Timmana Mottegalu; ಅಮೇರಿಕಾದಲ್ಲಿ ಪ್ರದರ್ಶನವಾಯ್ತು ರಕ್ಷಿತ್‍ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ …

Thimmanna-Mottegalu-Dallas-Premiere

ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ರಕ್ಷಿತ್‍ ತೀರ್ಥಹಳ್ಳಿ (Rakshit Teerthahalli) ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ (Timmana Mottegalu) ಚಿತ್ರವು ಇದಕ್ಕೂ ಮೊದಲು ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವ ಮತ್ತು ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು. ದಾದಾ ಸಾಹೇಬ್‍ ಫಾಲ್ಕೆ ಚಿತ್ರೋತ್ಸವದಲ್ಲಿ ಜ್ಯೂರಿಯ ವಿಶೇಷ ಪ್ರಶಸ್ತಿಯನ್ನು ಗೆದ್ದಿತ್ತು.

ಇದೀಗ ‘ತಿಮ್ಮನ ಮೊಟ್ಟೆಗಳು’ ಚಿತ್ರವು ಅಮೇರಿಕಾಗೆ ಪಯಣ ಬೆಳೆಸಿದೆ. ಚಿತ್ರವು ಅಮೇರಿಕಾದ ಡಲ್ಲಾಸ್‍ ನಗರದ ಮಲ್ಟಿಪ್ಲೆಕ್ಸ್ನಲ್ಲಿ ಪ್ರೀಮಿಯರ್‍ ಪ್ರದರ್ಶನ ಕಂಡಿದ್ದು, ಡಲ್ಲಾಸ್‍ನಲ್ಲಿರುವ ಅನಿವಾಸಿ ಕನ್ನಡಿಗರು ಈ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ. ಚಿತ್ರ ನೋಡುವುದಕ್ಕೆ ಬಂದ ಹಲವರು ಲುಂಗಿ ತೊಟ್ಟು, ಹೆಗಲ ಮೇಲೊಂದು ಟವಲ್ ಇಟ್ಟು, ತಲೆಯ ಮೇಲೊಂದು ಮಂಡಾಳೆಯನ್ನ ಹಾಕಿಕೊಂಡು … ಮಲೆನಾಡಿನ ಸಾಮಾನ್ಯ ವ್ಯಕ್ತಿಯಂತೆ ಚಿತ್ರ ವೀಕ್ಷಿಸಲು ಬಂದದ್ದು ಎಲ್ಲರ ಗಮನ ಸೆಳೆಯಿತು.

‘ತಿಮ್ಮನ ಮೊಟ್ಟೆಗಳು’ ಚಿತ್ರವು ರಕ್ಷಿತ್‍ ತೀರ್ಥಹಳ್ಳಿ ಬರೆದ ‘ಕಾಡಿನ ನೆಂಟರು’ ಕಥಾಸಂಲಕನದಿಂದ ಆಯ್ದ ಕಥೆಯಾಗಿದೆ. ಇದಕ್ಕೂ ಮೊದಲು ಇದೇ ‘ಕಾಡಿನ ನೆಂಟರು‘ ಸಂಕಲನದ ‘ಎಂಥಾ ಕಥೆ ಮಾರಾಯ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಅದೇ ಕಥಾಸಂಕಲನ ಇನ್ನೊಂದು ಕಥೆ, ಇನ್ನೊಂದು ಚಿತ್ರವಾಗಿದೆ.

ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಈ ಚಿತ್ರವನ್ನು ನಿರ್ಮಿಸಿದ್ದು, ರಕ್ಷಿತ್‍ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪ್ರವೀಣ್ ಎಸ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ ಹಾಗೂ ಹೇಮಂತ್ ಜೋಯಿಸ್ ಸಂಗೀತ ಸಂಯೋಜನೆ ಇದೆ.

‘ತಿಮ್ಮನ ಮೊಟ್ಟೆಗಳು’ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಆಶಿಕಾ ಸೋಮಶೇಕರ್, ಪ್ರಗತಿ ಪ್ರಭು, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

(Rakshit Teerthahalli’s film Timman Mottegalu has now embarked on a journey to America. It had its premiere screening at a multiplex in Dallas, USA, where non-resident Kannadigas gathered to witness the event.)

Leave a Reply

Your email address will not be published. Required fields are marked *