ಹೋರಾಟ ಮಾಡಲು ಹೊರಟ Pruthvi Ambaar ; ‘ಕೊತ್ತಲವಾಡಿ’ ಟ್ರೇಲರ್ ಬಿಡುಗಡೆ

‘ದಿಯಾ’ ಚಿತ್ರದ ನಂತರ ಲವ್ವರ್ ಬಾಯ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡವರು ಪೃಥ್ವಿ ಅಂಬಾರ್ (Pruthvi Ambaar) . ‘ಮತ್ಸ್ಯಗಂಧ’ ಚಿತ್ರದಲ್ಲಿ ಅವರು ತಮ್ಮ ಇಮೇಜ್ ಮುರಿಯುವುದಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ‘ಕೊತ್ತಲವಾಡಿ’ ಚಿತ್ರದಲ್ಲಿ ಪೃಥ್ವಿ ಬೇರೆಯದೇ ರೀತಿ ಕಾಣಿಸುತ್ತಿದ್ದಾರೆ.
ಯಶ್ ತಾಯಿ ಪುಷ್ಪ ಅರುಣ್ ಕುಮಾರ್, ತಮ್ಮ ಪಿ.ಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸುತ್ತಿರುವ ಚಿತ್ರ ‘ಕೊತ್ತಲವಾಡಿ’. ಈ ಚಿತ್ರಕ್ಕೆ ಶ್ರೀರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
‘ದಿಯಾ’ ಚಿತ್ರದ ನಂತರ ಎಲ್ಲಾ ಚಿತ್ರಗಳಲ್ಲೂ ಪ್ರೀತಿ ಮಾಡೋದು ಮಾಮೂಲಿಯಾಗಿತ್ತು ಎನ್ನುವ ಪೃಥ್ವಿ ಅಂಬಾರ್ ಮಾತನಾಡಿ, ‘ಇದಕ್ಕೂ ಮುನ್ನ ಬೇರೆ ಚಿತ್ರಗಳಲ್ಲಿ ಹೆಚ್ಚಾಗಿ ಪ್ರೀತಿಸುವ ಯುವಕನ ಪಾತ್ರವೇ ಸಿಕ್ಕಿತ್ತು. ಇಲ್ಲಿ ಬೇರೆ ತರಹದ ಪಾತ್ರ ಸಿಕ್ಕಿದೆ. ಈ ಚಿತ್ರದಲ್ಲಿ ಮೋಹನ ಎಂಬ ಹಳ್ಳಿ ಯುವಕನ ಪಾತ್ರ ಮಾಡಿದ್ದೇನೆ. ಆಸೆ, ದುರಾಸೆ ಮಟ್ಟಕ್ಕೆ ಹೋದರೆ ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಈ ಚಿತ್ರಕ್ಕೂ, ಗ್ರಾಮಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಕೊತ್ತಲವಾಡಿಯ ಜೊತೆಗೆ ರಾಮನಗರ, ತಲಕಾಡು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಬಹುಪಾಲು ಕೊತ್ತಲವಾಡಿಯಲ್ಲಿ ಚಿತ್ರೀಕರಣ ಮಾಡಿದ್ದರಿಂದ ಆ ಹೆಸರು ಇಡಲಾಗಿದೆ. ಚಿತ್ರದಲ್ಲಿ ಗ್ರಾಮಕ್ಕೆ ಅಥವಾ ಪೊಲೀಸ್ ಇಲಾಖೆಯವರಿಗೆ ಅವಮಾನವಾಗುವ ಯಾವುದೇ ವಿಷಯವಿಲ್ಲ. ಮನುಷ್ಯರು ಒಳ‍್ಳೆಯವರು, ಸನ್ನಿವೇಶ ತಪ್ಪಾದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ. ಈ ಚಿತ್ರದ ನಂತರ ಈ ಸಂಸ್ಥೆ ಇನ್ನಷ್ಟು ಕಲಾವಿದರಿಗೆ ಆಸರೆಯಾಗಲಿ’ ಎಂದರು.

ನಿರ್ದೇಶಕ ಶ್ರೀರಾಜ್ ಮಾತನಾಡಿ, ‘ಕೆಲವು ನೈಜ ಘಟನೆಗಳ ಜೊತೆಗೆ, ಒಂದಿಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ ಚಿತ್ರ ಮಾಡಿದ್ದೇವೆ. ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಎಂಬ ಗ್ರಾಮದಲ್ಲಿ ನಡೆಯುವ ಕಥೆ ಹೊಂದಿರುವ ಚಿತ್ರ ‘ಕೊತ್ತಲವಾಡಿ’. ಹಾಗಾಗಿ, ಈ ಚಿತ್ರಕ್ಕೆ ಅದೇ ಹೆಸರು ಇಟ್ಟಿದ್ದೇವೆ. ಆ ಚಿತ್ರದಲ್ಲಿ ನಡೆಯುವ ಹೋರಾಟ, ರಾಜಕೀಯದ ಸುತ್ತ ಚಿತ್ರ ಸಾಗುತ್ತದೆ. ಪೃಥ್ವಿ ಅಂಬಾರ್ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡಿದ್ದಾರೆ’ ಎಂದರು.
ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಮಾತನಾಡಿ, ‘ಆಗಸ್ಟ್ 1ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಭಯ-ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್‌ಗೆ ಹೇಳದೇ ಏನನ್ನೂ ಮಾಡಿಲ್ಲ. ಅವನಿಂದ ಪ್ರೇರಣೆ ಪಡೆದು ಈ ಚಿತ್ರ ಮಾಡಿದ್ದೇವೆ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ ನಮಗೂ ಖುಷಿ’ ಎಂದರು.
‘ಕೊತ್ತಲವಾಡಿ’ ಚಿತ್ರದಲ್ಲಿ ಪೃಥ್ವಿಗೆ ನಾಯಕಿಯಾಗಿ ಕಾವ್ಯ ಶೈವ ನಟಿಸಿದ್ದು, ಮಿಕ್ಕಂತೆ ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ, ಮಾನಸೀ ಸುಧೀರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದರೆ, ಶೀರ್ಷಿಕೆ ಗೀತೆ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಅಭಿನಂದನ್ ಕಶ್ಯಪ್ ಹೊತ್ತಿದ್ದಾರೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
I was recommended this web site by my cousin. I’m not sure whether this post is written by him as…
888starz скачать http://procurement.gov.ck/wordpress/?p=14464
Hiya very cool site!! Man .. Beautiful .. Wonderful .. I will bookmark your website and take the feeds additionally?…
это самый ровный магаз братцы!!!) работаю СЃ РЅРёРјРё целый РіРѕРґ, РЅРµ разу даже нервы РЅРµ потрепали) !!! конспирация РЅР° высоте,…
Very great post. I simply stumbled upon your weblog and wanted to say that I’ve truly loved browsing your blog…