Shamanth Gowda; ಹೀರೋ ಆದ ‘ಬ್ರೋ ಗೌಡ’ ಶಮಂತ್; ಕನ್ನಡದ ಮೊದಲ Zombie ಚಿತ್ರಕ್ಕೆ ಹೀರೋ

Bro-Gowda-Zombie

‘ಬಿಗ್‍ ಬಾಸ್‍ – ಸೀಸನ್‍ 8’ರ (Bigg Boss kannada 8 season contestant) ಖ್ಯಾತಿಯ ಶಮಂತ್‍ (Shamanth Gowda) ಅಲಿಯಾಸ್‍ ಬ್ರೋ ಗೌಡ (Bro Gowda), ಇದೀಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಶಮಂತ್ ಅಭಿನಯದ ಹೊಸ ಚಿತ್ರದ ಅಧಿಕೃತ ಘೋಷಣೆ ಸಂಕ್ರಾಂತಿ ಹಬ್ಬದಂದು ಆಗಿದ್ದು, ಈ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ, ಹೆಸರು ಬಹಿರಂಗಪಡಿಸದ ಈ ಚಿತ್ರಕ್ಕೆ ಆನಂದ್‍ ರಾಜ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅನಿರುದ್ಧ್ ಅಭಿನಯದ ‘ಚೆಫ್‍ ಚಿದಂಬರ’ ಮತ್ತು ವಿಜಯ್‍ ರಾಘವೇಂದ್ರ ಅಭಿನಯದ ‘ರಾಘು’ ಚಿತ್ರಗಳನ್ನು ಆನಂದ್‍ ರಾಜ್‍ ನಿರ್ದೇಶನ ಮಾಡಿದ್ದರು. ಇದೀಗ ಅವರು ಕನ್ನಡದ ಮೊದಲ Zombie ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಶಮಂತ್‍ ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ಬ್ರೋ ಗೌಡ ಬರೀ ನಾಯಕನಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಈ ಚಿತ್ರವನ್ನು ಅವರು ಬ್ರೋ ಮೀಡಿಯಾ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಸನ್‍ರೈಸ್‍ ಸಿನಿಮಾಸ್‍ ಎಂಬ ಸಂಸ್ಥೆ ಸಹ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದೆ. ಇದೊಂದು ಹಾರರ್‍ ಚಿತ್ರವಾಗಿದ್ದು, ಉದಯ್‍ ಲೀಲಾ ಅವರ ಛಾಯಾಗ್ರಹಣ ಮತ್ತು ವಿಜೇತ್‍ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಏಪ್ರಿಲ್‍ 2025ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದೆ.

Zombie ಚಿತ್ರವಲ್ಲದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ಬಾರಮ್ಮ’ (Lakshmi Baramma Serial) ಧಾರಾವಾಹಿಯಲ್ಲಿ ವೈಷ್ಣವ್ ಎಂಬ ಪಾತ್ರದಲ್ಲಿ ಬ್ರೋ ಗೌಡ ನಟಿಸುತ್ತಿದ್ದು, ಈ ಪಾತ್ರ ಮತ್ತು ಧಾರಾವಾಹಿ ಎರಡೂ ಸಾಕಷ್ಟು ಜನಪ್ರಿಯವಾಗಿವೆ.

(Bigg Boss kannada 8 season contestant, Lakshmi Baramma Serial Hero Shamanth Gowda Acting And Producing New Kannada Zombie Film)

Leave a Reply

Your email address will not be published. Required fields are marked *