ಕೆ.ಆರ್ ಮಾರುಕಟ್ಟೆಯಲ್ಲಿ ‘Kamal Sridevi’ ಚಿತ್ರಕ್ಕೆ ಫೋಟೋ ಶೂಟ್

ಕೆಲವು ವರ್ಷಗಳ ಹಿಂದೆ ಸ್ಟುಡಿಯೋಗಳನ್ನು ಬಿಟ್ಟು ಲೈವ್ ಲೊಕೇಶನ್‍ಗಳಲ್ಲಿ ಚಿತ್ರದ ಫೋಟೋ ಶೂಟ್‍ಗಳನ್ನು ಮಾಡಲಾಗುತ್ತಿತ್ತು. ಇಂಥದ್ದೊಂದು ಟ್ರೆಂಡ್ ಹುಟ್ಟುಹಾಕಿದ್ದು ನಿರ್ದೇಶಕ ಸೂರಿ. ಅವರು ತಮ್ಮ ‘ದುನಿಯಾ’ ಚಿತ್ರಕ್ಕಾಗಿ ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ಫೋಟೋ ಶೂಟ್ ಮಾಡಿದ್ದರು. ಆ ನಂತರ ‘ಕಡ್ಡಿಪುಡಿ’ ಚಿತ್ರಕ್ಕೂ ಜನಜಂಗುಳಿಯ ಮಧ್ಯೆ ಫೋಟೋ ಶೂಟ್ ಮಾಡಲಾಗಿತ್ತು.
ಈಗ್ಯಾಕೆ ಈ ವಿಷಯವೆಂದರೆ, ‘ಕಮಲ್ ಶ್ರೀದೇವಿ’ (Kamal Sridevi) ಚಿತ್ರಕ್ಕಾಗಿ ನಾಯಕ ಸಚಿನ್ ಚೆಲುವರಾಯ ಸ್ವಾಮಿ, ನಟಿ ಸಂಗೀತಾ ಭಟ್ ಹಾಗೂ ಮತ್ತೊಬ್ಬ ನಟಿ ಅಕ್ಷಿತಾ ಬೋಪಯ್ಯ ಜೊತೆಗೆ ಕೆ.ಆರ್ ಮಾರುಕಟ್ಟೆಯಲ್ಲಿ ಫೋಟೋ ಶೂಟ್ ಮಾಡಲಾಗಿದೆ. ಕೆ.ಆರ್. ಮಾರುಕಟ್ಟೆಯ ಹೂ, ಹಣ್ಣು, ಅರಿಶಿಣ ಕುಂಕುಮ, ಬಳೆ ಅಂಗಡಿಗಳಲ್ಲಿ ಪಾತ್ರಗಳಾಗಿ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕೆ.ಆರ್ ಮಾರ್ಕೆಟ್ ಕಟ್ಟಡದ ಮೇಲೆ ಹೂ ಚೆಲ್ಲಿ ಸಂಭ್ರಮಿಸಿದ್ದಾರೆ. ಕೋಟೆ ಬೀದಿಯಲ್ಲಿ ಮಂಗಳಮುಖಿಯರಿಂದ ದೃಷ್ಟಿ ತೆಗೆಸಿಕೊಂಡಿದ್ದಾರೆ. ಕವಡೆ ಶಾಸ್ತ್ರ ಕೇಳಿದ್ದಾರೆ. ಅಲ್ಲದೇ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಒಳಗೆ ನಿಂತು ಪೋಟೋಗೆ ಫೋಸ್ ಕೊಟ್ಟಿದ್ದಾರೆ. ಛಾಯಾಗ್ರಾಹಕ ಕೆವಿನ್ ಶೆರ್ವಿನ್ ಮಸ್ಕರೇನ್ಹಸ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ‘ಕಮಲ್ ಶ್ರೀದೇವಿ’ಯನ್ನು ಸೆರೆಹಿಡಿದಿದ್ದಾರೆ. ಸಿನಿಮಾದ ಕಥೆಗೆ ತಕ್ಕಂತೆ, ಅದೇ ಪಾತ್ರಗಳ, ಅದೇ ಕಾಸ್ಟ್ಯೂಮ್ ನಲ್ಲಿ ಫೋಟೋ ಶೂಟ್ ಮಾಡಲಾಗಿದೆ.
ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ನಟ ರಾಜವರ್ಧನ್ ಕೆಲಸ ಮಾಡಿದ್ದು, ಅವರೇ ಈ ಫೋಟೋಶೂಟ್‍ನ ರೂವಾರಿಯಂತೆ. ಈ ಕುರಿತು ಮಾತನಾಡಿರುವ ಅವರು, ‘ಇವತ್ತಿಗೆ ಈ ರೀತಿ ಫೀಲ್ಡಿಳಿದು ನುಗ್ಗಿ ಪ್ರಚಾರ ಮಾಡುವ ಅವಶ್ಯಕತೆ ಹೆಚ್ಚಿದೆ. ಹೊಸದಾಗಿ ಪ್ರೇಕ್ಷಕರಿಗೆ ಚಿತ್ರವನ್ನು ಮುಟ್ಟಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇದೊಂದು ಪ್ರಯತ್ನ’ ಎನ್ನುತ್ತಾರೆ.

ಇತ್ತೀಚೆಗಷ್ಟೇ ‘ಕಮಲ್ ಶ್ರೀದೇವಿ’ ಚಿತ್ರದ ಚಿತ್ರೀಕರಣ ಬಂಡೆ ಮಹಕಾಳಿ ದೇವಸ್ಥಾನದಲ್ಲಿ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ. ‘ಕಮಲ್ ಶ್ರೀದೇವಿ’ ಚಿತ್ರವನ್ನು ಕೃಷಿ ಸಚಿವ ಎನ್ ಚೆಲುವರಾಯ ಸ್ವಾಮಿ ಅರ್ಪಿಸುತ್ತಿದ್ದು, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ. ಧನಲಕ್ಷ್ಮೀ ನಿರ್ಮಿಸುತ್ತಿದ್ದಾರೆ. ರಾಜವರ್ಧನ್ ಈ ಚಿತ್ರಕ್ಕೆ ಸಹನಿರ್ಮಾಪಕರಾಗಿ ಆಗಿ ಕೆಲಸ ಮಾಡಿದ್ದಾರೆ.
ಚಿತ್ರದಲ್ಲಿ ಸಚಿನ್, ಸಂಗೀತಾ ಭಟ್ ಜೊತೆಗೆ ಕಿಶೋರ್, ರಮೇಶ್ ಇಂದಿರಾ, ಮಿತ್ರ, ಉಮೇಶ್ ಮುಂತಾದವರು ನಟಿಸಿದ್ದು, ಈ ಹಿಂದೆ ‘ಗಜರಾಮ’ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿ.ಎ. ಸುನೀಲ್ ಕುಮಾರ್, ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
888 starz https://www.commerces-en-ville.be/non-classe/_/__/geliostat-888starz-kak-zayti-nate-sayt-bukmekera/
Получив достаточно быстро трек отправления, Р° РІ качестве курьерки продавцом была выбрана РїРѕРЅРё экспресс, СЏ стал проверять бьется ли трек.…
Hi, i think that i saw you visited my site so i came to “return the favor”.I’m trying to find…
初心者におすすめのバイナリーオプション業者と選び方ガイド
Your style is very unique compared to other folks I have read stuff from. I appreciate you for posting when…
2 thoughts on “ಕೆ.ಆರ್ ಮಾರುಕಟ್ಟೆಯಲ್ಲಿ ‘Kamal Sridevi’ ಚಿತ್ರಕ್ಕೆ ಫೋಟೋ ಶೂಟ್”