ಪ್ರೀತಿ ಇವನ ಬದುಕನ್ನೇ ಸರ್ವನಾಶ ಮಾಡಿಬಿಡ್ತು …

ಸಿನಿಮಾ ಪ್ರಾರಂಭಕ್ಕೂ ಮೊದಲು ಬರುತ್ತಿದ್ದ ಗುಟ್ಕಾ , ಖೈನಿ ಜಾಹೀರಾತು ನೆನಪಿರಬಹುದು. ‘ನನ್ನ ಬದುಕು ಈ ರೀತಿ ಆಗುತ್ತೆ ಅಂತ ನಾನು ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಖೈನಿ ನನ್ನ ಜೀವನವನ್ನೇ ಸರ್ವನಾಶ ಮಾಡಿಬಿಡ್ತು …’
ಈಗ ಈ ಸಾಲುಗಳಲ್ಲಿ ಖೈನಿ, ಗುಟ್ಕಾ ತೆಗೆದು ಪ್ರೇಮ ಸೇರಿಸಿಬಿಡಿ. ಆಗ ಪ್ರೀತಿಯ ಕುರಿತು ಜಾಗೃತಿ ಮೂಡಿಸುತ್ತದೆ. ಇಂಥದ್ದೊಂದು ಕ್ರಿಯೇಟಿವ್ ಆದ ವಿಷಯವನ್ನು ಇಟ್ಟುಕೊಂಡು ಟೀಸರ್ ಮಾಡಲಾಗಿದೆ. ‘ಪ್ರೀತಿ ಮಾಡದಿರಿ, ಮಾಡಲು ಬಿಡದಿರಿ …’ ಎಂಬ ಸಂದೇಶ ಸಾರುವ ಈ ಟೀಸರ್ ‘Congratulations ಬ್ರದರ್’ ಚಿತ್ರದ್ದು.
‘ಅಲೆಮಾರಿ’ ಸಂತು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರುವ ‘Congratulations ಬ್ರದರ್’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗಾಗಲೇ ಒಂದು ಹಾಡು ಬಿಡುಗಡೆ ಆಗಿದೆ. ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡ ‘ಎಕ್ಕ’ ಹಾಗೂ ‘ಜೂನಿಯರ್’ ಚಿತ್ರದ ಪ್ರದರ್ಶನದ ಜೊತೆಗೆ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆದಿದೆ.
ಇದೊಂದು ವಿಭಿನ್ನ ಪ್ರೇಮ ಕಥೆಯನ್ನು ಒಳಗೊಂಡಿದ್ದು, ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ತಮಾಷೆಯಾಗಿ ತೋರಿಸಲಾಗಿದೆ. ಈ ಚಿತ್ರಕ್ಕೆ ‘ಅಲೆಮಾರಿ’ ಸಂತು ಕಥೆ ಬರೆದಿದ್ದು, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

‘Congratulations ಬ್ರದರ್’ ಚಿತ್ರದ ನಾಯಕನಾಗಿ ರಕ್ಷಿತ್ ನಾಗ್ ಅಭಿನಯಿಸಿದ್ದಾರೆ. ಅವರಿಗೆ ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನುಷಾ ನಟಿಸಿದ್ದಾರೆ. ಶಶಿಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕಾರವಾರ, ಬೆಂಗಳೂರು ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದ್ದು, ಸೂರಜ್ ಜೋಯಿಸ್ ಸಂಗೀತ ಮತ್ತು ಗುರುಪ್ರಸಾದ್ ಅವರ ಛಾಯಾಗ್ರಹಣವಿದೆ.
ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಕಲ್ಲೂರ್ ಸಿನಿಮಾಸ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
https://the.hosting/