Sharanya Shetty; ‘ನೆನಪಿರಲಿ’ ಪ್ರೇಮ್‍ ಹೊಸ ಚಿತ್ರಕ್ಕೆ ಶರಣ್ಯ ಶೆಟ್ಟಿ ನಾಯಕಿ

Nenapirali-Pream-Sharanya-Shetty

ಶರಣ್ಯ ಶೆಟ್ಟಿ (Sharanya Shetty) ಇದುವರೆಗೂ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’, ‘ಫಾರೆಸ್ಟ್’ ಮುಂತಾದ ಚಿತ್ರಗಳೆಲ್ಲಾ ಬಹುನಾಯಕಿಯರ ಚಿತ್ರವಾಗಿತ್ತು. ಇದೀಗ ಅವರು ಮೊದಲ ಬಾರಿಗೆ ಒಂಟಿ ನಾಯಕಿಯಾಗಿ ಆಯ್ಕೆಯಾಗಿದ್ದು, ‘ನೆನಪಿರಲಿ’ ಪ್ರೇಮ್‍’ (Nenapirali Prem) ಎದುರು ಹೊಸ ಚಿತ್ರವೊಂದರಲ್ಲಿ ಅವರು ನಾಯಕಿಯಾಗಿ ಆಯ್ಕೆಯಾಗಿರುವುದು ವಿಶೇಷ.

ಕಳೆದ ವರ್ಷ ಪ್ರೇಮ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರದ ಮುಹೂರ್ತವಾಗಿತ್ತು. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಶತ್ರು’ ಚಿತ್ರದಲ್ಲಿ ಅವರು ಮಾಸ್‍ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈಗ ಈ ಚಿತ್ರದಲ್ಲಿ ಅವರು ಪುನಃ ಖಡಕ್‍ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಶರಣ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹೆಸರಿಡದ ಈ ಸಿನಿಮಾಗೆ ಮಧು ಗೌಡ ಬಂಡವಾಳ ಹೂಡಿದ್ದಾರೆ. ತೇಜೇಶ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರದ ಚಿತ್ರೀಕರಣ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಲಿದೆ.

ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಾಗಿರುವ ಶರಣ್ಯ, ಇದಕ್ಕೂ ಮೊದಲು ಇಂಥದ್ದೊಂದು ಪಾತ್ರದಲ್ಲಿ ನಟಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾಯಕಿಯಾಗಿ ನಟಿಸಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತಂತೆ. ಆದರೆ, ಶರಣ್ಯಗೆ ಸಿಕ್ಕಿದ್ದೆಲ್ಲಾ ಬಹುನಾಯಕಿಯರಿರುವ ಚಿತರಗಳೇ. ಒಂದೊಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಶರಣ್ಯ, ಸಹಜವಾಗಿಯೇ ಪ್ರೇಮ್‍ ಜೊತೆಗೆ ನಾಯಕಿಯಾಗಿ ನಟಿಸುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ.

ಇದಲ್ಲದೆ ತೆಲುಗು ಚಿತ್ರವೊಂದರಲ್ಲೂ ಶರಣ್ಯ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರ ಬಗ್ಗೆ ಚಿತ್ರತಂಡದವರೇ ಸದ್ಯದಲ್ಲಿ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *