Vishnuvardhan ನೆನಪಲ್ಲಿ ಎರಡು ದಿನಗಳ ‘ಯಜಮಾನರ ಅಮೃತ ಮಹೋತ್ಸವ’

ವಿಷ್ಣುವರ್ಧನ್(Vishnuvardhan) ಅವರು ಬದುಕಿದ್ದರೆ, ಈ ಸೆಪ್ಟೆಂಬರ್ 18ಕ್ಕೆ 75 ವರ್ಷ ಮುಗಿಸಿ, 76ಕ್ಕೆ ಕಾಲಿಡುತ್ತಿದ್ದರು. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು (Vishnuvardhan Birthday) ಈ ಬಾರಿ ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮುಂದಾಗಿದ್ದಾರೆ.
ಅಮೃತ ಮಹೋತ್ಸವವನ್ನು ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದು, ಇದರಲ್ಲಿ ಕನ್ನಡದ ಸಮಸ್ತ ಚಿತ್ರರಂಗ ಭಾಗವಹಿಸಲಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಅಮೃತ ಮಹೋತ್ಸವದ ನೇತೃತ್ವವನ್ನು ನಿರ್ದೇಶಕ ಎಸ್. ನಾರಾಯಣ್ ವಹಿಸಿಕೊಂಡಿದ್ದು, ಮಾರ್ಗದರ್ಶಕರಾಗಿ ಎಸ್. ವಿ. ರಾಜೇಂದ್ರಸಿಂಗ್ ಬಾಬು ಜೊತೆಯಾಗಿದ್ದಾರೆ.
ಈ ವಿಷಯವಾಗಿ ಭಾನುವಾರ ಪತ್ರಿಕಾ ಗೋಷ್ಠಿಯನ್ನು ಕರೆಯಲಾಗಿತ್ತು. ಈ ಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ರಮೇಶ್ ಯಾದವ್, ಎಸ್. ನಾರಾಯಣ್, ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೇಂದ್ರಸಿಂಗ್ ಬಾಬು, ‘ಈ ಅಮೃತ ಮಹೋತ್ಸವಕ್ಕೆ ವಿಷ್ಣುವರ್ಧನ್ ಅವರ ಆಪ್ತರನ್ನೆಲ್ಲ ಆಹ್ವಾನಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಬರೀ ಕನ್ನಡವಷ್ಟೇ ಅಲ್ಲ, ಹಿಂದಿ, ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ಖ್ಯಾತ ನಟರನ್ನು ಈ ಅಮೃತ ಮಹೋತ್ಸವಕ್ಕೆ ಹಾಜರಾಗುವಂತೆ ನೋಡಿಕೊಳ್ಳುವುದಾಗಿ’ ತಿಳಿಸಿದರು.
ನಂತರ ಮಾತನಾಡಿದ ಎಸ್. ನಾರಾಯಣ್ ಅವರು, ‘ಈಗಾಗಲೇ ‘ಅಮರ ನಟ’ ಎಂಬ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ಅವರ ಹೆಸರಲ್ಲಿ, ‘ಅಂಬಿ ಸಂಭ್ರಮ’ ಎನ್ನುವ ಕಾರ್ಯಕ್ರಮವನ್ನು ಅಂಬರೀಶ್ ಅವರ ಹೆಸರಲ್ಲಿ ಆಯೋಜಿಸಿದ ಅನುಭವ ನನಗಿದೆ. ಕನ್ನಡ ಚಿತ್ರರಂಗದ ತ್ರಿಮೂರ್ತಿಗಳಲ್ಲೊಬ್ಬರದ ಡಾ. ವಿಷ್ಣುವರ್ಧನ್ ಅವರ ಕಾರ್ಯಕ್ರಮದಲ್ಲೂ ಭಾಗಿಯಾಗುವ ಭಾಗ್ಯ ನನಗೆ ದಕ್ಕಿರುವುದು ಪುಣ್ಯ’ ಎಂದರು.
ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಮಾತಾನಾಡಿ, ‘ಈ ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಬೂಸ್ಟರ್ ಡೋಸ್ ಕಾರ್ಯಕ್ರಮವಾಗಿ ಕೆಲಸ ಮಾಡಲಿದೆ. ವಿಷ್ಣುವರ್ಧನ್ ಅವರಿಗೆ ಆದ ಅನೇಕ ನೋವುಗಳಿಗೆ ಉತ್ತರವಾಗಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ’ ಎಂದರು.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
Хороший магазинчик , рега хорошая , РІ общем стоит вашего внимания ))) всем удачи ! https://www.divephotoguide.com/user/abyefeecau ответь те РЅР° мыло…
https://mangalfactory.ru/
Электронный документооборот (ЭДО) помогает сократить бумажную работу
Таможенное оформление товаров в Москве под контролем опытного брокера проходит максимально просто и прозрачно: таможенный брокер
Меня РѕРґРёРЅ магазин вчера мурыжил СЃ 5 вечера, никак РЅРµ РјРѕРі дать реквизиты, хотя чего СѓР¶ проще? Выдал реквизиты, получил…
One thought on “Vishnuvardhan ನೆನಪಲ್ಲಿ ಎರಡು ದಿನಗಳ ‘ಯಜಮಾನರ ಅಮೃತ ಮಹೋತ್ಸವ’”