ಉಪೇಂದ್ರ ಹೊಸ ಚಿತ್ರ ʻನೆಕ್ಸ್ಟ್ ಲೆವೆಲ್ʼಗೆ Aradhana Ram ನಾಯಕಿ
ಕಾಟೇರ’ ಚಿತ್ರ ದೊಡ್ಡ ಯಶಸ್ಸು ಸಾಧಿಸಿದರೂ, ಆ ಚಿತ್ರದ ನಾಯಕಿ ಆರಾಧನಾ ರಾಮ್ (Aradhana Ram) ಯಾಕೋ ಇನ್ನೊಂದು ಚಿತ್ರವನ್ನು ಒಪ್ಪಿರಲಿಲ್ಲ. ಯಾವಾಗ ಕೇಳಿದರೂ, ‘ಸದ್ಯದಲ್ಲೇ ಘೋಷಣೆ ಆಗಲಿದೆ’ ಎಂದು ಆರಾಧನಾ ಮತ್ತು ಅವರ ತಾಯಿ ಮಾಲಾಶ್ರೀ ಹೇಳುತ್ತಲೇ ಇದ್ದರು. ಆದರೆ, ಈ ಒಂದೂವರೆ ವರ್ಷದಲ್ಲಿ ಆರಾಧನಾ ಯಾವೊಂದು ಚಿತ್ರದಲ್ಲೂ ನಟಿಸಲಿಲ್ಲ.
ಇದೀಗ ಆರಾಧನಾ ಸದ್ದಿಲ್ಲದೆ, ದೊಡ್ಡ ಚಿತ್ರಕ್ಕೇ ನಾಯಕಿಯಾಗಿದ್ದಾರೆ. ಉಪೇಂದ್ರ ಅಭಿನಯಿಸುತ್ತಿರುವ ‘ನೆಕ್ಸ್ಟ್ ಲೆವೆಲ್’ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರಂತೆ. ‘ಕಾಟೇರ’ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿದ್ದ ಆರಾಧನಾ, ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಮಗಳಾಗಿ ನಟಿಸುತ್ತಿರುವುದು ವಿಶೇಷ. ಈ ಚಿತ್ರಕ್ಕಾಗಿ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳುತ್ತಿದ್ದು, ತೂಕ ಇಳಿದ ನಂತರ ಚಿತ್ರೀಕಣದಲ್ಲಿ ಭಾಗಿಯಾಗಲಿದ್ದಾರಂತೆ.
ಸದ್ಯ ನಾಗಣ್ಣ ನಿರ್ದೇಶನದ ‘ಭಾರ್ಗವ’ ಚಿತ್ರದಲ್ಲಿ ನಟಿಸುತ್ತಿರುವ ಉಪೇಂದ್ರ, ಅದರ ಜೊತೆಗೆ ‘ನೆಕ್ಸ್ಟ್ ಲೆವೆಲ್’ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಈ ಹಿಂದೆ ‘ಛೂ ಮಂತರ್’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿರುವ ತರುಣ್ ಶಿವಪ್ಪ ಈ ಚಿತ್ರವನ್ನು ತರುಣ್ ಸ್ಟುಡಿಯೋಸ್ ಮೂಲಕ ನಿರ್ಮಿಸುತ್ತಿದ್ದಾರೆ.
ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. 15 ವರ್ಷಗಳ ಹಿಂದೆ ಬಿಡುಗಡೆಯಾದ ‘ನಮ್ ಏರಿಯಾಲ್ ಒಂದಿನ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಅರವಿಂದ್ ಕೌಶಿಕ್, ಆ ನಂತರ ‘ತುಗ್ಲಕ್’, ‘ಹುಲಿರಾಯ’, ‘ಶಾರ್ದೂಲ’ ಮತ್ತು ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದುವರೆಗೂ ಹೆಚ್ಚಾಗಿ ಹೊಸಬರ ಜೊತೆಗೆ ಕೆಲಸ ಮಾಡಿದ್ದ ಕೌಶಿಕ್, ಇದೇ ಮೊದಲ ಬಾರಿಗೆ ಉಪೇಂದ್ರರಂತಹ ಸ್ಟಾರ್ ನಟರನ್ನು ನಿರ್ದೇಶಿಸುತ್ತಿದ್ದಾರೆ.
‘ಭಾರ್ಗವ’ ಮತ್ತು ‘ನೆಕ್ಸ್ಟ್ ಲೆವೆಲ್’ ಚಿತ್ರಗಳಲ್ಲದೆ ತೆಲುಗಿನ ರಾಮ್ ಪೋತಿನೇನಿ ಅಭಿನಯದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದು, ಇದರ ಜೊತೆಗೆ ‘ಕರ್ವ’ ನವನೀತ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯೂ ಇದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗಾಗಿ :-
https://penzu.com/p/c262ab69fd36f73f
Eh eh, calm pom pi pi, maths iѕ аmong in the top topics at Junior College, establishing base tߋ A-Level…
Бесплатный промокод актуален как для букмекерской конторы Мелбет, так и для международной Melbet при регистрации в 2026 году. Официальный и…
Kudos! I appreciate this!
В обзоре возможностей для игроков мы подробно разбираем типы бонусов, включая фрибеты и депозитные поощрения; в соответствующем абзаце приведена ссылка…






**mind vault**
mind vault is a premium cognitive support formula created for adults 45+. It’s thoughtfully designed to help maintain clear thinking