ಹೊಸ ಅವತಾರದಲ್ಲಿ Rashmika Mandanna; ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ …

ಭಾರತದ ಅತ್ಯಂತ ಬೇಡಿಕೆಯ ಮತ್ತು ಬ್ಯುಸಿ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ (Rashmika Mandanna). ಸಾಲುಸಾಲು ಚಿತ್ರದಗಳಲ್ಲಿ ನಟಿಸುತ್ತಿರುವ ರಶ್ಮಿಕಾ, ಇದೀಗ ‘ಮೈಸಾ’ (Mysaa) ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಮೈಸಾ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದು, ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ವಿಶೇಷವೆಂದರೆ, ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಸೆಲೆಬ್ರಿಟಿ ಈ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ತೆಲುಗಿನ ಪೋಸ್ಟರನ್ನು ನಿರ್ದೇಶಕ ಹನು ರಾಘವಪುಡಿ ಬಿಡುಗಡೆ ಮಾಡಿದರೆ, ತಮಿಳಿನಲ್ಲಿ ‘ಕುಬೇರ’ ನಟ ಧನುಷ್ ಬಿಡುಗಡೆ ಮಾಡಿದ್ದರೆ. ಕನ್ನಡದಲ್ಲಿ ಶಿವರಾಜಕುಮಾರ್, ಹಿಂದಿಯಲ್ಲಿ ವಿಕ್ಕಿ ಕೌಶಾಲ್ ಮತ್ತು ಮಲಯಾಳಂ ಪೋಸ್ಟರನ್ನು ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡಿ ರಶ್ಮಿಕಾ ಮತ್ತು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಇದುವರೆಗೂ ಸಾಫ್ಟ್ ಆದಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ, ಈ ಚಿತ್ರದಲ್ಲಿ ಉಗ್ರವಾತಾರ ತಾಳಿದ್ದಾರೆ. ಸಾಂಪ್ರದಾಯಿಕ ಸೀರೆ ಮತ್ತು ಆಭರಣಗಳನ್ನು ತೊಟ್ಟಿರುವ ರಶ್ಮಿಕಾ, ತಮ್ಮ ರಕ್ತ ಅಂಟಿದ ಮುಖ ಮತ್ತು ಸಿಟ್ಟಿನ ಲುಕ್‍ನಿಂದ ಗಮನಸೆಳೆಯುತ್ತಾರೆ. ಕೈಯಲ್ಲಿ ಯಾವುದೋ ಆಯುಧ ಹಿಡಿದು, ಹೋರಾಟಕ್ಕೆ ಸಜ್ಜಾದಂತೆ ಕಾಣುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರವೀಂದ್ರ, ‘ಸುಮಾರು ಎರಡು ವರ್ಷಗಳ ಪರಿಶ್ರಮದಿಂದ ಈ ಕಥೆ ರೂಪುಗೊಂಡಿದೆ. ಕಥೆ ಮತ್ತು ಪಾತ್ರದ ಪ್ರತಿಯೊಂದು ವಿಷಯವನ್ನು ಸಾಕಷ್ಟು ಶ್ರಮ ಹಾಕಿ ಸಿದ್ಧಪಡಿಸಿದ್ದೇವೆ. ಈ ಕಥೆ ಹೇಳುವುದಕ್ಕೆ ನಾವು ಸಜ್ಜಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ಹೇಳಿದ್ದಾರೆ.
ರಶ್ಮಿಕಾ ಅಭಿನಯದ ‘ಕುಬೇರ’ ಚಿತ್ರವು ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ರಶ್ಮಿಕಾ ಅಭಿನಯದ ಬಗ್ಗೆ ಮೆಚ್ಚುಗೆ ಕೇಳಿಬರುತ್ತಿದೆ. ಇದಲ್ಲದೆ ತೆಲುಗಿನಲ್ಲಿ ‘ದಿ ಗರ್ಲ್‍ಫ್ರೆಂಡ್’ ಮತ್ತು ಹಿಂದಿಯಲ್ಲಿ ‘ತಮ’ ಹಾಗೂ ‘ಕಾಕ್ಟೇಲ್ 2’ ಎಂಬ ಎರಡು ಚಿತ್ರಗಳಲ್ಲಿ ರಶ್ಮಿಕಾ ನಟಿಸುತ್ತಿದ್ದು, ಈ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿವೆ.

ಇದನ್ನೂ ಓದಿ:-

Doora Theera Yaana Trailer; ಮಂಸೋರೆ ಪಯಣದಲ್ಲಿ ಹೊಸಬರ ಯಾನ
ವರ್ಷಗಳ ನಂತರ Junior ಸಿನಿಮಾದ Teaser ಬಿಡುಗಡೆ

ಹೆಚ್ಚಿನ ಓದಿಗೆ:-
Increase Blog Trafic – Why Hosting A Blog Carnival Will Bring More Visiitors blog (Guillermo)
бери не пожалеешь. https://linkin.bio/nuwyquqazixow Магазин агонь! Брал как то давно. все ровно!
Наша платформа работает круглосуточно и не знает слова перерыв. Бронировать и планировать можно где угодно: в поезде, на даче, в…
It’s going to be ending of mine day, but before finish I am reading this fantastic post to increase my…
Hey there, You have done a fantastic job. I will certainly digg it and personally recommend to my friends. I…
2 thoughts on “ಹೊಸ ಅವತಾರದಲ್ಲಿ Rashmika Mandanna; ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ …”