ʻElumaleʼಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ …
‘ಏಕ್ ಲವ್ ಯಾ’ ಚಿತ್ರದಲ್ಲಿ ನಾಯಕನಾಗಿದ್ದ ರಕ್ಷಿತಾ ಪ್ರೇಮ್ ಸಹೋದರ ರಾಣ, ಆ ನಂತರ ತರುಣ್ ಸುಧೀರ್ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವರ್ಷದ ಆರಂಭದಲ್ಲೇ ಬಂದಿತ್ತು. ಆದರೆ, ಅದರ ಹೆಸರೇನು? ಸೇರಿದಂತೆ ಯಾವ ಪ್ರಶ್ನೆಗೂ ಚಿತ್ರತಂಡ ಉತ್ತರ ಕೊಟ್ಟಿರಲಿಲ್ಲ. ಈಗ ಕೊನೆಗೂ ಉತ್ತರ ಸಿಕ್ಕಿದ್ದು, ಚಿತ್ರಕ್ಕೆ ‘ಏಳುಮಲೆ’ ಎಂಬ ಹೆಸರಿಡಲಾಗಿದ್ದು, ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ತರುಣ್ ಕಿಶೋರ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಜೊತೆಯಾಗಿ ನಿರ್ಮಾಣ ಮಾಡುತ್ತಿರುವ ‘ಏಳುಮಲೆ’ (Elumale) ಚಿತ್ರದ ಶೀರ್ಷಿಕೆ ಟೀಸನ್ನು ಶಿವರಾಜಕುಮಾರ್ ಹಾಗೂ ‘ಜೋಗಿ’ ಪ್ರೇಮ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ರಾಣ ಹಾಗೂ ‘ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.
ಟೀಸರ್ ನೋಡಿದರೆ, ಇದೊಂದು ಸಂಘರ್ಷದ ಕಥೆ ಎಂದನಿಸಬಹುದು. ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪುನೀತ್ ರಂಗಸ್ವಾಮಿ, ‘ಇದು ಸಂಘರ್ಷದ ಕಥೆಯಲ್ಲ. ಇದೊಂದು ಪ್ರೇಮಕಥೆ. ಜೊತೆಗೆ ನಾವೇನು ತೆಗೆದುಕೊಂಡಿದ್ದೇವೆ ಆ ಕಾಲಘಟ್ಟದಲ್ಲಿ ನಡೆದ ಕಥೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ’ ಎಂದು ತಿಳಿಸಿದರು.
ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆಯುವ ಕಥೆಯಾಗಲಿದೆಯಂತೆ. ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ’ ಎಂಬ ಟ್ಯಾಗ್‍ಲೈನ್ ನೀಡಲಾಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ಈ ಚಿತ್ರದಲ್ಲಿ ರಾಣ ಹಾಗೂ ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಮುಂತಾದವರು ಇದ್ದಾರೆ. ಅದ್ವಿತ್ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಡಿ ಇಮ್ಮನ್ ಸಂಗೀತ ಚಿತ್ರಕ್ಕಿದೆ. ಈ ಚಿತ್ರವು ಕನ್ನಡವಲ್ಲದೆ ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
I never thought about it that way before. Great insight!
Je suis captive par Ruby Slots Casino, on ressent une ambiance de fete. Les titres proposes sont d’une richesse folle,…
Je suis sous le charme de Ruby Slots Casino, ca pulse comme une soiree animee. La gamme est variee et…
modernhomefinds.click – Love the stylish home ideas here, everything feels fresh and cozy.
My programmer is trying to persuade me to move to .net ffrom PHP. I have always disliked the idea because…





**mind vault**
mind vault is a premium cognitive support formula created for adults 45+. It’s thoughtfully designed to help maintain clear thinking