Baraguru Ramachandrappa; 25 ವರ್ಷಗಳ ಹಿಂದಿನ ಕಾದಂಬರಿ ಸಿನಿಮಾ ಆಯ್ತು; ‘ಸ್ವಪ್ನ ಮಂಟಪ’ ಕಟ್ಟಿದ ಬರಗೂರು

Baraguru-Ramachandrappa-Swapna-Mantapa-Vijay-Raghavendra-Ranjani-Raghavan

ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಇತ್ತೀಚಿನ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ, ಪ್ರೇಕ್ಷಕರಿಗೆ ತಲುಪುತ್ತಿಲ್ಲ ಎಂಬ ಕೂಗಿದೆ. ಬಹುಶಃ ಸಾಕಷ್ಟು ಆಧುನಿಕ ಸವಾಲುಗಳ ನಡುವೆ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲವೇನೋ? ಈ ಸವಾಲುಗಳ ನಡುವೆಯೇ ಅವರು ಚಿತ್ರಗಳನ್ನು ಮಾಡುತ್ತಲೇ ಇದ್ದಾರೆ ಎನ್ನುವುದು ಖುಷಿಯ ವಿಚಾರ.

ಡಾ. ಬರಗೂರು ರಾಮಚಂದ್ರಪ್ಪ ಇದೀಗ ‘ಸ್ವಪ್ನ ಮಂಟಪ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ವಿಜಯ್ ರಾಘವೇಂದ್ರ, ರಂಜನಿ ರಾಘವನ್ ಮುಂತಾದವರು ನಟಿಸಿದ್ದಾರೆ. ಬಿಡುಗಡೆಗೆ ಸಿದ್ಧವಿರುವ ಈ ಚಿತ್ರದ ಕುರಿತು ಮಾತನಾಡುವ ‌ಡಾ. ಬರಗೂರು ರಾಮಚಂದ್ರಪ್ಪ, ‘25 ವರ್ಷಗಳ ಹಿಂದೆ ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಕಾದಂಬರಿ ‘ಸ್ವಪ್ನ ಮಂಟಪ’. ಇದೀಗ ಅದನ್ನು ಚಿತ್ರ ರೂಪದಲ್ಲಿ ಕಟ್ಟಿಕೊಡಲಾಗಿದೆ. ಚಾರಿತ್ರಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಪರಂಪರೆ ಉಳಿಸಬೇಕು ಎನ್ನುವ ಆಶಯವನ್ನು ಅಭಿವ್ಯಕ್ತಿ ಪಡಿಸುವ ಚಿತ್ರ ಇದು. ನಾಯಕ ಚರಿತ್ರೆಯ ಬಗೆಗೆ ಆಸಕ್ತಿ ಇರುವವನು. ನಾಯಕಿ ಸಮಾಜ ವಿಜ್ಞಾನದ ಕುರಿತು ಕುತೂಹಲ ಉಳ್ಳವಳು. ಚಾರಿತ್ರಿಕ ಮತ್ತು ಸಾಮಾಜಿಕ ಪ್ರಜ್ಞೆ ಎರಡೂ ಸೇರಿ ಸಮಾಜಮುಖಿ , ಇತಿಹಾಸ ಪ್ರಜ್ಞೆ ಇರಬೇಕು ಎನ್ನುವ ಜೊತೆ ಜೊತೆಗೆ ಸ್ಮಾರಕ ರಕ್ಷಣೆ ಮಾಡಬೇಕು ಎನ್ನುವ ಆದರ್ಶ ಮತ್ತು ಆಶಯ ಹೊಂದಿರುವ ಚಿತ್ರವಿದು’ ಎಂದರು.

ಇದೊಂದು ಕಾಲ್ಪನಿಕ ವಾಸ್ತವತೆಯ ಮೇಲೆ ಕಟ್ಟಿದ ಚಿತ್ರ ಎನ್ನುವ ಅವರು, ‘ಇಲ್ಲೊಂದು ರಾಜನ ಕಥೆಯೂ ಇದೆ. ’ಸ್ವಪ್ನ‌ ಮಂಟಪ’ದಲ್ಲಿ ಪ್ರವೇಶ ಮಾಡಿದರೆ ಸಾಕು, ಕನಸುಗಳು ಅನಾವರಣಗೊಳ್ಳುತ್ತವೆ. ಇಂತಹ ವಾತಾವರಣವಿರುವ ಪ್ರದೇಶವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾದಾಗ ನಾಯಕ, ನಾಯಕಿ ಜನರಲ್ಲಿ ಜಾಗೃತಿ ಮೂಡಿಸಿ ಸ್ಮಾರಕ ರಕ್ಷಣೆ ಮಾಡುವ ಕಥೆ ಇದು. ಇದು ನನ್ನ ನಿರ್ದೇಶನದ 24ನೇ ಚಿತ್ರ’ ಎಂದರು.

ನಾಯಕಿ ರಂಜನಿ ರಾಘವನ್ ಮಾತನಾಡಿ, ‘ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡಿದ್ದೇನೆ. ಒಂದು ರಾಣಿಯ ಪಾತ್ರ. ಮತ್ತೊಂದು ಶಿಕ್ಷಕಿ ಪಾತ್ರ. ಚಿತ್ರದಲ್ಲಿ ನಟಿಸಿದ್ದು, ಅದರಲ್ಲಿಯೂ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದು ಕಲಿಕೆಗೆ ಸಿಕ್ಕ ಅವಕಾಶ’ ಎಂದು ಹೇಳಿದರು.

ಈ ಮಧ್ಯೆ, ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ ಪಾಟೀಲ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.‌ ಶಮಿತಾ ಮಲ್ನಾಡ್, ‘ಸ್ವಪ್ನ ಮಂಟಪ’ಕ್ಕೆ ಸಂಗೀತ ನೀಡಿದ್ದಾರೆ. ಸುಂದರ್‍ ರಾಜ್‍, ಅಂಬರೀಶ್‍ ಸಾರಂಗಿ, ರಜನಿ ಗೌಡ ಮುಂತಾದವರು ನಟಿಸಿರುವ ಈ ಚಿತ್ರವನ್ನು ಮೈಸೂರಿನ ಎ.ಎಂ.ಬಾಬು ನಿರ್ಮಿಸಿದ್ದಾರೆ.

(National-Award winning writer and director, Baraguru Ramachandrappa, has wrapped up the shooting of his next Kannada film titled Swapna Mantapa. The film is based on his novel by the same title. Swapna Mantapa starring Vijay Raghavendra and Ranjani Raghavan.)

Leave a Reply

Your email address will not be published. Required fields are marked *