‘The Devil’ ಚಿತ್ರದ ಚಿತ್ರೀಕರಣ ಮುಕ್ತಾಯ; ಅ.31ಕ್ಕೆ ಚಿತ್ರ ಬಿಡುಗಡೆ?

The Devil

ದರ್ಶನ್‍ ಅಭಿನಯದ ‘ದಿ ಡೆವಿಲ್‍’ (The devil) ಚಿತ್ರದ ಮಾತಿನ ಭಾಗದ ಚಿತ್ರೀಕರಣ ಕಳೆದ ತಿಂಗಳೇ ಮುಗಿದಿತ್ತು. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಇದೀಗ ಚಿತ್ರತಂಡವು ಇತ್ತೀಚೆಗೆ ಥಾಯ್ಲೆಂಡ್‍ನಲ್ಲಿ ಚಿತ್ರದ ಹಾಡುಗಳ ಚಿತ್ರೀಕರಣ ಮುಗಿಸಿದೆ. ಜೊತೆಗೆ ಡಬ್ಬಿಂಗ್‍ ಸಹ ಮುಗಿದಿದೆಯಂತೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಅಕ್ಟೋಬರ್ 31ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

‘ದಿ ಡೆವಿಲ್‍’ ಚಿತ್ರದ ಹಾಡುಗಳ ಚಿತ್ರೀಕರಣ ಈ ಮೊದಲೇ ಮುಗಿಯಬೇಕಿತ್ತು. ಆದರೆ, ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವುದಕ್ಕೆ ನ್ಯಾಯಾಲಯವು ದರ್ಶನ್‍ಗೆ ಅನುಮತಿ ನೀಡಿರಲಿಲ್ಲ. ಕಳೆದ ತಿಂಗಳು ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ, ಇತ್ತೀಚೆಗೆ ದರ್ಶನ್‍ ಮತ್ತು ಚಿತ್ರತಂಡ ಬ್ಯಾಂಕಾಕ್‍ಗೆ ಹೋಗಿ ಅಲ್ಲಿ ಎರಡು ಹಾಡುಗಳ ಚಿತ್ರೀಕರಣ ಮುಗಿಸಿ, ಬೆಂಗಳೂರಿಗೆ ವಾಪಸ್ಸಾಗಿದೆ.

ದರ್ಶನ್‍ ಅಭಿನಯದ ಯಾವುದೇ ಚಿತ್ರ ಕಳೆದ ವರ್ಷ ಬಿಡುಡೆಯಾಗಿಲ್ಲ. 2023ರ ಡಿಸೆಂಬರ್‍ ಕೊನೆಯ ವಾರದಲ್ಲಿ ‘ಕಾಟೇರ’ ಚಿತ್ರವು ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. ಆ ನಂತರ ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್‍ ಭಾಗಿಯಾಗಿದ್ದರು. ಚಿತ್ರವು ಕಳೆದ ವರ್ಷವೇ ಬಿಡುಗುಡೆಯಾಗಬೇಕಿತ್ತು. ಆದರೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‍ ಆರೋಪಿಯಾಗಿ ಜೈಲು ಪಾಲಾದ್ದರಿಂದ ಚಿತ್ರ ವಿಳಂಬವಾಯಿತು. ಕಳೆದ ವರ್ಷದ ಕೊನೆಯಲ್ಲಿ ದರ್ಶನ್ ‍ಜೈಲಿನಿಂದ ವಾಪಸ್ಸಾಗಿ, ಈಗ ತಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ. ಈಗ ಚಿತ್ರ ಬಿಡುಗಡೆ ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಚಿತ್ರತಂಡದ ಕುರಿತಾಗಿ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

‘ದಿ ಡೆವಿಲ್‍’ ಚಿತ್ರವನ್ನು ಶ್ರೀಮಾತಾ ಕಂಬೈನ್ಸ್ ಬ್ಯಾನರ್ ಅಡಿ ಪ್ರಕಾಶ್‍ ವೀರ್ ನಿರ್ಮಿಸಿ-ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಸುಧಾಕರ್ ರಾಜ್‍ ಛಾಯಾಗ್ರಹಣ ಮತ್ತು ಅಜನೀಶ್‍ ಲೋಕನಾಥ್‍ ಸಂಗೀತವಿದೆ. ಈ ಚಿತ್ರಕ್ಕೆ ಬೆಂಗಳೂರು, ರಾಜಸ್ಥಾನ, ಬ್ಯಾಂಕಾಕ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

‘ದಿ ಡೆವಿಲ್‍’ ಚಿತ್ರದಲ್ಲಿ ದರ್ಶನ್, ರಚನಾ ರೈ, ಮಹೇಶ್‍ ಮಂಜ್ರೇಕರ್, ಅಚ್ಯುತ್ ಕುಮಾರ್, ತುಳಸಿ,‌ ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ನಟಿಸಿದ್ದಾರೆ.


ಇದನ್ನೂ ಓದಿ :-


ಹೆಚ್ಚಿನ ಓದಿಗಾಗಿ :-

  1. Обращайтесь к нам снова https://bio.site/kkediogi конспирация достойная, товар оказался отличным, кроли заценили. будем еще работать

  2. хороших отзывов – полно ) просто РјРЅРѕРіРёРµ РЅРµ пишут РѕСЃРѕР±Рѕ Рѕ качестве товара. пришло, прёт, зашибись. http://www.pageorama.com/?p=ufyiicohyf Заказал РІ понедельник…


Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ