ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು …

ಈ ಚಿತ್ರ ಯಾವಾಗ ಶುರುವಾಗಿದ್ದು ಗೊತ್ತಿಲ್ಲ. ಮುಗಿದಿದ್ದು ಯಾವಾಗ ಗೊತ್ತಿಲ್ಲ. ಆ ಬಗ್ಗೆ ಚಿತ್ರತಂಡದವರು ಮಾತನಾಡುವುದಿಲ್ಲ. ಆದರೆ, ಚಿತ್ರದ ಪೋಸ್ಟರ್  ನೋಡಿದರೆ ಕನಿಷ್ಠ ಎಂಟ್ಹತ್ತು ವರ್ಷಗಳ ಹಿಂದಿನಿದಿರಬಹುದು ಎಂಬ ಸಂಶಯ ಬರುತ್ತದೆ. ಅದಕ್ಕೆ ಸರಿಯಾಗಿ, ಅನಂತ್‍ ನಾಗ್ ‍ಮತ್ತು ಲಕ್ಷ್ಮೀ ಈ ಚಿತ್ರದಲ್ಲಿ ನಟಿಸಿದ್ದಾರೆ. ಇಬ್ಬರೂ ಇತ್ತೀಚೆಗೆ ಜೊತೆಯಾಗಿ ನಟಿಸಿರುವ ಸುದ್ದಿ ಇಲ್ಲ. ಶರಣ್‍ ಅವರನ್ನು ನೋಡಿದರೆ ಅವರು ಹೀರೋ ಆಗುವುದಕ್ಕಿಂತ ಮೊದಲು ನಟಿಸಿರಬಹುದಾದ ಚಿತ್ರ ಎಂದನಿಸುತ್ತಿದೆ. ಚಿತ್ರ ಯಾವಾಗ ಶುರುವಾಯಿತೋ ಗೊತ್ತಿಲ್ಲ. ಈಗ ಬಿಡುಗಡೆಯಾಗುವುದಕ್ಕಂತೂ ಸಜ್ಜಾಗಿದೆ.

ಅಂದಹಾಗೆ, ಚಿತ್ರದ ಹೆಸರು ‘ರಾಜದ್ರೋಹಿ’. ಈ ಚಿತ್ರವನ್ನು ಧನುಶ್‍ ಕಂಬೈನ್ಸ್ ಬ್ಯಾನರ್‌ ಅಡಿಯಲ್ಲಿ ಮಹದೇವಯ್ಯ ನಿರ್ಮಾಣ ಮಾಡಿದ್ದು, ಸಮರ್ಥರಾಜ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅನಂತನಾಗ್, ಲಕ್ಷೀ, ಶರಣ್, ಅಭಿಜಿತ್‍, ‘ಪಟ್ರೆ’ ಅಜಿತ್, ‘ಒರಟ’ ಪ್ರಶಾಂತ್‍ ಮುಂತಾದವರು ನಟಿಸಿದ್ದಾರೆ.

‘ರಾಜದ್ರೋಹಿ’ ಚಿತ್ರ ಯಾಕೆ ತಡವಾಯಿತು ಎಂದರೆ ನಿರ್ಧಿಷ್ಟ ಕಾರಣ ನೀಡುವುದಿಲ್ಲ ನಿರ್ದೇಶಕ ಸಮರ್ಥ್ ರಾಜ್‍. ‘ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಅವರೆಲ್ಲರ ಡೇಟ್ಸ್ ಹೊಂದಿಸಿ ಚಿತ್ರೀಕರಣ ಮಾಡುವುದು ತಡವಾಯಿತು. ಅಪ್ಪ-ಅಮ್ಮ ಕಣ್ಣ ಮುಂದೆ ಇದ್ದರೂ ಗುರುತಿಸಲಾಗದಂತ ಮಕ್ಕಳ ಪರಿಸ್ಥಿತಿಯ ಸುತ್ತು ಸುತ್ತುವ ಚಿತ್ರ ಇದು. ಮುಂದೆ ಬೇರೆಬೇರೆ ಅವಘಡಗಳು ಸಂಭವಿಸಿದಾಗ, ಹೇಗೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದು ಚಿತ್ರದ ಕಥೆ. ಬೆಂಗಳೂರು, ಮೈಸೂರು, ಮಂಗಳೂರು, ತಮಿಳು ನಾಡು ಮುಂತಾದ ಕಡೆ 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದರು ಸಮರ್ಥರಾಜ್‍.

ಈ ಚಿತ್ರದ ಕುರಿತು ಮಾತನಾಡುವ ಹಿರಿಯ ನಟ ಅಭಿಜಿತ್‍, ‘ಚಿತ್ರ ನೋಡಿದೆ. ಮಾಸ್‍ ಫೀಲ್‍ ಇರುವ ಚಿತ್ರ ಇದು. ಕೊನೆಯ 20 ನಿಮಿಷಗಳು ವಿಭಿನ್ನವಾಗಿದೆ. ಅದೇ ಈ ಚಿತ್ರದ ಹೈಲೈಟ್‍. ಬಹಳ ಚೆನ್ನಾಗಿ ಅವರು ಈ ಚಿತ್ರವನ್ನು ಮಾಡಿದ್ದಾರೆ. ಚಿತ್ರ ತಡವಾದರೂ ಬೇರೆ ಚಿತ್ರ ಮಾಡಲಿಲ್ಲ. ಆದರೆ, ಇದನ್ನು ಬಿಡುಗಡೆಯೇ ಮಾಡಿ, ಇನ್ನೊಂದು ಚಿತ್ರಕ್ಕೆ ಕೈಹಾಕುವುದಾಗಿ ಅವರು ಹೇಳಿದ್ದರು. ಈ ಚಿತ್ರದಲ್ಲಿ ನನಗೊಂದು ಒಳ್ಳೆಯ ಪಾತ್ರವಿದೆ. ನನ್ನಿಂದ ಚೆನ್ನಾಗಿ ಮಾಡಿಸಿದ್ದಾರೆ’ ಎಂದರು.

‘ರಾಜದ್ರೋಹಿ’ ಚಿತ್ರಕ್ಕೆ ರಘು ತುಮಕೂರು ಸಂಗೀತ, ಭೂಪತಿ ಅವರ ಹಿನ್ನೆಲೆ ಸಂಗೀತ, ಸತೀಶ್‌ ಮನೋಹರ್ ಮತ್ತು ವೀನಸ್‍ ಮೂರ್ತಿ ಛಾಯಾಗ್ರಹಣ ಮಾಡಿದ್ದು, ಆಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.


ಇದನ್ನೂ ಓದಿ :-

ಹೆಚ್ಚಿನ ಓದಿಗಾಗಿ :-

  1. Дим, РґРѕР±СЂРѕРіРѕ времени суток, отпиши Р·Р° РїСЂРёС…РѕРґ, заказала тоже СЌР№С„-РґРёСЃСЃ, скажи, чего ожидать? https://linkin.bio/chewbupyc871 РЎ РїРѕРёСЃРєРѕРј клада РЅРµ было РЅРµ…

  2. Если Р±С‹ ещё доставка РЅРµ выпала РЅР° выходные – ждать пришлось Р±С‹ ещё меньше, так как курьерская служба РїРѕ выходным…


One thought on “ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು …

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ