Darshan ಅಭಿಮಾನಿಗಳ ಟ್ರೋಲ್‍; ರಮ್ಯಾಗೆ Shiva Rajkumar ಬೆಂಬಲ

Ramya

ರೇಣುಕಾಸ್ವಾಮಿ ಕುಟುಂಬದ ಪರವಾಗಿ ಮಾತನಾಡಿದ್ದಿಕ್ಕೆ ದರ್ಶನ್‍ (Darshan) ಅಭಿಮಾನಿಗಳಿಂದ ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‍ ಆಗಿದ್ದ ನಟಿ ರಮ್ಯಾಗೆ ಇದೀಗ ಶಿವರಾಜಕುಮಾರ್ (Shiva Rajkumar) ಬೆಂಬಲ ಸೂಚಿಸಿದ್ದಾರೆ. ರಮ್ಯಾ ಅವರ ನಿಲುವು ಸರಿಯಾಗಿದ್ದು, ಅವರ ಜೊತೆಗೆ ನಾವು ಸದಾ ನಿಲ್ಲುತ್ತೇವೆ ಎಂದು ಶಿವರಾಜಕುಮಾರ್ ಮತ್ತು ಗೀತಾ ಶಿವರಾಜಕುಮಾರ್ ಇಬ್ಬರೂ ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಸುಪ್ರೀಂ ಕೋರ್ಟ್‍ನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ರಮ್ಯಾ ಇತ್ತೀಚೆಗೆ ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದು ದರ್ಶನ್‍ ಅಭಿಮಾನಿಗಳಿಗೆ ಸಿಟ್ಟು ತರಿಸಿದ್ದು, ಹಲವರು ರಮ್ಯಾಗೆ ಸೋಷಿಯಲ್‍ ಮೀಡಿಯಾ ಮೂಲಕ ಅವಹೇಳನಕಾರಿ ಸಂದೇಶಗಳನ್ನು ಕಳಿಸಿದ್ದರು. ತಮಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ದರ್ಶನ್ ಫ್ಯಾನ್ಸ್ ಹೆಸರಿನ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸ್ಕ್ರೀನ್‌ಶಾಟ್ ತೆಗೆದು, ರಮ್ಯಾ ಅಪ್ಲೋಡ್‍ ಮಾಡಿದ್ದೂ ಆಗಿತ್ತು.

ಯಾವಾಗ ಇದು ಅತಿರೇಕಕ್ಕೆ ಹೋಯಿತೋ, ಆಗ ದರ್ಶನ್‍ ಅಭಿಮಾನಿಗಳ ವಿರುದ್ಧ ರಮ್ಯಾ, ಮಹಿಳಾ ಆಯೋಗದ ಜೊತೆಗೆ ಸೈಬರ್ ಕ್ರೈಮ್‍ ಸೆಲ್‍ಗೂ ದೂರು ನೀಡಿದ್ದರು. ಈ ಸಂದರ್ಭದಲ್ಲಿ Film Industry for Rights and Equality (FIRE) ಸಂಸ್ಥೆಯು ಬೆಂಬಲಕ್ಕೆ ನಿಂತಿದ್ದು, ಮಹಿಳಾವಿರೋಧಿ ಟ್ರೋಲಿಂಗ್‍ ನಿಲ್ಲಿಸುವುದಕ್ಕೆ ಆಗ್ರಹಿಸುವುದರ ಜೊತೆಗೆ, ಈ ತರಹ ಟ್ರೋಲ್‍ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಪರಮೇಶ್ವರ್‍ ಅವರನ್ನು ಆಗ್ರಹಿಸಿತ್ತು.

ಚಿತ್ರರಂಗದಲ್ಲಿ ನಟ-ನಿರ್ದೇಶಕ ಪ್ರಥಮ್‍ ಹೊರತುಪಡಿಸಿದರೆ, ಮಿಕ್ಕಂತೆ ಯಾರೂ ರಮ್ಯಾ ಪರವಾಗಿ ಮಾತನಾಡಿರಲಿಲ್ಲ. ಇದೀಗ ಶಿವರಾಜಕುಮಾರ್‍ ಬೆಂಬಲ ಸೂಚಿಸಿದ್ದು, ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

‘ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಷಿಯಲ್‍ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ. ಅದನ್ನು ತಮ್ಮ ಹೇಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ಧಗಳಿಂದ ನಿಂದಿಸಿ, ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿ ಇದೆ ರಮ್ಯಾ. ನಿಮ್ ಜೊತೆಗೆ ನಾವು ಸದಾ ನಿಲ್ಲುತ್ತೇವೆ’ ಎಂದು ಶಿವರಾಜಕುಮಾರ್‍ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ರಮ್ಯಾಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-


9 thoughts on “Darshan ಅಭಿಮಾನಿಗಳ ಟ್ರೋಲ್‍; ರಮ್ಯಾಗೆ Shiva Rajkumar ಬೆಂಬಲ

  1. Lkiwin! Its got those hidden gems that aren’t bogged down with too many players but still run the game. Smooth gameplay and fair deals. Give her a looksie: lkiwin

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!