ಈ ಚಿತ್ರದಲ್ಲಿರುವುದು ಎರಡೇ ಪಾತ್ರಗಳು; ಒಂದು ಬೆಟ್ಟದ ಕಥೆ

ಕೆಲವು ವರ್ಷಗಳ ಹಿಂದೆ ಶ್ರೀನಗರ ಕಿಟ್ಟಿ ಅಭಿನಯದಲ್ಲಿ ‘ಬೈ2’ ಎಂಬ ಚಿತ್ರ ಬಂದಿತ್ತು. ಈ ಚಿತ್ರದಲ್ಲಿದ್ದುದು ಎರಡೇ ಪಾತ್ರಗಳು. ನವೀನ್ ಕೃಷ್ಣ ಅಭಿನಯದ ‘ಆ್ಯಕ್ಟರ್’ ಚಿತ್ರದಲ್ಲೂ ಕೇವಲ ಎರಡೇ ಪಾತ್ರಗಳಿದ್ದವು. ಈಗ ಹೊಸಬರ ತಂಡವೊಂದು ಸದ್ದಿಲ್ಲದೆ ‘ಸಾರಂಗಿ’ ಎಂಬ ಹೊಸ ಚಿತ್ರವನ್ನು ಮಾಡಿ ಮುಗಿಸಿದೆ. ಈ ಚಿತ್ರದಲ್ಲೂ ಕೇವಲ ಎರಡೇ ಪಾತ್ರಗಳಿರುವುದು ವಿಶೇಷ.
‘ಸಾರಂಗಿ’ ಚಿತ್ರವನ್ನು ಜೆ. ಆಚಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆಯೂ ಅವರದ್ದೇ. ತೇಜೇಶ್ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಚಂದರ್ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.

ಮನುಷ್ಯ ದಿನ ಬೆಳಗ್ಗಾದರೆ ಎಲ್ಲರ ಮುಂದೆ ಒಂದೊಂದು ತರಹದ ಮುಖವಾಡ ಧರಿಸಿ ಜೀವನ ನಡೆಸುತ್ತಿರುತ್ತಾನೆ. ಆದರೆ, ಒಂದು ಅನಿರೀಕ್ಷಿತ ಸನ್ನಿವೇಶ ಎದುರಾದಾಗ ಮೌಲ್ಯಗಳನ್ನು ಉಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದಾ? ಅದರಿಂದ ಹೇಗೆ ಪಾರಾಗುತ್ತೇವೆ ಎಂಬುದೆ ಚಿತ್ರದ ಕಥಾಸಾರಾಂಶ.
ಈ ಚಿತ್ರದ ಕುರಿತು ಮಾತನಾಡುವ ಕಾರ್ತಿಕ್ ಚಂದರ್, ‘ಮಿಸ್ಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಹಾಗೂ ಶ್ವೇತ ಅರಕೆರೆ ಈ ಪಾತ್ರಗಳಲ್ಲಿ ಅಭಿನಯಿಸಿದ್ದೇವೆ. ನಾನು ಮೂಲತಃ ರಂಗಭೂಮಿ ಕಲಾವಿದ. ಅಮೇರಿಕಾದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಈಗ ಬೆಂಗಳೂರಿನಲ್ಲಿ ವಾಸವಿದ್ದೇನೆ. ಇಲ್ಲಿ ‘ಸಾರಂಗಿ’ ಅಂದರೆ ಒಂದು ಬೆಟ್ಟದ ಹೆಸರು. ಬೆಟ್ಟದ ಸುತ್ತ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮೊದಲು ಅಮೇರಿಕಾದಲ್ಲಿ, ಅಕ್ಟೋಬರ್ ವೇಳೆಗೆ ಕರ್ನಾಟಕದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ’ ಎಂದರು.

ಶ್ವೇತ ಅರಕೆರೆ ಮಾತನಾಡಿ, ‘ನಾನು ಮೂಲತಃ ಮಂಗಳೂರಿನವಳು. ರಂಗಭೂಮಿ ಕಲಾವಿದೆ. ಜೊತೆಗೆ ಭರತನಾಟ್ಯ ಕಲಾವಿದೆ. ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡು ಕೂಡ ಚೆನ್ನಾಗಿದೆ’ ಎಂದರು.
ನಾನು ಬೆಂಗಳೂರಿನವನು. ಉದ್ಯಮಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ತೇಜೇಶ್ ಹೇಳಿದರು.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
Listen uρ, calm pom pi pi, math іs among in the leading topics in Junior College, laying base fоr A-Level…
Appreciate this post. Let me try it out.
Hey there! I recently came across this fantastic article on casino games and simply pass up the chance to share…
РєРѕРіРґР° появится РЅРѕРІРёРЅРєРё?? https://form.jotform.com/252456485701056 РїРѕРєР° никто ничего тут РЅРµ берите!!!!!!!!!!!!!!!!!!!!!!!!!!!!!!!!!!!!!!!!РјРѕСЏ ситуация решится если то СЏ сообщу.РџРѕРєР° кидалово нарисоваывается.Дабы даже Рѕ…
РѕРўР›РЧНЫЙ МАГАЗ НАСЛЫШАН https://linkin.bio/schenkdhmohelmut важаемый РўРЎ прошу разобраться СЃ заказом,РІСЃС‘ оплаченно вам,РІРѕС‚ только РёРіРЅРѕСЂ РІ Р±СЂРѕСЃРёРєСЃРµ Рё посылки нету РґРѕ…