Bigg Boss Kannada 12; ಮೊದಲ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆಯನ್ನೆ ಈಗಲೂ ಪಡೆಯೋಕೆ ಆಗುತ್ತಾ?’: ಸುದೀಪ್ ಪ್ರಶ್ನೆ

ಈ ವರ್ಷ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಡುತ್ತಾರೋ, ಇಲ್ಲವೋ ಎಂಬ ಕನ್ನಡಿಗರ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸುದೀಪ್, ‘ಬಿಗ್ ಬಾಸ್ – ಸೀಸನ್ 12’ (Bigg Boss Kannada 12) ಕಾರ್ಯಕ್ರಮವನ್ನು ನಡೆಸಿಕೊಡುವುದಷ್ಟೇ ಅಲ್ಲ, ಇನ್ನೂ ನಾಲ್ಕು ಸೀಸನ್‍ಗಳ ನಿರೂಪಣೆ ಮಾಡಲಿದ್ದಾರಂತೆ. ಹಾಗಂತ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ.
‘ಬಿಗ್ ಬಾಸ್ – ಸೀಸನ್ 11’ ತಮ್ಮ ಕೊನೆಯ ಸೀಸನ್ ಆಗಲಿದೆ ಎಂದು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲೇ ಸುದೀಪ್ ಘೋಷಿಸಿದ್ದರು. ಈ ಬಾರಿಯ ಗ್ರಾಂಡ್ ಫಿನಾಲೆ ತಮ್ಮ ಕೊನೆಯ ಗ್ರಾಂಡ್ ಫಿನಾಲೆ ಆಗಲಿದೆ ಎಂದು ಸಹ ಸುದೀಪ್ ಹೇಳಿಕೊಂಡಿದ್ದರು. ಅಲ್ಲಿಗೆ ಸುದೀಪ್ ಈ ಬಾರಿ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ, ಅವರ ಬದಲು ಬೇರೆಯವರು ನಡೆಸಿಕೊಡಬಹುದು ಎಂಬ ಚರ್ಚೆ ನಡೆಯುತ್ತಿರುವಾಗಲೇ, ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಬಿಗ್ ಬಾಸ್ – ಸೀಸನ್ 12’ ಕಾರ್ಯಕ್ರಮದ ನಿರೂಪಣೆಯನ್ನು ಮಾಡುವುದಾಗಿ ಸುದೀಪ್ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಾನು ಕಾರ್ಯಕ್ರಮವನ್ನು ನಿರೂಪಿಸುವುದಿಲ್ಲ ಎಂದು ಕಳೆದ ವರ್ಷವೇ ಹೇಳಿದ್ದೆ. ಅದಕ್ಕೆ ಕಾರಣವಿತ್ತು. ಈಗ ವಾಪಸ್ಸು ಬರುತ್ತಿರುವುದಕ್ಕೂ ಕಾರಣವಿದೆ. ನಾನು ವಾಪಸ್ಸು ಬರುತ್ತಿರುವುದಕ್ಕೆ ಮುಖ್ಯ ಕಾರಣ, ಜನರ ಪ್ರೀತಿ. ಬಹಳಷ್ಟು ಜನ ನಾನು ಕಾರ್ಯಕ್ರಮವನ್ನು ಮುಂದುವರೆಸಬೇಕು ಎಂದು ಆಸೆಪಟ್ಟಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕಾರ್ಯಕ್ರಮ ಬಹಳ ದೊಡ್ಡದಾಗಿ ಬೆಳೆದಿದೆ. ಜನ ಐಪಿಎಲ್ ಮಟ್ಟಕ್ಕೆ ಈ ಕಾರ್ಯಕ್ರಮವನ್ನು ನೋಡುತ್ತಿದ್ದಾರೆರೆ. ಮೂರು ತಿಂಗಳುಗಳ ಕಾಲ ಬೇರೆ ಯಾವುದೇ ವಿಷಯದ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ, ಈ ಕಾರ್ಯಕ್ರಮವನ್ನು ಇನ್ನಷ್ಟು ಚೆನ್ನಾಗಿ ರೂಪಿಸುವುದು ನಮ್ಮ ಜವಾಬ್ದಾರಿ ಸಹ ಹೌದು’ ಎಂದರು.
ಸುದೀಪ್ ತಮ್ಮ ಸಂಭಾವನೆ ಏರಿಸಿಕೊಳ್ಳುವುದಕ್ಕೆ ಹೀಗೆ ಮಾಡಿದರು ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಈ ಕುರಿತು ಮಾತನಾಡಿರುವ ಅವರು, ‘ನಾನು ಇದನ್ನು ಸಂಭಾವನೆ ಏರಿಸಿಕೊಳ್ಳುವುದಕ್ಕೋ ಅಥವಾ ಬೇರೆ ಯಾವದೋ ಕಾರಣಕ್ಕೆ ಮಾಡಿದ್ದಲ್ಲ. ಪ್ರತಿ ವರ್ಷ ಮನೆ ಬಾಡಿಗೆ ಹೆಚ್ಚಾಗುತ್ತದೆ. ಮನೆ ಬಾಡಿಗೆ ವಿಷಯದಲ್ಲೂ ಪ್ರತೀ ವರ್ಷ ಶೇ. 10ರಷ್ಟು ಏರಿಕೆ ಆಗುತ್ತದೆ. ಹಾಗೆ ಇಲ್ಲೂ ವರ್ಷದಿಂದ ವರ್ಷಕ್ಕೆ ವ್ಯತ್ಯಾಸ ಇದ್ದೇ ಇರುತ್ತದೆ. ಮೊದಲ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆಯನ್ನೆ ಈಗಲೂ ಪಡೆಯೋಕೆ ಆಗುತ್ತಾ?’ ಎಂದು ಪ್ರಶ್ನಿಸುತ್ತಾರೆ ಸುದೀಪ್.
ಇದನ್ನ ಓದಿದ್ರಾ..?
[…] Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty […]
[…] […]
[…] […]
[…] Ramayana Rocking Star Yash ಫಸ್ಟ್ ಲುಕ್ […]
[…] Ramayana Rocking Star Yash ಫಸ್ಟ್ ಲುಕ್ […]
3 thoughts on “Bigg Boss Kannada 12; ಮೊದಲ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆಯನ್ನೆ ಈಗಲೂ ಪಡೆಯೋಕೆ ಆಗುತ್ತಾ?’: ಸುದೀಪ್ ಪ್ರಶ್ನೆ”