‘ಶಿಲ್ಪಾ ಶ್ರೀನಿವಾಸ್’ ಚಿತ್ರಕ್ಕೆ Shilpa Srinivas ನಾಯಕ

ಉಪೇಂದ್ರ’, ‘ಪರ್ವ’ ಮುಂತಾದ ಬಿಗ್‍ ಬಜೆಟ್‍ ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ವಿತರಕರಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಶಿಲ್ಪ ಶ್ರೀನಿವಾಸ್‍ (Shilpa Srinivas), ಇದೀಗ ಹೀರೋ ಆಗಿದ್ದಾರೆ. ಶಿಲ್ಪಾ ಶ್ರೀನಿವಾಸ್‍ ಮಗ ಭರತ್‍ ಈಗಾಗಲೇ ಹೀರೋ ಆಗಿದ್ದು, ಅವರ ಮೊದಲ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಹೀಗಿರುವಾಗಲೇ, ಶಿಲ್ಪಾ ಶ್ರೀನಿವಾಸ್‍ ಸಹ ಹೀರೋ ಆಗಿದ್ದಾರೆ.

ವಿಶೇಷವೆಂದರೆ, ಈ ಚಿತ್ರದ ಹೆಸರು ಸಹ ‘ಶಿಲ್ಪಾ ಶ್ರೀನಿವಾಸ್’ ಎನ್ನುವುದು ವಿಶೇಷ. ಇತ್ತೀಚೆಗೆ ಈ ಚಿತ್ರಕ್ಕೆ ಹೊಸಕೊಟೆಯ ಗಟ್ಟಿಗನಬ್ಬೆ ಯಲ್ಲಿ‌ ಚಾಲನೆ ದೊರೆಯಿತು.  ನಟ-ಸಂಕಲನಕಾರ ನಾಗೇಂದ್ರ ಅರಸ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಶಿಲ್ಪಾ ಶ್ರೀನಿವಾಸ್‍ ಹೀರೋ ಆಗುತ್ತಿರುವ ಇದೇ ಮೊದಲಲ್ಲ. ‘ಪರ್ವ’ ಚಿತ್ರದ ಸೋಲಿನ ನಂತರ ಶ್ರೀನಿವಾಸ್‍, ‘ಕೆ.ಆರ್. ಮಾರ್ಕೆಟ್‍’ ಎಂಬ ಚಿತ್ರಕ್ಕೆ ನಾಯಕರಾಗಿದ್ದರು. ಆ ಚಿತ್ರದ ಮುಹೂರ್ತವು ಕೆ.ಆರ್‍. ಮಾರುಕಟ್ಟೆಯಲ್ಲೇ ನಡೆದಿತ್ತು. ಆ ಚಿತ್ರದ ಚಿತ್ರೀಕರಣ ಪ್ರಾರಂಭವಾದರೂ ಹೆಚ್ಚು ದಿನ ಮುಂದುವರೆಯಲಿಲ್ಲ. ಆ ನಂತರ ಅವರು ಅಭಿನಯ ಬಿಟ್ಟು ವಿತರಣೆ, ಫೈನಾನ್ಸ್ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಶಿಲ್ಪಾ ಶ್ರೀನಿವಾಸ್‍ ತಮ್ಮದೇ ಹೆಸರಿನ ಚಿತ್ರಕ್ಕೆ ನಾಯಕನಾಗುತ್ತಿರುವುದು ವಿಶೃಷ.

ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಮುಗಿಲ ಮಲ್ಲಿಗೆ’ ಚಿತ್ರದ ನಿರ್ದೇಶಕ ಆರ್ .ಕೆ. ಗಾಂಧಿ, ‘ಶಿಲ್ಪಾ ಶ್ರೀನಿವಾಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆ. ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ

‘ಶಿಲ್ಪಾ ಶ್ರೀನಿವಾಸ್‍’ ಚಿತ್ರದಲ್ಲಿ ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಪ್ರಿಯಾಂಕ, ಶೋಭರಾಜ್, ನಾಗೇಂದ್ರ ಅರಸ್ ಮುಂತಾದವರು ನಟಿಸುತ್ತಿದ್ದಾರೆ. ಹೊಸಕೋಟೆ, ಚಿಕ್ಕಬಳ್ಳಾಪುರ ಅಲ್ಲದೆ ಬೆಂಗಳೂರಲ್ಲಿ ಒಟ್ಟು ಎರಡು ಹಂತಗಳಲ್ಲಿ ‘ಶಿಲ್ಪಾ ಶ್ರೀನಿವಾಸ್’ ಚಿತ್ರದ ಚಿತ್ರೀಕರಣ ನಡೆಯಲಿದೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ:-

  1. Курсы маникюра https://econogti-school.ru и педикюра с нуля: теория + практика на моделях, стерилизация, архитектура ногтя, комбинированный/аппаратный маникюр, выравнивание, покрытие гель-лаком,…


One thought on “‘ಶಿಲ್ಪಾ ಶ್ರೀನಿವಾಸ್’ ಚಿತ್ರಕ್ಕೆ Shilpa Srinivas ನಾಯಕ

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!