Naa Ninna Bidalaare; ಕಿರುತೆರೆಗೆ ಮರಳಿದ ನೀತಾ ಅಶೋಕ್‌; ಇದೇ 27 ರಿಂದ ಥ್ರಿಲ್ಲರ್‌ ಸಿರಿಯಲ್‌ ʻನಾ ನಿನ್ನ ಬಿಡಲಾರೆʼ

Attachment Details Na-Ninna-Bidalaare-Zee-Kannada-.png January 22, 2025

Naa Ninna Bidalaare Serial: ಥ್ರಿಲ್ಲರ್, ಹಾರರ್ ಮತ್ತು ಅಮ್ಮ-ಮಗಳ ಬಾಂಧವ್ಯದ ಎಲ್ಲಾ ವಯೋಮಾನದವರ ಮೆಚ್ಚಗೆಗೆ ಪಾತ್ರವಾಗುವಂತಹ ಧಾರಾವಾಹಿಯನ್ನು ಜೀ ಕನ್ನಡ ತರುತ್ತಿದೆ. ತಿಂಗಳ ಕೊನೆಯ ವಾರದಿಂದ (ಜನವರಿ 27) ‘ನಾ ನಿನ್ನ ಬಿಡಲಾರೆ’ ಎಂಬ ಶೀರ್ಷಿಕೆಯುಳ್ಳ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯ ಮೊದಲ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದಿದೆ.

ಶರತ್- ಅಂಬಿಕಾ ದಂಪತಿಗೆ ಮಗಳು ಹಿತ. ಈ ದಾಂಪತ್ಯದ ಮೇಲೆ ಮಾಯಾಳ ಕಣ್ಣು ಬಿಳುತ್ತದೆ, ಶರತ್‌ನನ್ನು ತನ್ನವನನ್ನಾಗಿಸಿಕೊಳ್ಳಬೇಕೆಂಬ ದುರಾಸೆಗೆ ಬಿದ್ದ ಮಾಯಾ ಅಂಬಿಕಾಳನ್ನು ಸಾಯಿಸುತ್ತಾಳೆ. ತನ್ನ ದಾರಿಗೆ ಹಿತ ಅಡ್ಡಿಯಾಗುತ್ತಾಳೆ ಎಂದು ಆಕೆಯನ್ನು ಕೊಲ್ಲಲು ಮಾಯಾ ಸಂಚು ರೂಪಿಸುತ್ತಾಳೆ. ತೀರಿ ಹೋದ ಅಂಬಿಕಾ ತನ್ನ ಮಗಳನ್ನು ಆಪತ್ತಿಂದ ಕಾಪಾಡುತ್ತಾಳೆ. ಅಲ್ಲದೇ, ಮಗುವಿಗೆ ಸೂಕ್ತವಾದ ತಾಯಿಯನ್ನೂ ಹುಡುಕುತ್ತಾಳೆ. ಸಧ್ಯ ಬಂದಿರುವ ಪ್ರೋಮೊ ಇಷ್ಟು ಕಥೆ ಹೇಳಿದೆ.

ಜನವರಿ 27 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30 ಮಿಸ್‌ ಮಾಡದೇ ನೋಡಿದರೆ ಅಮ್ಮ ಮಗಳನ್ನು ಹೇಗೆ ಕಾಪಾಡುತ್ತಾಳೆ? ಅನಾಥ ಮಗುವಿಗೆ ಮತ್ತೆ ಅಮ್ಮನ ಮಮತೆ ಸಿಗುತ್ತಾ? ಅಪ್ಪನ ಮೇಲಿನ ಮಗಳ ಮುನಿಸು ಕಡಿಮೆ ಆಗುತ್ತಾ? ಇವೆಲ್ಲದಕ್ಕೂ ಉತ್ತರ ಸಿಗಬಹುದು

ಅಂಬಿಕಾ ಆಗಿ ಕಿರುತೆರೆಗೆ ಮರಳಿದ ನೀತಾ ಅಶೋಕ್:-
ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ನೀತಾ ಅಶೋಕ್ (Neetha Ashok) ಅಂಬಿಕಾ ಪಾತ್ರ ಮಾಡುತ್ತಿದ್ದಾರೆ. ವಿಕ್ರಾಂತ್‌ ರೋಣ ಸಿನಿಮಾದ ನಂತರ ವಿವಾಹವಾದ ನಟಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನಾ ನಿನ್ನ ಬಿಡಲಾರೆ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪಾರು ಧಾರಾವಾಹಿಯ ಶರತ್ ಪದ್ಮನಾಭ್, ನೀತಾ ಅಶೋಕ್ ಅವರಿಗೆ ಜೋಡಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಬೇಬಿ ಮಹಿತಾ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟಿ ವೀಣಾ ಸುಂದರ್ (Veena Sundar), ರಿಷಿಕಾ, ರುಹಾನಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಫ್ತಿ, ಭೈರತಿ ರಣಗಲ್‌ನಲ್ಲಿ ಶಿವಣ್ಣನ ಜೊತೆ ಮಿಂಚಿದ ಹಿರಿಯ ನಟ, ರಂಗಭೂಮಿ ಕಲಾವಿದ ಬಾಬು ಹಿರಣ್ಣಯ್ಯ (Babu Hirannaiah) ಈ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದ್ದಾರೆ. ಜಯದುರ್ಗ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ಸತೀಶ್ ಕೃಷ್ಣ ಹೊತ್ತಿದ್ದಾರೆ.

39 thoughts on “Naa Ninna Bidalaare; ಕಿರುತೆರೆಗೆ ಮರಳಿದ ನೀತಾ ಅಶೋಕ್‌; ಇದೇ 27 ರಿಂದ ಥ್ರಿಲ್ಲರ್‌ ಸಿರಿಯಲ್‌ ʻನಾ ನಿನ್ನ ಬಿಡಲಾರೆʼ

Leave a Reply

Your email address will not be published. Required fields are marked *