ವಿಜಯ್ ಹುಟ್ಟುಹಬ್ಬಕ್ಕೆ Jana Nayagan ಟೀಸರ್ ಬಿಡುಗಡೆ

ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆ ಕೆ.ವಿ.ಎನ್ ಪ್ರೊಡಕ್ಷನ್ಸ್ ( KVN Production) ಸಂಸ್ಥೆಯು ತಮಿಳಿನಲ್ಲಿ ವಿಜಯ್ (Vijay) ಅಭಿನಯದ ‘ಜನ ನಾಯಗನ್’ (Jana Nayagan) ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಭಾನುವಾರ, ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ವಿಜಯ್ ಅವರ ಮೊದಲ ಟೀಸರ್ ಬಿಡುಗಡೆ ಮಾಡಿದೆ.
‘ಫಸ್ಟ್ ರೋರ್’ (First roar) ಎಂಬ ಈ ಟೀಸರ್‍ನಲ್ಲಿ ವಿಜಯ್ ಮಾಸ್ ಎಂಟ್ರಿ ಕೊಡುವುದನ್ನು ನೋಡಬಹುದು. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಒಬ್ಬ ನಿಜವಾದ ನಾಯಕ ಜನರಿಗಾಗಿ ನಿಲ್ಲುತ್ತಾರೆ ಎಂಬ ವಾಕ್ಯದೊಂದಿಗೆ ಈ ಟೀಸರ್ ಪ್ರಾರಂಭವಾಗುತ್ತದೆ. ಈ ಚಿತ್ರದ ಚಿತ್ರೀಕರಣ ಈ ವರ್ಷದ ಜನವರಿಯಲ್ಲಿ ಪ್ರಾರಂಭವಾಗಿತ್ತು. ಚೆನ್ನೈ, ಪಯನೂರು ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ.
‘ಜನ ನಾಯಗನ್’ ಚಿತ್ರವು ವಿಜಯ್ ಅಭಿನಯದ 69ನೇ ಚಿತ್ರವಾಗಿದ್ದು, ಇದು ಅವರ ಸದ್ಯದ ಮಟ್ಟಿಗಿನ ಕೊನೆಯ ಚಿತ್ರ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ವಿಜಯ್, ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ವರ್ಷ ನಡೆಯುವ ತಮಿಳು ನಾಡು ಅಸೆಂಬ್ಲಿ ಚುನಾವಣೆಗಳಲ್ಲಿ ವಿಜಯ್ ಅವರ ಪಕ್ಷವು ಸಕ್ರಿಯವಾಗಿ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ, ವಿಜಯ್ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಚಿತ್ರವಾಗಿದೆ.
ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬ್ಬಿ ಡಿಯೋಲ್, ಗೌತಮ್ ಮೆನನ್, ಪ್ರಕಾಶ್ ರೈ, ಪ್ರಿಯಾಮಣಿ ಮುಂತಾದವರು ನಟಿಸಿದ್ದಾರೆ. ಎಚ್. ವಿನೋದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಕೆ. ವೆಂಕಟನಾರಾಯಣ ನನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸತ್ಯನ್ ಸೂರ್ಯನ್ ಛಾಯಾಗ್ರಹಣ ಮತ್ತು ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ.

‘ಜನ ನಾಯಗನ್’ ಚಿತ್ರವು ಸಂಕ್ರಾಂತಿ ಪ್ರಯುಕ್ತ 2026ರ ಜನವರಿ 09ರಂದು ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
My brother recommended I might like this website. He was totally right. This post truly made my day. You cann’t…
Респектос бразы радуете РЅРµ только Р РѕСЃСЃРёСЋ РЅРѕ Рё Украину )) отличный магаз https://hoo.be/pufydqicve Так что тут 50:50 если тебя РїСЂРёРјСѓС‚.…
Thanks for every other informative blog. The place else may just I am getting that kind of information written in…
You ought to be a part of a contest for one of the greatest blogs online. I’m going to highly…
Its like you read my mind! You appear to know so much about this, like you wrote the book in…
2 thoughts on “ವಿಜಯ್ ಹುಟ್ಟುಹಬ್ಬಕ್ಕೆ Jana Nayagan ಟೀಸರ್ ಬಿಡುಗಡೆ”