‘Bangle Bangari’ ಆಯ್ತು; ಈಗ ‘ವೈರಲ್ ವಯ್ಯರಿ’ ಸರದಿ …

ಯುವ ರಾಜಕುಮಾರ್ (Yuva Rajkumar) ಅಭಿನಯದ ‘ಎಕ್ಕ’ (Ekka) ಚಿತ್ರದ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿ ಜನಮನ್ನಣೆ ಪಡೆದಿತ್ತು. ಈ ಹಾಡಿಗೆ ದಾಖಲೆ ಸಂಖ್ಯೆಯಲ್ಲಿ ರೀಲ್ಸ್ ಮಾಡಿದೆ. ಈ ಹಾಡು ಕೇವಲ 22 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದ್ದು, ಅತೀ ಹೆಚ್ಚು ವೀಕ್ಷಣೆ ಪಡೆದ ಹಾಡುಗಳ ಪೈಕಿ 29ನೇ ಸ್ಥಾನ ಪಡೆದಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ‘ಬ್ಯಾಂಗಲ್ ಬಂಗಾರಿ’(Bangle Bangari) ಆಯ್ತು; ಈಗ ‘ವೈರಲ್ ವಯ್ಯರಿ’ ಸರದಿ …
ಗಾಲಿ ಜನಾರ್ಧನ ರೆಡ್ಡಿ ಮಗ ‘ಕಿರೀಟಿ’ ಚಿತ್ರರಂಗದಲ್ಲಿ ಛಾಪು ಮೂಡಿಸಲು ಸಜ್ಜಾಗಿದ್ದು, ಮೊದಲ ಚಿತ್ರ ‘ಜೂನಿಯರ್’, ಜುಲೈ 18ರಂದು ಬಿಡುಗಡೆಯಾಗಲಿದೆ. ಈಗ ಚಿತ್ರದ ಎರಡನೇ ಹಾಡು ಆದಿತ್ಯ ಮ್ಯೂಸಿಕ್ ಕನ್ನಡದಲ್ಲಿ ಬಿಡುಗಡೆಯಾಗಿದೆ. ‘ವೈರಲ್ ವಯ್ಯರಿ …’ ಹಾಡಿಗೆ ಪವನ್ ಭಟ್ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತಕ್ಕೆ ಕಿರೀಟಿ ಮತ್ತು ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ‘ಜೂನಿಯರ್’ ಚಿತ್ರದಲ್ಲಿ ಕಿರೀಟಿ ಜೊತೆಗೆ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದಕ್ಕೂ ಮೊದಲು ‘ಲೆಟ್ಸ್ ಲೀವ್ ದಿಸ್ ಮೂವೆಂಟ್ …’ ಎಂಬ ಹಾಡು ಮತ್ತು ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳಿರುವಾಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆಯಂತೆ.
‘ಜೂನಿಯರ್’ ಚಿತ್ರದಲ್ಲಿ ಕಿರೀಟಿಗೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಮಿಕ್ಕಂತೆ ರವಿಚಂದ್ರನ್, ಜೆನಿಲಿಯಾ ಡಿ’ಸೋಜ ಮುಂತಾದವರು ನಟಿಸಿದ್ದಾರೆ. ಇದೊಂದು ತಂದೆ-ಮಗನ ಬಾಂಧವ್ಯದ ಚಿತ್ರವಾಗಿದ್ದು, ರವಿಚಂದ್ರನ್ ಮತ್ತು ಕಿರೀಟಿ ತಂದೆ-ಮಗನಾಗಿ ಕಾಣಿಸಿಕೊಂಡಿದ್ದಾರೆ.
ಪುನೀತ್ ರಾಜಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ‘ಬಾಹುಬಲಿ’ ಮತ್ತು ‘RRR’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಸೆಂಥಿಲ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅಲಿಯಾಸ್ ಡಿಎಸ್‍ಪಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
‘ಜೂನಿಯರ್’ ಚಿತ್ರವು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ :-
https://the.hosting/
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
Sprunki Incredibox adds a fresh twist to music mixing with new beats and visuals. It’s a fun, creative spin that keeps things easy to play. Check out more at Kids Games.