ಯುವ ಪ್ರತಿಭೆಗಳ “ಆಸ್ಟಿನ್ ನ ಮಹನ್ಮೌನ”(Austin Na Mahan Mouna) ಚಿತ್ರದ ಹಾಡುಗಳ ಬಿಡುಗಡೆ : ಸೆಪ್ಟಂಬರ್ 5 ಕ್ಕೆ ರಿಲೀಸ್

ಬೆಳ್ಳಿ ಪರದೆ ಮೇಲೆ ಮತ್ತೊಂದು ಯುವ ಪಡೆಗಳ ತಂದ ವಿಭಿನ್ನ ಶೀಷಿಕೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ.
ಯುವ ಪ್ರತಿಭೆ ವಿನಯ್ ಕುಮಾರ್ ವೈದ್ಯನಾಥನ್ ನಟಿಸಿ , ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿರುವಂತಹ ” ಆಸ್ಟಿನ್ ನ ಮಹನ್ಮೌನ ” (Austin Na Mahan Mouna) ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಮಲ್ಲೇಶ್ವರಂ ನ ಎಸ್. ಆರ್. ವಿ ಪ್ರೀವ್ಯೂ ಥಿಯೇಟರ್ ನಲ್ಲಿ ಯೋಜನೆ ಮಾಡಿತ್ತು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ , ನಿರ್ದೇಶಕ ಹಾಗೂ ನಿರ್ಮಾಪಕ ವಿನಯ್ ಕುಮಾರ್ ವೈದ್ಯನಾಥನ್ ಮಾತನಾಡುತ್ತಾ ನಾನು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಗಿಸಿದ ನಂತರ ಚಿತ್ರರಂಗದ ಬಗೆ ಆಸಕ್ತಿ ಇದ್ದಿದ್ರಿಂದ , ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ, ಹಾಗೆಯೇ ಪುನೀತ್ ರಾಜಕುಮಾರ್ ಚಿತ್ರದಲ್ಲೂ ಕೆಲಸ ಮಾಡಿದ್ದೆ. ನಂತರ ಕಿರು ಚಿತ್ರಗಳನ್ನ ನಿರ್ದೇಶನ ಮಾಡುತ್ತಾ ತಾಂತ್ರಿಕ ವಿಭಾಗದಲ್ಲಿ ಹೆಚ್ಚು ಅನುಭವವನ್ನು ಪಡೆದು ಕೊಂಡಿದ್ದೇನೆ. ಸುಮಾರು 13 ವರ್ಷಗಳ ನಂತರ ನನ್ನ ಕನಸು ಈಗ ನನಸಾಗುತ್ತಿದೆ. ಈ ಚಿತ್ರದಲ್ಲಿ ನಾನೇ ನಟಿಸಿ , ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡಿದ್ದೇನೆ. ಈ ಚಿತ್ರದ ಟೈಟಲ್ ಕಥೆಗೆ ಸೂಕ್ತವಾಗಿದ್ದು , ಹಾಗಾಗಿ ಅದನ್ನೇ ಇಟ್ಟಿದ್ದೇನೆ. ಇಲ್ಲಿ ಯಾವುದೇ ಜಾತಿ , ಧರ್ಮದ ಕಥೆ ಒಳಗೊಂಡಿಲ್ಲ , ಇದೊಂದು ಪ್ಯೂರ್ ಎಮೋಷನಲ್ , ಲವ್ , ಥ್ರಿಲ್ಲಿಂಗ್ ಕಥೆಯನ್ನು ಒಳಗೊಂಡಿದೆ. ಆಸ್ಟಿನ್ ಎನ್ನುವುದು ನಾಯಕನ ಪಾತ್ರದ ಹೆಸರು, ಈ ಚಿತ್ರದಲ್ಲಿ ನನ್ನದು ಎರಡು ಶೇಡ್ ಗಳಲ್ಲಿ ಬರುವಂತಹ ಪಾತ್ರ. ಅದು ಯಾಕೆ ಏನು ಎಂಬುದನ್ನು ನೀವು ತಿಳಿಯ ಮೇಲೆ ನೋಡಬೇಕು. ಈ ಚಿತ್ರದಲ್ಲಿ ಇರುವ ಎಲ್ಲಾ ಪಾತ್ರಗಳು ಕ್ರಿಶ್ಚಿಯನ್ ಧರ್ಮದಾಗಿದ್ದು , 90ರ ಕಾಲಘಟ್ಟದಲ್ಲಿ ನಡೆಯುವ ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು ಒಳಗೊಂಡಿದೆ.
2023 ರಲ್ಲಿ ಆರಂಭಗೊಂಡ ಈ ಚಿತ್ರ ಮೈಸೂರು , ಹೊನ್ನಾವರ ಹಾಗೂ ಚಿಕ್ಕಮಗಳೂರು ಸೇರಿದಂತೆ ಸುಮಾರು 23 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡದಿದ್ದೇವೆ. ನಮ್ಮ ಚಿತ್ರ ಸೆಪ್ಟಂಬರ್ 5ರಂದು ರಾಜ್ಯದ್ಯಂತ ಕೆ .ಆರ್. ಜೆ ಫಿಲ್ಮ್ಸ್ ಮೂಲಕ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ. ನನ್ನ ಬಹುದಿನದ ಶ್ರಮದ ಚಿತ್ರ ಇದಾಗಿದ್ದು , ನಿಮ್ಮೆಲ್ಲರ ಪ್ರೀತಿ , ಸಹಕಾರ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.

ಈ ಚಿತ್ರದ ನಾಯಕಿ ರಿಷಾ ಗೌಡ ಮಾತನಾಡುತ್ತಾ ನಾನು ಮೂಲತಃ ಮೈಸೂರಿನವಳು , ಕಲಾ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡಿಕೊಂಡು ಬಂದಿದ್ದೇನೆ. ಇದು ನನ್ನ ಮೂರನೇ ಚಿತ್ರ. ಹೀರೋಯಿನ್ ಗಳನ್ನು ಗ್ಲಾಮರಸ್ ಪಾತ್ರಗಳಿಗೆ ಹೆಚ್ಚು ಬಳಸಿಕೊಳ್ಳುತ್ತಾರೆ, ಆದರೆ ಈ ಚಿತ್ರದಲ್ಲಿ ನಿರ್ದೇಶಕರು ನನಗೆ ಒಂದು ಉತ್ತಮ ಪಾತ್ರ ನೀಡಿದ್ದು , ಹೋಮ್ಲಿ ಹುಡುಗಿಯಾಗಿ ಅಭಿನಯಿಸಿದ್ದೇನೆ. ಚಿತ್ರದ ಕಂಟೆಂಟ್ ನೋಡಿ ಒಪ್ಪಿಕೊಂಡಿದ್ದೆ. ಚಿತ್ರ ಸೊಗಸಾಗಿ ಬಂದಿದೆ , ನಮ್ಮನ್ನ ಹರಸಿ , ಬೆಳೆಸಿ ಎಂದರು.
ಚಿತ್ರದ ಇನ್ನೋರ್ವ ನಾಯಕಿ ಮೈಸೂರಿನ ಬೆಡಗಿ ಪ್ರಕೃತಿ ಪ್ರಸಾದ್ ಮಾತನಾಡುತ್ತ ನಾನು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಚಿತ್ರವಾಗಿದ್ದು , ಡಾಕ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನನ್ನ ಪಾತ್ರವೂ ಬಹಳ ವಿಭಿನ್ನವಾಗಿದೆ. ಹಾಡುಗಳು ನಿಮಗೆ ಹೇಗೆ ಅನ್ನಿಸಿತು , ನಿರ್ದೇಶಕ ಬಹಳಷ್ಟು ಶ್ರಮ ಪಟ್ಟಿದ್ದಾರೆ. ನಮಗೆ ಬೆಂಬಲವನ್ನ ನೀಡಿ ಎಂದು ಕೇಳಿಕೊಂಡರು.
ಈ ಚಿತ್ರದ ಯುವ ಸಂಗೀತ ನಿರ್ದೇಶಕ ವಿಶ್ವಿ ಮಾತನಾಡುತ್ತಾ ಇದು ನನ್ನ ಮೊದಲ ಸಂಗೀತ ನಿರ್ದೇಶನದ ಚಿತ್ರ. ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದೆ. ಒಂದು ಹಾಡು ಲಾಟಿನ್ ಭಾಷೆಯಲ್ಲಿ ಮೂಡಿದೆ. ಈ ಚಿತ್ರದ ರೀ ರೆಕಾರ್ಡಿಂಗ್ ಕೆಲಸ ಬಹಳ ಉತ್ತಮವಾಗಿ ಮೂಡಿ ಬಂದಿದೆ. ನಿಮ್ಮ ಸಪೋರ್ಟ್ ನಮ್ಮ ಟೀಮ್ ಮೇಲೆ ಇರಲಿ ಎಂದರು. ಇನ್ನು ಈ ಚಿತ್ರದಲ್ಲಿ
ಬಾಲರಾಜವಾಡಿ , ರಘು ರಾಮನಕೊಪ್ಪ , ಜಗಪ್ಪ , ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಒಂದು ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ , ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ. AVV ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳನ್ನು ಎಂ. ಆರ್. ಟಿ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದೆ.
Interesting take on bankroll management! Seeing platforms like kkkjili slot download adapt to local payment methods (GCash, PayMaya) is smart for accessibility. Key to long-term success, right? Solid article!
ABC news — ваш надежный источник свежих новостей, аналитики и экспертных мнений об Украине и мире. Мы публикуем оперативные материалы о событиях, экономике, обществе, культуре и здоровье, чтобы вы всегда были на шаг впереди. В центре внимания — качество, скорость и проверенные факты. Узнайте больше на https://abcua.org/ и подпишитесь, чтобы не пропускать важное. ABC news — информируем, вдохновляем, помогаем понимать тенденции дня. Присоединяйтесь сегодня и будьте в курсе главного!
Fastidious response in return of this query with firm arguments and describing all concerning that.
I don’t know whether it’s just me or if perhaps everyone else encountering problems with your blog.
It appears like some of the text within your content are running off the screen. Can somebody else please comment and let me know if
this is happening to them as well? This could be a issue with
my browser because I’ve had this happen before. Thank you