Atul Kulkarni; ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ

Atul-Kulkarni

ಆರು ವರ್ಷಗಳ ಹಿಂದೆ ಬಿಡುಗಡೆಯಾದ ಆಶು ಬೆದ್ರ ಅಭಿನಯದ ‘ಅಳಿದು ಉಳಿದವರು’ ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಅತುಲ್‍ ಕುಲಕರ್ಣಿ (Atul Kulkarni), ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ, ಇದೀಗ ವಿನೋದ್‍ ಪ್ರಭಾಕರ್‌ (Vinod Prabhakar) ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ.

‘ಆ ದಿನಗಳು’ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಲರಾಮನ ದಿನಗಳು’ ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಬಹುಭಾಷಾ ನಟ ಅತುಲ್ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡವು ಅತುಲ್‍ ಕುಲಕರ್ಣಿ ಅವರ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.

ಕೆ.ಎಂ. ಚೈತನ್ಯ ಅವರ ಮೊದಲ ನಿರ್ದೇಶನದ ‘ಆ ದಿನಗಳು’ ಚಿತ್ರದಲ್ಲಿ ಅತುಲ್‍ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈಗ ಪುನಃ ಈ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿದ್ದಾರೆ. ‘ಅದು ನೈಜ ಘಟನೆಗಳನ್ನಾಧರಿಸಿದ ಚಿತ್ರವಾಗಿತ್ತು. ಆದರೆ, ‘ಬಲರಾಮನ ದಿನಗಳು’ 80ರ ದಶಕದಲ್ಲಿ ನಡೆಯುವ ಒಂದು ಕಾಲ್ಪನಿಕ ಕಥೆಯಾಗಿದೆ. ಅವರ ಜೊತೆಗೆ ಕೆಲಸ ಮಾಡದೆ 15 ವರ್ಷಗಳಾಗಿತ್ತು. ಈ 15 ವರ್ಷಗಳಲ್ಲಿ ಅವರು ಸಾಕಷ್ಟು ಬೆಳೆದಿದ್ದಾರೆ ಮತ್ತ ಸಾಕಷ್ಟು ಮಾಗಿದ್ದಾರೆ. ಅದು ಅವರ ಕೆಲಸದಲ್ಲಿ ಗೊತ್ತಾಗುತ್ತದೆ. ಚೈತನ್ಯ ಬಹಳ ಚೆನ್ನಾಗಿ ಚಿತ್ರಕಥೆ ಮಾಡಿಕೊಂಡಿದ್ದಾರೆ. ಕಥೆ ಚೆನ್ನಾಗಿದ್ದರೆ, ನಿರ್ದೇಶಕರು ಪಳಗಿದ್ದರೆ, ಒಬ್ಬ ನಟನಿಗೆ ಕೆಲಸ ಮಾಡುವುದಕ್ಕೆ ಸುಲಭವಾಗುತ್ತಿದೆ. ಈ ಚಿತ್ರದಲ್ಲಿ ನನ್ನದು ಕಾಲ್ಪನಿಕ ಪಾತ್ರ. ಚೈತನ್ಯ ಜೊತೆಗೆ ಮಾತನಾಡಿ ಸಾಕಷ್ಟು ವಿಷಯಯ ತಿಳಿದುಕೊಂಡಿದ್ದೇನೆ. ಅದರಿಂದ ನಟನೆ ಸುಲಭವಾಗುತ್ತಿದೆ’ ಎನ್ನುತ್ತಾರೆ.

ಇನ್ನು, ಆರು ವರ್ಷಗಳಿಂದ ಕನ್ನಡದಲ್ಲಿ ನಟಿಸದಿರುವ ಬಗ್ಗೆ ಮಾತನಾಡುವ ಅವರು ‘ನಾನು ಕನ್ನಡ, ಹಿಂದಿ ಸೇರಿದಂತೆ ಎಂಟು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುತ್ತೇನೆ. ಎಲ್ಲಾ ಭಾಷೆಗಳಲ್ಲೂ ಕೆಲಸವಿದೆ. ನನಗೆ ಕಥೆ ಬಹಳ ಮುಖ್ಯ. ಜೊತೆಗೆ ಸಮಯವೂ ಮುಖ್ಯ. ಕಥೆ ಮತ್ತು ಸಮಯ ಹೊಂದಿದಲ್ಲಿ ನಾನು ಯಾವುದೇ ಭಾಷೆಯಲ್ಲಿ ಬೇಕಾದರೂ ನಟಿಸುವುದಕ್ಕೆ ಸಿದ್ಧ. ಈ ಚಿತ್ರಕ್ಕೂ ನನಗಾಗಿ ಬಹಳ ದಿನಗಳ ಕಾಲ ಕಾದಿದ್ದಾರೆ. ಈ ಚಿತ್ರತಂಡದ ಜೊತೆಗೆ ಕೆಲಸ ಮಾಡುವುದಕ್ಕೆ ಬಹಳ ಖುಷಿಯಾಗುತ್ತಿದೆ’ ಎನ್ನುತ್ತಾರೆ.

ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದು, ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸುತ್ತಿದ್ದಾರೆ.

(National Film Award-winning actor Atul Kulkarni is reuniting with renowned director K.M. Chaitanya for Balaramana Dinagalu. The film also marks the 25th film for Vinod Prabhakar.)

Leave a Reply

Your email address will not be published. Required fields are marked *