Anita Bhat; ಉಗ್ರಾಣ ಚಿತ್ರದ ನಟನೆಯ ಜೊತೆ ನಿರ್ಮಾಣದ ಜವಾಬ್ದಾರಿ ಹೊತ್ತ ಅನಿತಾ ಭಟ್‌

ಮಿಸ್ಟ್ರಿ, ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡಿರುವ ಉಗ್ರಾಣ ಚಿತ್ರದಲ್ಲಿ ಪವನ್‌ ಶೆಟ್ಟಿಗೆ ಜೋಡಿಯಾಗಿ ಅನಿತಾ ಭಟ್‌ (Anita Bhat) ಕಾಣಿಸಿಕೊಳ್ಳಿದ್ದಾರೆ. ‘ಉಗ್ರಾಣ’ ಚಿತ್ರದ ಫಸ್ಟ್‌ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ರಿಶಿಕೇಶ್‌ ಚಿತ್ರದ ನಿರ್ದೇಶನದ ಜೊತೆಗೆ ಸಂಕಲನ, ಛಾಯಾಗ್ರಹಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಸಿನಿಮಾದ ಬಗ್ಗೆ ನಿರ್ದೇಶಕ ರಿಶಿಕೇಶ್‌ ‘ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ಮೂಡಿಬರುತ್ತಿದೆ. ಬೆಂಗಳೂರು, ಹೈದರಬಾದ್, ಸಾಗರ, ತೀರ್ಥಹಳ್ಳಿ, ಮೂಡುಬಿದಿರೆ, ಸಿರ್ಸಿ, ಗೋಕರ್ಣ, ಹೊಸಗುಂದದ ಪುರಾತನ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.’ ಎಂದಿದ್ದಾರೆ.

ಈ ಚಿತ್ರದ ಮೂಲಕ ನಟಿ ಅನಿತಾ ಭಟ್‌ ನಿರ್ಮಾಪಕಿಯಾಗಿದ್ದು, ಎಬಿಸಿ ಪ್ರೊಡಕ್ಷನ್‌ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ತೆಲುಗಿನ ಷಫಿ, ಕೆ.ಜಿ.ಕೃಷ್ಣಮೂರ್ತಿ, ಸಿದ್ದು ಮೂಲಮನಿ, ಮಿಮಿಕ್ರಿ ಗೋಪಿ, ಜಯದೇವ್, ಕರಿಸುಬ್ಬು ಮುಂತಾದವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಕವಿರಾಜ್ ಸಾಹಿತ್ಯವಿದ್ದು, ಆಕಾಶ್‌ ಪರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ.

Leave a Reply

Your email address will not be published. Required fields are marked *