Siddaramaiah Meets Shivarajkumar; ಶಿವರಾಜಕುಮಾರ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಡಿಸೆಂಬರ್ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆಂದು ಅಮೇರಿಕಾಗೆ ಹೋಗಿದ್ದ ಶಿವರಾಜಕುಮಾರ್, ಭಾನುವಾರವಷ್ಟೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅವರನ್ನು ಚಿತ್ರರಂಗದವರು, ಅಭಿಮಾನಿಗಳು ಮತ್ತು ಹಿತೈಷಿಗಳು ಭವ್ಯವಾಗಿ ಬರಮಾಡಿಕೊಂಡಿದ್ದಾರೆ. ಶಿವರಾಜಕುಮಾರ್ ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಕ್ಯಾನ್ಸರ್‍ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ಈ ಮಧ್ಯೆ, ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಶಿವರಾಜಕುಮರ್ ( Shivarajkumar) ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸೋಮವಾರ ಬೆಳಿಗ್ಗೆ ಶಿವರಾಜಕುಮಾರ್ ಮನೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಕೆಲವು ಸಮಯ ಅವರ ನಿವಾಸದಲ್ಲಿ ಕಳೆಯುವುದರ ಜೊತೆಗೆ ಆದಷ್ಟು ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿಗಳು, ‘ಶಿವರಾಜಕುಮಾರ್ ಅವರು ಮತ್ತೆ ಹಿಂದಿನಂತೆ ಕ್ರಿಯಾಶೀಲರಾಗಿರುವುದು ಕಂಡು ಖುಷಿಯಾಯಿತು. ಅಭಿಮಾನಿಗಳ ಹರಕೆ – ಹಾರೈಕೆ, ಆತ್ಮಬಲದಿಂದ ಅನಾರೋಗ್ಯವನ್ನು ಗೆದ್ದು ಬಂದಿರುವ ಶಿವರಾಜ್ ಕುಮಾರ್ ಅವರ ಮುಂದಿನ ಜೀವನ ಸುಖ – ಶಾಂತಿಯಿಂದ ಕೂಡಿರಲಿ’ ಎಂದು ಹಾರೈಸಿದ್ದಾರೆ.
ಇನ್ನು, ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ವಾಪಸ್ಸಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವರಾಜಕಮಾರ್, ‘ಶಸ್ತ್ರಚಿಕಿತ್ಸೆ ಆದ ಎರಡ್ಮೂರು ದಿನಗಳ ಕಾಲ ಲಿಕ್ವಿಡ್ ಫುಡ್ ಸೇವಿಸುತ್ತಿದ್ದೆ. ಕ್ರಮೇಣ ವಾಕಿಂಗ್ ಮಾಡಲು ಹೇಳಿದರು. ಕೆಲವು ದಿನಗಳಲ್ಲಿ ನನ್ನ ಆರೋಗ್ಯ ಸುಧಾರಿಸಿತು. ಈಗ ಆರಾಮಾಗಿದ್ದೇನೆ. ನನ್ನ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ನನ್ನನ್ನು ತಾಯಿಯಂತೆ ನೋಡಿಕೊಂಡರು. ಅವರೆಲ್ಲರ ಪ್ರೀತಿಯಿಂದಾಗಿ ನಾನು ಆರೋಗ್ಯವಾಗಿದ್ದೇನೆ. ಕೆಲವು ದಿನಗಳ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಶಿವರಾಜಕುಮಾರ್ ಹೊಸ ವರ್ಷದ ಮೊದಲ ದಿನದಂದು ಅಭಿಮಾನಿಗಳಿವೆ ವೀಡಿಯೋ ಸಂದೇಶ ಕಳಿಸಿದ್ದ ಅವರು, ತಾನು ಕ್ಯಾನ್ಸರ್ ಮುಕ್ತರಾಗಿದ್ದಾಗಿ ಘೋಷಿಸಿದ್ದರು. ಈ ಮೂಲಕ ಅಭಿಮಾನಿಗಳಲ್ಲಿದ್ದ ಆತಂಕವನ್ನು ದೂರ ಮಾಡಿದ್ದರು.
(C M Siddaramaiah Meets kannada Actor Shivarajkumar)