ಕಾಂತಾರ ಅಧ್ಯಾಯ-1 ಟ್ರೇಲರ್‌ ಔಟ್‌ :ವಿಭಿನ್ನ ಲುಕ್‌ನಲ್ಲಿ Rishabh Shetty

ರಿಷಬ್‌ ಶೆಟ್ಟಿ ನಿರ್ದೇಶಿಸಿರುವ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಮೇರೆಗೆ ಕಾಂತಾರ ಅಧ್ಯಾಯ-1ರ ಸಿನಿಮಾವು ಬಹುನಿರೀಕ್ಷೆಯನ್ನುಂಟುಮಾಡಿದೆ.

ಈ ಹಿಂದೆ ದೈವ ನರ್ತಕ ಪಾತ್ರದಲ್ಲಿ ಜನರಿಗೆ ನಡುಕವನ್ನು ಸೃಷ್ಟಿಸಿ ರಿಷಬ್‌ ಶೆಟ್ರು (Rishabh Shetty) , ಈಗ ಕಾಂತಾರ ಅಧ್ಯಾಯ-1 ರಲ್ಲಿ ಬೈರಾಗಿಯಂತೆ ಹಣೆಗೆ ವಿಭೂತಿ ಮತ್ತು ಶಾಂತ ಸ್ವರೂಪ ,ಕಾರ್‌ಗತ್ತಲಲ್ಲಿ ಮುಖದ ಹೊಳಪು, ಕೋಪ ಮತ್ತು ದ್ವೇಷ,ತಲೆಯ ಭಾಗದಿಂದ ಸಣ್ಣಜಲಪಾತದಂತೆ ಹರಿದ ರಕ್ತ , ರಿಷಬ್‌ ಶೆಟ್ಟಿ ಅವರ ಪಾತ್ರ ನಿಜಕ್ಕೂ ಬೆಚ್ಚಿಬೆರಗಾಗುವಂತಿದೆ. ಈ ಸಿನಿಮಾದಲ್ಲಿ ಸುಮಾರು ವ್ಹಾವ್‌ ದೃಶ್ಯಗಳು ಸಹ ಅಡಕವಾಗಿದೆ .

ಈ ಸಿನಿಮಾವು ಒಂದು ರೀತಿಯಲ್ಲಿ ಜಾನಪದ ಶೈಲಿಯನ್ನು ಒಳಗೊಂಡಿದ್ದು, ಹಾಗೂ ಕದಂಬರ ದಂತಕತೆಯನ್ನು ತೋರಿಸಲಾಗಿದೆ.

ಈ ಕತೆಯಲ್ಲಿ ರಿಷಬ್‌ಶೆಟ್ಟಿಗೆ ಜೋಡಿಯಾದ ರುಕ್ಮಿಣಿ ವಸಂತ್‌, ತಮ್ಮ ವಿಶೇಷ ಸೌಂದರ್ಯದಲ್ಲಿ ಜನಸಮೂಹದೊಂದಿಗೆ ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದಾರೆ. ಕಾಡಿನ ಜನರ ನಂಬಿಕೆ ಮತ್ತು ಆಚರಣೆ ,ಹಾಗೂ ಜೀವನದ ಹೋರಾಟವನ್ನ ಇಡೀ ಸಿನಿಮಾದಲ್ಲಿ ತೋರಿಸಿದ್ದಾರೆ. ಕಾಂತಾರ ಅದ್ಯಾಯ-1 ರ ಟ್ರೇಲರ್‌ನ ತುಣುಕಿನಲ್ಲಿ ನೋಡ ಬಹುದಾಗಿದೆ.

ಧರ್ಮದ ಪರಾಗದಲ್ಲಿರುವ ಈಶ್ವರ ದೇವರ ಗಣಗಳು ಕಾಪಾಡುವುದಕ್ಕೆ , ಈ ಪುಣ್ಯಕ್ಷೇತ್ರದ ಮಣ್ಣಿನಲ್ಲಿ ಉದ್ಭವಿಸುತ್ತದೆ ಇದರ ಹಿನ್ನಲೆ ರಿಷಬ್‌ ಶೆಟ್ಟಿ ಅವರ ಧ್ವನಿಯಾಗಿದೆ.ಹಾಗೂ ಜನರ ಜೀವನ , ಬದುಕೆಗೆ ವ್ಯಾಪಾರ ನಡಿಗೆ ಈ ನಡುವೆ ರಾಜನ ಆಳ್ವಿಕೆ ಮತ್ತು ದಬ್ಬಾಳಿಕೆ ಈ ಎಲ್ಲವನ್ನ ಟ್ರೇಲರ್‌ನಲ್ಲಿ ಕಾಣಿಸಿದೆ. ಇನ್ನು ಈ ಸಿನಿಮಾದಲ್ಲಿ ಬಾಲಿವುಡ್‌ ನಟನು ರಾಜನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್‌2 ಗ್ರ್ಯಾಂಡ್‌ ರಿಲೀಸ್‌
ಕಾಂತಾರ ಅಧ್ಯಾಯ-1 ಚಿತ್ರವು ಮುಂದಿನ ತಿಂಗಳು ಅ.2 ರಂದು ತೆರೆಕಾಣಲಿದೆ. ಕಾಂತಾರ ಅಧ್ಯಾಯ-1 ರಲ್ಲಿ ಹಲವು ಅಡೆತಡೆಗಳು ಕಂಡರು ಸಹ , ಸಿನಿಮಾ ಸಂಪೂರ್ಣವಾಗಿ ಮುಗಿದು ತೆರೆಗೆ ಕಾಣಲು ಸಿದ್ಧವಾಗಿದೆ.

ರಿಷಬ್‌ ಶೆಟ್ಟಿಯ ಈ ರಗಡ್‌ ಲುಕ್ ಗೆ ಪ್ರೇಕ್ಷಕರು ಬೆಚ್ಚಿಬೆರಗಾಗಿದ್ದು, ಇನ್ನು ಸಂಪೂರ್ಣ ಸಿನಿಮಾಗಾಗಿ ವೀಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.


ಇದನ್ನೂ ಓದಿ:-


ಹೆಚ್ಚಿನ ಓದಿಗಾಗಿ :-


22 thoughts on “ಕಾಂತಾರ ಅಧ್ಯಾಯ-1 ಟ್ರೇಲರ್‌ ಔಟ್‌ :ವಿಭಿನ್ನ ಲುಕ್‌ನಲ್ಲಿ Rishabh Shetty

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!