Adonditthu kaala; 16 ವರ್ಷದ ಹುಡುಗನಾದ Vinay Rajkumar …

ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ವಿನಯ್‍ ರಾಜಕುಮಾರ್ (Vinay Rajkumar) ಅಭಿನಯದ ‘ಅಂದೊಂದಿತ್ತು ಕಾಲ’ ಅದ್ಯಾಕೋ ಕುಂಟುತ್ತಾ ಸಾಗಿ, ಇದೀಗ ಕೊನೆಗೂ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಕೆಲವು ದಿನಗಳ ಹಿಂದೆ, ಚಿತ್ರದ ಮೊದಲ ಹಾಡನ್ನು ಗಣೇಶ್‍ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದರು. ಇದೀಗ ‘ಅರೇರೇ ಯಾರೋ ಇವಳು …’ ಎಂಬ ಎರಡನೇ ಹಾಡು ಬಿಡುಗಡೆಯಾಗಿದೆ.

ಈ ಹಾಡನ್ನು ಇಡೀ ರಾಜ್ಯಕ್ಕೆ 10ನೇ ತರಗತಿಯಲ್ಲಿ ಫಸ್ಟ್ ಬಂದ ಮಲ್ಲಸಂದ್ರದಲ್ಲಿರುವ ಬಿ.ಎನ್.ಆರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಬಿಡುಗಡೆ ಮಾಡಿಸಲಾಯಿತು.

ಈ ಚಿತ್ರದ ಕುರಿತು ಮಾತನಾಡಿದ ವಿನಯ್‍ ರಾಜಕುಮಾರ್, ‘ಇದು ನನ್ನ ಮೆಚ್ಚಿನ ಗೀತೆ. ನಾನು ನಿರ್ದೇಶಕ ಕೀರ್ತಿಗೆ ಇದನ್ನೇ ಮೊದಲು ಬಿಡುಗಡೆ ಮಾಡಿ ಎಂದಿದ್ದೆ. ಈ ಚಿತ್ರದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದೇನೆ. ಅದು ನಿಜವಾಗಲೂ ಸವಾಲಗಿತ್ತು. ಸಾಕಷ್ಟು ತೂಕ ಕಡಿಮೆ ಮಾಡಿಕೊಂಡು ಕಾಣಿಸಿಕೊಂಡಿದ್ದೇನೆ. ಹಾಡು ತುಂಬಾ ಚೆನ್ನಾಗಿ ಬಂದಿದೆ.  

ಚಿತ್ರದಲ್ಲಿಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆ. ಆದರೆ, ನಿಜ ಜೀವನದಲ್ಲಿ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್‍ಗಳಿವೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಈ ಚಿತ್ರದ ಶಾಲಾ ವಿದ್ಯಾರ್ಥಿಯ ಹಾಡಿನಲ್ಲಿ ಕಾಣಿಸಿಕೊಂಡಿರುವ ನಿಶಾ ರವಿಕೃಷ್ಣನ್, ‘ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಮುಖ್ಯವಾದ ಪಾತ್ರ.ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸುಂದರ ಪ್ರಮುಖ ಪಾತ್ರವಾಗಿದ್ದು, ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು.

ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ವಿನಯ್ ರಾಜಕುಮಾರ್ ಹಾಗೂ ನಿಶಾ ಕಾಣಿಸಿಕೊಂಡಿದ್ದಾರೆ. ನಿಹಾಲ್‍ ತಾರೋ ಧ್ವನಿಯಾಗಿರುವ ಹಾಡಿಗೆ ರಾಘವೇಂದ್ರ ಸಂಗೀತ ಸಂಯೋಜಿಸಿದ್ದಾರೆ

ಭುವನ್ ಮ್ಯೂವಿಸ್ ಬ್ಯಾನರ್ ಅಡಿ ಭುವನ್ ಸುರೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ಕೀರ್ತಿ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿನಯ್‍ ರಾಜಕುಮಾರ್‍, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್‍, ಜಗ್ಗಪ್ಪ, ಅರುಣಾ ಬಾಲರಾಜ್‍ ಮುಂತಾದವರು ನಟಿಸಿರುವ ಈ ಚಿತ್ರದಲ್ಲಿ ರವಿಚಂದ್ರನ್‍ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಅಂದೊಂದಿತ್ತು ಕಾಲ’ ಚಿತ್ರವು ಆಗಸ್ಟ್ 29ರಂದು ಬಿಡಗುಡೆ ಆಗಲಿದೆ.


ಹೆಚ್ಚಿನ ಓದಿಗಾಗಿ:

One thought on “Adonditthu kaala; 16 ವರ್ಷದ ಹುಡುಗನಾದ Vinay Rajkumar …

Leave a Reply

Your email address will not be published. Required fields are marked *