ತಮಿಳು ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ರಜನಿಕಾಂತ್ ‘Coolie’

ರಜನಿಕಾಂತ್ ಅಭಿನಯದ ‘ಕೂಲಿ’ (Coolie) ಹೊಸ ದಾಖಲೆಯನ್ನೇ ಬರೆದಿದೆ. ಮೊದಲನೆಯದಾಗಿ, ಜಗತ್ತಿನಾದ್ಯಂತ ಮೊದಲ ದಿನ ಸುಮಾರು 6.8 ಲಕ್ಷ ಟಿಕೆಟ್‍ಗಳು ಮಾರಾಟವಾಗಿದ್ದವು. ಅಡ್ವಾನ್ಸ್ ಬುಕ್ಕಿಂಗ್‍ನಿಂದಲೇ 50 ಕೋಟಿ ರೂ. ಗಳಿಕೆಯಾಗಿದೆ ಎಂದು ಹೇಳಲಾಗಿತ್ತು. ಇದಕ್ಕೂ ಮೊದಲು ಯಾವ ಚಿತ್ರವೂ ಇಂಥದ್ದೊಂದು ದಾಖಲೆ ಮಾಡಿರಲಿಲ್ಲ.
ಈಗ ಚಿತ್ರವು ಮೊದಲ ದಿನ 151 ಕೋಟಿ ರೂ. ಗಳಿಕೆ ಮಾಡುವ ಹೊಸ ದಾಖಲೆ ಮಾಡಿದೆ. ಚಿತ್ರವು ಮೊದಲ ದಿನವೇ ಚಿತ್ರದ ಗಳಿಕೆ 100 ಕೋಟಿ ರೂ. ಮೀರಬಹುದು ಎಂದು ಮೊದಲೇ ಅಂದಾಜಿಸಲಾಗಿತ್ತು. ಅದರಂತೆ ಮೊದಲ ದಿನ ಜಾಗತಿಕವಾಗಿ 151 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರ ನಿರ್ಮಿಸಿರುವ ಸನ್ ಪಿಕ್ಚರ್ಸ್ ಸಂಸ್ಥೆಯೇ ಅಧಿಕೃತವಾಗಿ ಘೋಷಿಸಿದೆ.
ಇದಕ್ಕೂ ಮೊದಲು ವಿಜಯ್ ಅಭಿನಯದ ‘ಲಿಯೋ’ ಚಿತ್ರವು ಜಾಗತಿಕವಾಆಗಿ 142 ಕೋಟಿ ರೂ. ಗಳಿಕೆ ಮಾಡುವ ಮೂಲಕ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಆ ದಾಖಲೆಯನ್ನು ‘ಕೂಲಿ’ ಮುರಿದಿದೆ. ವಿಶೇಷವೆಂದರೆ, ಎರಡೂ ಚಿತ್ರಗಳನ್ನು ನಿರ್ದೇಶಿಸಿರುವುದು ಲೋಕೇಶ್ ಕನಕರಾಜ್.
ಚಿತ್ರವು ಭಾರತದಲ್ಲಿ ಸುಮಾರು 65 ಕೋಟಿ ರೂ.ಗಳಿಗೆ ಮಾಡಿದೆ ಎಂದು ಹೇಳಲಾಗುತ್ತಿದೆ. ಮಿಕ್ಕಂತೆ ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮುಂತಾದ ಬೇರೆ ದೇಶಗಳಲ್ಲೂ ಒಳ್ಳೆಯ ಗಳಿಕೆ ಮಾಡಿದೆ. ಇದಕ್ಕೂ ಮೊದಲು ವಿಜಯ್ ಅಭಿನಯದ ‘ಲಿಯೋ’ ಚಿತ್ರವು ಮೊದಲ ದಿನ ಸುಮಾರು 145 ಕೋಟಿ ರೂ. ಗಳಿಕೆ ಮಾಡಿತ್ತು. ಈಗ ಆ ದಾಖಲೆಯನ್ನು ‘ಕೂಲಿ’ ಮುರಿದಿದ್ದಾನೆ.
‘ಕೂಲಿ’ ಚಿತ್ರದಲ್ಲಿ ರಜನಿಕಾಂತ್, ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್, ಶ್ರುತಿ ಹಾಸನ್, ಶೌಭಿನ್ ಶಾಹಿರ್ ಮುಂತಾದವರು ನಟಿಸಿದ್ದು, ಲೋಕೇಶ್ ಕನಕರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು, ಸನ್ ಪಿಕ್ಚರ್ಸ್ನ ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗಾಗಿ :-
РґСЂСѓР·СЊСЏ Р° товар что закончился? месяц пишу, Рё РіРѕРІРѕСЂСЏС‚ РІСЃРµ пусто;( http://www.pageorama.com/?p=obrrrjacoib РђРњ 2233 читал 1 Рє 30 делается, неужеле…
Very great post. I simply stumbled upon your weblog and wanted to say that I’ve truly loved browsing your blog…
I was recommended this web site by my cousin. I’m not sure whether this post is written by him as…
888starz скачать http://procurement.gov.ck/wordpress/?p=14464
Casinos are obviously listening to what players want-and if what we see in 2025 is anything to go by, the…