ್ದಾರೆ ಮತ್ತು ರಚಿತಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದೀಗ ರಚಿತಾ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ಇನ್ನೊಂದು ದೂರು ದಾಖಲಾಗಿದೆ.
ಕೆಲವು ವರ್ಷಗಳ ಹಿಂದೆ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಎಂಬ ಚಿತ್ರ ಸೆಟ್ಟೇರಿತ್ತು. ಮಾದೇಶ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಆದರೆ, ರಚಿತಾ ಚಿತ್ರೀಕರಣದಲ್ಲಿ ಪಾಲ್ಗೊಂಡಿರಲಿಲ್ಲವಂತೆ. ಜೊತೆಗೆ ಚಿತ್ರದಲ್ಲಿ ನಟಿಸುವುದಕ್ಕೆ ಪಡೆದ ಮುಂಗಡವನ್ನು ಕೊಟ್ಟಿಲ್ಲ ಎಂದು ನಿರ್ಮಾಪಕಿ ವಿಜಯಲಕ್ಷ್ಮೀ ಅರಸ್ ದೂರಿದ್ದಾರೆ.

‘ಉಪ್ಪಿ ರುಪ್ಪಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ರಚಿತಾ ಒಪ್ಪಿಕೊಂಡಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಸೆಟ್ಟೇರಿತ್ತು. ಆದರೆ, ಹೆಚ್ಚು ಪ್ರಗತಿ ಕಂಡಿರಲಿಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ ರಚಿತಾಗೆ 23 ಲಕ್ಷ ರೂ. ಸಂಭಾವನೆ ನಿಗದಿ ಮಾಡಲಾಗಿತ್ತಂತೆ. ಮುಂಗಡವಾಗಿ 13 ಲಕ್ಷ ಸಹ ನೀಡಲಾಗಿದೆ. 2017ರಲ್ಲಿ ಬ್ಯಾಂಕಾಕ್‍ನಲ್ಲಿ ಚಿತ್ರತಂಡ ಚಿತ್ರೀಕರಣ ಪ್ಲಾನ್ ಮಾಡಿತ್ತು. ಈ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಒಪ್ಪಿಕೊಂಡಿದ್ದ ರಚಿತಾ, ಕೊನೆಗೂ ಭಾಗವಹಿಸಲಿಲ್ಲವಂತೆ. ಅವರಿಗಾಗಿ ಏರ್ ಟಿಕೆಟ್ ಮತ್ತು ಹೋಟೆಲ್ ರೂಂಗಳನ್ನು ಸಹ ಬುಕ್ ಮಾಡಲಾಗಿತ್ತಂತೆ. ಆದರೆ, ರಚಿತಾ ಚಿತ್ರೀಕರಣದಲ್ಲಿ ಭಾಗವಹಿಸಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ, ಬರೀ ಉಪೇಂದ್ರ ಅವರ ಭಾಗದ ಚಿತ್ರೀಕರಣ ಮುಗಿಸಿ ಚಿತ್ರತಂಡ ವಾಪಸ್ಸಾಗಿದೆ. ರಚಿತಾ ರಾಮ್‍ರಿಂದಾಗಿ ನಿರ್ಮಾಪಕರಿಗೆ ಸುಮಾರು ಒಂದೂವರೆ ಕೋಟಿ ರೂ. ನಷ್ಟವಾಗಿತ್ತಂತೆ.
ಇನ್ನು, ಮೈಸೂರಿನಲ್ಲಿ ನಡೆದ ಚಿತ್ರೀಕರಣದಲ್ಲೂ ರಚಿತಾ ಕೇವಲ ಒಂದು ದಿನ ಮಾತ್ರ ಭಾಗವಹಿಸಿದ್ದರಂತೆ. ಕೊನೆಗೆ ಅವರಿಂದಾಗಿ ಈ ಚಿತ್ರ ಅರ್ಧಕ್ಕೆ ನಿಂತು ಹೋಗಿದೆ. ಒಂದು ಕಡೆ ಹಣವೂ ಇಲ್ಲ, ಚಿತ್ರವೂ ಮುಗಿದಿಲ್ಲ. ರಚಿತಾ ಅವರನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸಿದರೂ, ರಚಿತಾ ಸಿಗದೆ ಸತಾಯಿಸುತ್ತಿದ್ದರಂತೆ. ಹಾಗಾಗಿ, ನಿರ್ಮಾಪಕರು ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ವಾಣಿಜ್ಯ ಮಂಡಳಿಯವರು ರಚಿತಾರನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸುತ್ತಿದ್ದು, ಈಗಲಾದರೂ ಅವರು ಹಣ ಹಿಂದಿರುಗಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:-
ಓದು ಮುಂದುವರೆಸಿ..
помощь наркозависимым
помощь наркозависимым
На сайте https://sprotyv.org/ представлено огромное количество интересной, актуальной и содержательной информации на самую разную тему: экономики, политики, войны, бизнеса, криминала,…
помощь наркозависимым
помощь наркозависимым
One thought on “ವಾಣಿಜ್ಯ ಮಂಡಳಿಯಲ್ಲಿ Rachita Ram ಮೇಲೆ ಇನ್ನೊಂದು ದೂರು …”