ರೆಟ್ರೋ ಲುಕ್‌ನಲ್ಲಿ ಧನಂಜಯ್; ಇಲ್ಲಿದೆ ‘666 Operation Dream Theatre’ ಚಿತ್ರದ ಫಸ್ಟ್‌ ಲುಕ್

666 operation dream theatre

ಹೇಮಂತ್‍ ರಾವ್ ನಿರ್ದೇಶನದ ‘666 Operation Dream Theatre’ ಚಿತ್ರವು ಘೋಷಣೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತವಾಗಿ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ, ಇದೀಗ ಧನಂಜಯ್‍ ಅವರ ಫಸ್ಟ್ ಲುಕ್‍ ಬಿಡುಗಡೆ ಮಾಡಿದೆ.

ಧನಂಜಯ್‌, ‘666 ಆಪರೇಷನ್ ಡ್ರೀಮ್ ಥಿಯೇಟರ್ ‘ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೆಟ್ರೋ ಲುಕ್‍ನಲ್ಲಿ ಧನಂಜಯ ಪ್ರತ್ಯಕ್ಷರಾಗಿದ್ದಾರೆ. ಈ ಪೋಸ್ಟರ್‌ಗಳು ಡಾ. ರಾಜಕುಮಾರ್‌ ಅಭಿನಯದ 999 ಸರಣಿಯ ಬಾಂಡ್‍ ಚಿತ್ರಗಳನ್ನು ನೆನಪಿಸುತ್ತವೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಧನಂಜಯ್‌, ‘ಇದುವರೆಗೂ ಮಾಡಿರದ ಒಂದು ಪಾತ್ರ ಮತ್ತು ಕಾಣಿಸಿಕೊಳ್ಳದ ಒಂದು ಲುಕ್‍ನಲ್ಲಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’, ಪ್ರೇಕ್ಷಕರನ್ನು ಆರಂಭದಿಂದಲೇ ಹಿಡಿದಿಟ್ಟುಕೊಳ್ಳುವ ಒಂದು ಚಿತ್ರ. ಈ ಚಿತ್ರವು ವಿಭಿನ್ನ ಜಗತ್ತಿನಲ್ಲಿ ನಡೆಯುತ್ತದೆ ಮತ್ತು ಪ್ರೇಕ್ಷಕರಿಗೆ ಹಲವು ಅಚ್ಚರಿಗಳನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಹೇಳಿದ್ದಾರೆ.

ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ನಿರ್ಮಿಸಲಾಗುತ್ತಿದೆ. ಹೇಮಂತ್ ಎಂ. ರಾವ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿ ಸಂಗೀತ ಛಾಯಾಗ್ರಾಹಣದ ಜವಾಬ್ದಾರಿ ಹೊತ್ತಿದ್ದಾರೆ.

ಸದ್ಯದಲ್ಲೇ ಶಿವರಾಜಕುಮಾರ್‌ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು ಅವರ ಮೊದಲ ನೋಟ ಬಿಡುಡೆಯಾಗುವ ನಿರೀಕ್ಷೆ ಇದೆ. ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:-

Leave a Reply

Your email address will not be published. Required fields are marked *