ವೀಡಿಯೋ ಆಲ್ಬಂ ನಿರ್ದೇಶನ ಮಾಡಿದ Yogaraj Bhat

‘ಮನದ ಕಡಲು’ ಚಿತ್ರದ ಸೋಲಿನ ನಂತರ ಯೋಗರಾಜ್‍ ಭಟ್‍ (Yogaraj Bhat) ಮುಂದಿನ ನಡೆ ಏನು ಎಂಬ ಕುತೂಹಲ ಇದ್ದೇ ಇತ್ತು. ಈಗ ಭಟ್ಟರು ಸದ್ದಿಲ್ಲದೆ ಒಂದು ವೀಡಿಯೋ ಆಲ್ಬಂ ನಿರ್ಮಿಸಿ-ನಿರ್ದೇಶಿಸಿದ್ದು, ಈ ಆಲ್ಬಂ ಮೂಲಕ ಸಂಜನ್‍ ಕಜೆ ಎಂಬ ಹೊಸ ಪ್ರತಿಭೆಯನ್ನ ಪರಿಚಯಿಸುತ್ತಿದ್ದಾರೆ.

ಯೋಗರಾಜ್ ಭಟ್, ಶ್ರೀನಿಧಿ ಹಾಗೂ ಪ್ರಸನ್ನ ಜೊತೆಗೆ ‘ಮತ್ತೆ ಮೊದಲಿಂದ’ ಎಂಬ ವೀಡಿಯೋ ಆಲ್ಬಂ (Matte Modalinda Album Song) ನಿರ್ಮಿಸಿದ್ದಾರೆ. ಈ ಆಲ್ಬಂನಲ್ಲಿ ನಾಲ್ಕು ಹಾಡುಗಳಿದ್ದು, ಈ ಆಲ್ಬಂನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕರಾವಳಿ ಮೂಲದ ನೂತನ ಪ್ರತಿಭೆ ಸಂಜನ್ ಕಜೆ ನಾಯಕನಾಗಿ ನಿಧಿ ಸುಬ್ಬಯ್ಯ, ಅಮೀತ ಕುಲಾಲ್, ದೇವಿಕಾ ಶಿಂಧೆ ಹಾಗೂ ಅಂಜಲಿ ಗೌಡ ನಾಯಕಿಯರಾಗಿ ಕಾಣೀಸಿಕೊಂಡಿದ್ದಾರೆ.

ಈ ಆಲಬಂನ ‘ಮೋಹದ ಬಣ್ಣ ನೀಲಿ …’ (Neeli) ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ (Vijay Prakash) ಹಾಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ( Aniruddha Sastry) ಸಂಗೀತ ಸಂಯೋಜಿಸಿದ್ದಾರೆ. ಈ ಆಲ್ಬಂನಲ್ಲಿ ನಾಲ್ಕು ಗೀತೆಗಳಿದ್ದು, ನಾಲ್ಕೂ ಗೀತೆಗಳನ್ನು ಒಬ್ಬೊಬ್ಬ ಸಂಗೀತ ನಿರ್ದೇಶಕ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡುಗಳನ್ನು ನಾಲ್ವರು ಗಾಯಕರು ಮತ್ತು ಗಾಯಕಿಯರು ಹಾಡಿರುವುದು ವಿಶೇಷ.

ನಾಲ್ಕು ಗೀತೆಗಳ ವೀಡಿಯೋದಲ್ಲಿ ಸಂಜನ್‌ ಕಜೆ ಜೊತೆ ನಿಧಿ ಸುಬ್ಬಯ್ಯ, ಅಮೀತ ಎಸ್‌. ಕುಲಾಲ್‌, ದೇವಿಕಾ ಶಿಂಧೆ, ಅಂಜಲಿ ಗೌಡ ನಾಯಕಿಯರಾಗಿ ಜೊತೆಯಾಗಿದ್ದಾರೆ. ಸದ್ಯ ಒಂದು ಹಾಡು ಬಿಡುಡೆಯಾಗಿದ್ದು, ಮುಂದಿನ ದಿನಗಳಲ್ಲಿ ಮೂರು ಹಾಡುಗಳು ಹಂತಹಂತವಾಗಿ ಬಿಡುಗಡೆ ಆಗಲಿದೆ. ಈ ಹಾಡು ಪಂಚರಂಗಿ ಆಡಿಯೋದಲ್ಲಿ ಬಿಡುಗಡೆ ಆಗಿದೆ.



ಇದನ್ನೂ ಓದಿ:-


  1. РЈ меня РЅРµ бьётся вторые РёС… трек. И Р±СЂРѕ РІ скайпе РЅРµ РІРёРґРЅРѕ. РњРѕР¶ приняли РёС… посылки РЅР° почте? РўРѕР¶Рµ…

One thought on “ವೀಡಿಯೋ ಆಲ್ಬಂ ನಿರ್ದೇಶನ ಮಾಡಿದ Yogaraj Bhat

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ