ಎರಡು ದಿನಗಳಲ್ಲಿ ಮೂರು ಕೋಟಿ ರೂ ಗಳಿಕೆ ಮಾಡಿದ ‘Su From So’

Su From So

ಒಂದು ಕಡೆ ಜನಪ್ರಿಯ ನಟರ ಚಿತ್ರಗಳೇ ನಿರೀಕ್ಷೆಗೆ ನಿಲುಕದೆ ಬಾಕ್ಸ್ ಆಫೀಸ್‍ನಲ್ಲಿ ನೆಲ ಕಚ್ಚುವಾಗ, ಹೊಸಬರ ಚಿತ್ರವೊಂದು ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲೊಂದು ದೊಡ್ಡ ಗಳಿಕೆ ಮಾಡುತ್ತಿದೆ. ಅದೇ ‘ಸು ಫ್ರಮ್‍ ಸೋ’ (Su From So). ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿರುವುದಷ್ಟೇ ಅಲ್ಲ, ಎರಡೇ ದಿನಗಳಲ್ಲಿ ಮೂರು ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದೆ.

‘ಸು ಫ್ರಮ್ ಸೋ’ ಹಾರರ್ ಕಾಮಿಡಿ ಜಾನರ್‍ನ ಚಿತ್ರ. ‘ಸು ಫ್ರಮ್‍ ಸೋ’ ಎಂದರೆ ಸುಲೋಚನ ಹಾಗೂ ಸೋಮೇಶ್ವರ ಎಂದರು. ಮೊದಲನೆಯದು ಪಾತ್ರದ ಹೆಸರಾದರೆ, ಎರಡನೆಯದು ಸ್ಥಳದ ಹೆಸರು. ಬಹುತೇಕ ಹೊಸತಂಡ, ಅದರಲ್ಲೂ ರಂಗಭೂಮಿಯ ಪ್ರತಿಭೆಗಳೇ ಸೇರಿ ಮಾಡಿರುವ ಚಿತ್ರವಿದು. ಹೆಚ್ಚು ಪ್ರಚಾರವಾಗಿಲ್ಲದೆ, ಯಾವುದೇ ಅಬ್ಬರವಿಲ್ಲದೆ ಬಿಡುಗಡೆಯಾದ ಈ ಚಿತ್ರವು ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆಯುತ್ತಿರುವುದು ವಿಶೇಷ.

‘ಸು ಫ್ರಮ್‍ ಸೋ’ ಚಿತ್ರವು ಶುಕ್ರವಾರ ಬಿಡುಗಡೆಯಾದ ರಾಜ್ಯಾದ್ಯಂತ ಹೆಚ್ಚೆಂದರೆ 50 ಪ್ರದರ್ಶನಗಳಿದ್ದವು. ಆದರೆ, ಬಾಯ್ಮಾತಿನ ಪ್ರಚಾರದಿಂದ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿ ಚಿತ್ರಮಂದಿರ ಮತ್ತು ಪ್ರದರ್ಶನಗಳ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯ ಬೆಂಗಳೂರಿನಲ್ಲೇ 200ಕ್ಕೂ ಹೆಚ್ಚು ಪ್ರದರ್ಶನಗಳು ಕಾಣುತ್ತಿದ್ದ, ಭಾನುವಾರ ಬೆಳಿಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಕಂಡಿರುವುದು ವಿಶೇಷ.

ಪ್ರದರ್ಶನದ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಗಳಿಕೆಯೂ ಹೆಚ್ಚಾಗಿದ್ದು, ಮೊದಲ ದಿನ ಸುಮಾರು 80 ಲಕ್ಷ ಗಳಿಕೆಯಾದರೆ, ಎರಡನೇ ದಿನ ಅದರ ದುಪ್ಪಟ್ಟಾಗಿದ್ದು, ಒಟ್ಟಾರೆ ಎರಡು ದಿನಗಳಿಂದ ಮೂರು ಕೋಟಿ ಗಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಹೊಸಬರ ಚಿತ್ರವೊಂದಕ್ಕೆ ಈ ರೀತಿಯ ಗಳಿಕೆ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಆಗಿದೆ ಎನ್ನುವುದು ವಿಶೇಷ. ಅದರಲ್ಲೂ ಈ ವರ್ಷ ದೊಡ್ಡ ಹಿಟ್‍ ಇಲ್ಲದೆ ಕಷ್ಟದಲ್ಲಿದ್ದ ಚಿತ್ರರಂಗಕ್ಕೆ ಇಂಥದ್ದೊಂದು ದೊಡ್ಡ ಗೆಲುವು ಬೇಕಾಗಿತ್ತು.

ಜೆ.ಪಿ. ತುಮಿನಾಡು  ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸು ಫ್ರಮ್ ಸೋ’ ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಾಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬೆಳ್ತಂಗಡಿ, ವೇಣೂರು, ಕಕ್ಯಪದವು ಸುತ್ತಮುತ್ತ 50 ದಿನಗಳ ಚಿತ್ರೀಕರಣ ಈ ಚಿತ್ರಕ್ಕೆ ನಡೆದಿದೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-


One thought on “ಎರಡು ದಿನಗಳಲ್ಲಿ ಮೂರು ಕೋಟಿ ರೂ ಗಳಿಕೆ ಮಾಡಿದ ‘Su From So’

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ