Dr Vishnuvardhan ಸ್ಮಾರಕ ಅಭಿಮಾನಿಗಳಿಂದಲೇ ಬೆಂಗಳೂರಿನಲ್ಲಿ ; ಸೆ. 18ಕ್ಕೆ ಅಡಿಗಲ್ಲು

ಅಭಿಮಾನ್‍ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್‍(Dr Vishnuvardhan) ಅವರ ಪುಣ್ಯಭೂಮಿಯನ್ನು ಇತ್ತೀಚೆಗೆ ತೆರವುಗೊಳಿಸಿದ್ದು ಗೊತ್ತೇ ಇದೆ. ಒಂದು ಕಡೆ ಆ ಜಾಗವನ್ನು ಪುನಃ ಪಡೆಯುವುದಕ್ಕೆ ಹೋರಾಟ ಪ್ರಾರಂಭವಾಗುವುದರ ಜೊತೆಗೆ, ಬೆಂಗಳೂರಿನಲ್ಲಿ ಇನ್ನೊಂದು ಸ್ಮಾರಕ ಮಾಡುವುದಕ್ಕೆ ವಿಷ್ಣುವರ್ಧನ್‍ ಅಭಿಮಾನಿಗಳು ಮುಂದಾಗಿದ್ದಾರೆ.

ಅಭಿಮಾನ್‍ ಸ್ಟುಡಿಯೋದಲ್ಲಿ ಗೊಂದಲ ಹೆಚ್ಚಾದಂತೆ ವಿಷ್ಣುವರ್ಧನ್‍ ಅವರ ಕುಟುಂಬದವರು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಮೈಸೂರಿನಲ್ಲಿ ಜಾಗ ಪಡೆದು, ಅಲ್ಲಿ ಈಗಾಗಲೇ ಸ್ಮಾರಕ ನಿರ್ಮಾಣ ಮಾಡಿದ್ದಾಗಿದೆ. ವಿಷ್ಣುವರ್ಧನ್‍ ಅವರ ಸ್ಮಾರಕಕ್ಕಾಗಿ ಮೈಸೂರಿನವಿರಗೂ ಹೋಗುವುದು ಕಷ್ಟ ಎನ್ನುತ್ತಿದ್ದವರಿಗೆ, ಸ್ಮಾರಕಕ್ಕಾಗಿ ಬೆಂಗಳೂರಿನಲ್ಲೇ ಸುದೀಪ್‍ ಜಾಗ ಖರೀದಿ ಮಾಡಿದ್ದಾರೆ.

ಪುಣ್ಯಭೂಮಿಯನ್ನು ನೆಲಸಮ ಮಾಡಿದ ನಂತರ ಆ ಭೂಮಿ ಖರೀದಿ ಮಾಡುವುದಕ್ಕೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ತಾನು ಸಿದ್ಧ ಎಂದು ನಟ ಸುದೀಪ್‍ ಹೇಳಿದ್ದರು. ಒಂದು ಕಡೆ ಆ ಜಾಗಕ್ಕೆ ಹೋರಾಟ ನಡೆಸುತ್ತಲೇ, ಈಗ ಕೆಂಗೇರಿ ಹತ್ತಿರ ಅರ್ಧ ಎಕರೆ ಜಾಗ ಖರೀದಿ ಮಾಡಿ, ಅಲ್ಲಿ ಸ್ಮಾರಕ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ.

ಈ ಸ್ಮಾರಕ ಜಾಗದಲ್ಲಿ 25 ಅಡಿಗಳ ವಿಷ್ಣುವರ್ಧನ್‍ ಅವರ ದೊಡ್ಡ ಪ್ರತಿಮೆ ಜೊತೆಗೆ ಗ್ರಂಥಾಲಯ ಸಹ ಇರಲಿದೆಯಂತೆ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬ. ಅಂದೇ ವಿಷ್ಣುವರ್ಧನ್‍ ಅವರ ಸ್ಮಾರಕದ ಬ್ಲೂಪ್ರಿಂಟ್‍ ಅನ್ನು ಸುದೀಪ್‍ ಅನಾವರಣ ಮಾಡಲಿದ್ದಾರೆ. ಆ ನಂತರ ವಿಷ್ಣುವರ್ಧನ್‍ ಅವರ ಹುಟ್ಟುಹಬ್ಬದ ದಿನ ಅಂದರೆ ಸೆ. 18ರಂದು ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು.

ಇನ್ನೊಂದು ಕಡೆ ಅಭಿಮಾನ್‍ ಸ್ಟುಡಿಯೋದಲ್ಲಿ 10 ಗುಂಟೆ ಜಾಗವಾದರೂ ಬೇಕು ಎಂದು ನಿರ್ಮಾಪಕ ಮತ್ತು ವಿಷ್ಣುವರ್ಧನ್‍ ಅವರ ಆಪ್ತ ಕೆ. ಮಂಜು ಕೇಳಿದ್ದಾರೆ. ಈ ಕುರಿತು ಮಂಗಳವಾರ ಮಾತನಾಡಿರುವ ಅವರು, ‘ಡಾ. ವಿಷ್ಣು ಸಮಾಧಿ ಜಾಗ ನಮಗೆ ಬೇಕೇ ಬೇಕು. ಕಾನೂನು ರೀತಿಯಲ್ಲಿ ಆ ಜಾಗಕ್ಕೆ ಹೋರಾಟ ಮಾಡುತ್ತೇವೆ. ಸರಕಾರದ ಗಮನಕ್ಕೆ ತಂದು ನಾವು ಹೋರಾಟ ಮಾಡುತ್ತೇವೆ. ಈ ಸಂಬಂಧ ಬಾಲಣ್ಣ ಅವರ ಮೊಮ್ಮಗ ಕಾರ್ತಿಕ್ ಅವರನ್ನ ಭೇಟಿ ಆಗಿ ಮಾತಾಡಿದ್ದೇನೆ. ನಮಗೆ ಆ 10 ಗುಂಟೆ ಜಾಗ ಬೇಕೇಬೇಕು ಅಂತ ಮನವಿ ಮಾಡಿದ್ದೇನೆ. ಕಾರ್ತಿಕ್‍ ಒಂದು ವಾರ ಸಮಯ ಕೇಳಿದ್ದಾರೆ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ:

  1. Обращайтесь к нам снова https://bio.site/kkediogi конспирация достойная, товар оказался отличным, кроли заценили. будем еще работать


Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ