‘Kantara ಅಧ್ಯಾಯ 1’ ಚಿತ್ರಕ್ಕೆ Rukmini Vasanth ನಾಯಕಿ?

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘Kantara ಅಧ್ಯಾಯ 1’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಈ ಮಧ್ಯೆ, ಚಿತ್ರತಂಡವು ಚಿತ್ರೀಕರಣ ಮುಗಿದ ಖುಷಿಯಲ್ಲಿ ಒಂದು ಮೇಕಿಂಗ್‍ ವೀಡಿಯೋ ಬಿಡುಗಡೆ ಮಾಡಿ, ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಧನ್ಯವಾದ ತಿಳಿಸಿದೆ.

ಈ ಮಧ್ಯೆ, ಚಿತ್ರದಲ್ಲಿ ಯಾರೆಲ್ಲಾ ನಟಿಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಮಾಧ್ಯಮದವರ ಹತ್ತಿರ ಮಾತನಾಡುವ ಸಂದರ್ಭದಲ್ಲಿ, ಚಿತ್ರದಲ್ಲಿ ನಟಿಸಿರುವುದಾಗಿ ಅಚ್ಯುತ್‍ ಕುಮಾರ್ ಹೇಳಿದ್ದರು. ಅವರು ‘ಕಾಂತಾರ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರಂತೆ. ಮಿಕ್ಕಂತೆ ಯಾರೆಲ್ಲಾ ನಟಿಸಿದ್ದಾರೆ ಎಂದು ಚಿತ್ರತಂಡದವರು ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹೀಗಿರುವಾಗಲೇ, ರುಕ್ಮಿಣಿ ವಸಂತ್‍ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ.

ರುಕ್ಮಿಣಿ, ‘ಕಾಂತಾರ – ಚಾಪ್ಟರ್ 1’ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷವೇ ಕೇಳಿಬಂದಿತ್ತು. ಆದರೆ, ಈ ಕುರಿತು ಅವರಾಗಲೀ, ಚಿತ್ರತಂಡದವರಾಗಲೀ ಖಚಿತಪಡಿಸಿಲ್ಲ. ಹೀಗಿರುವಾಗಲೇ ‘ಕಾಂತಾರ – ಚಾಪ್ಟರ್ 1’ ಚಿತ್ರಕ್ಕೆ ಅವರು ನಾಯಕಿಯಾಗಿದ್ದಾರೆ ಎಂಬ ಮಾತು ಮೇಕಿಂಗ್‍ ವೀಡಿಯೋ ಬಿಡುಗಡೆಯಾದ ದಿನದಿಂದ ಮತ್ತೊಮ್ಮೆ ಕೇಳಿಬರುತ್ತಿದೆ. ಇದರಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎಂಬುದನ್ನು ಚಿತ್ರತಂಡದವರೇ ಖಚಿತಪಡಿಸಬೇಕು.

‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ನಿರ್ಮಿಸುತ್ತಿದ್ದು, ರಿಷಭ್‍ ಶೆಟ್ಟಿ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಕುಂದಾಪುರ ಬಳಿ ದೊಡ್ಡ ಸ್ಟುಡಿಯೋ ಮಾಡಿ, ಅಲ್ಲಿ ಸೆಟ್‍ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗಿದೆ. ಒಟ್ಟಾರೆ 250ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣವಾಗಿರುವುದು ವಿಶೇಷ.

ಚಿತ್ರಕ್ಕೆ ಅರವಿಂದ್‍ ಕಶ್ಯಪ್‍ ಛಾಯಾಗ್ರಹಣ ಮತ್ತು ಅಜನೀಶ್ ‍ಲೋಕನಾಥ್‍ ಸಂಗೀತವಿದೆ. ‘RRR’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದ ಬಲ್ಗೇರಿಯಾ ಮೂಲದ ಟೊಡರ್ ಲ್ಯಾಜರೋವ್, ‘ಕಾಂತಾರ’ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಿದ್ದಾರೆ.

‘ಕಾಂತಾರ – ಚಾಪ್ಟರ್ 1’ ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು ಅಕ್ಟೋಬರ್‍ 02ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-

  1. с искреннем уважением к вам! https://kemono.im/weoygnedueo/geroin-po-nizkoi-tsene-kupit сказали отпрака на следующий день после платежа!

  2. Всем РґРѕР±СЂРѕРіРѕ времени суток. Р’РѕРїСЂРѕСЃ такой – РљРѕ скольки лучше делать РњРќ Рё как быстро растет толер??? https://linkin.bio/walterguzmanwal Всем привет!


Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ