‘Alpha Men Love Violence’ ಜೊತೆಗೆ ಬಂದ ವಿಜಯ್‍ ನಾಗೇಂದ್ರ

Alpha Men Love Violence

ಈ ಹಿಂದೆ ಗಣೇಶ್‍ ಅಭಿನಯದ ‘ಗೀತಾ’ ಮತ್ತು ಧನಂಜಯ್‍ ಅಭಿನಯದ ‘ಗುರುದೇವ್‍ ಹೊಯ್ಸಳ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ವಿಜಯ್‍ ನಾಗೇಂದ್ರ, ಸದ್ದಿಲ್ಲದೆ ಹೊಸ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ನಿರ್ದೇಶನ ಮಾಡಿದ ಚಿತ್ರಗಳು ಅಷ್ಟೇನೂ ಸದ್ದು ಮಾಡಲಿಲ್ಲ. ಈ ಬಾರಿ ವಿಜಯ್‍ ನಾಗೇಂದ್ರ, ಹೊಸ ನಟನನ್ನು ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸುತ್ತಿದ್ದಾರೆ.

ಈ ಚಿತ್ರಕ್ಕೆ ‘ಆಲ್ಫಾ – ಮೆನ್ ಲವ್ ವೈಲೆನ್ಸ್’ (Alpha Men Love Violence) ಎಂಬ ಹೆಸರು ಇಡಲಾಗಿದ್ದು, ಈಗಾಗಲೇ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ. ಈಗ ಈ ಚಿತ್ರದ ಮೇಕಿಂಗ್‍ ವೀಡಿಯೋ ಬಿಡುಗಡೆ ಮಾಡಿದೆ. ಹೇಮಂತ್‌ ಕುಮಾರ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಗೋಪಿಕಾ ಸುರೇಶ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಸಿನಿಮಾದ ಶೇ. 90ರಷ್ಟು ಚಿತ್ರೀಕರಣ ಮುಗಿದಿದ್ದು, ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರದ ಫೈಟ್‍ಗಳನ್ನು ಟಾಲಿವುಡ್‍ನ ಜನಪ್ರಿಯ ಸಾಹಸ ನಿರ್ದೇಶಕ ವಿಜಯ್‌ ಮಾಸ್ಟರ್‌ ಸಂಯೋಜಿಸಲಿದ್ದಾರೆ. ಇನ್ನು, ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚಿತ್ರೀಕರಣದ ಕೊನೆಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತದೆ.

ಚಿತ್ರದಲ್ಲಿ ಅಚ್ಚುತ್‌ ಕುಮಾರ್‌, ರಮೇಶ್‌ ಇಂದಿರಾ, ಬಾಲು ನಾಗೇಂದ್ರ, ಅವಿನಾಶ್‌, ಮಾನಸಿ ಸುಧೀರ್‌ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಆನಂದ್‍ ಕುಮಾರ್‌, ತಮ್ಮ ಎಲ್.ಎ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:-

ಇದನ್ನೂ ಓದಿ:-

  1. РЈ меня РЅРµ бьётся вторые РёС… трек. И Р±СЂРѕ РІ скайпе РЅРµ РІРёРґРЅРѕ. РњРѕР¶ приняли РёС… посылки РЅР° почте? РўРѕР¶Рµ…

2 thoughts on “‘Alpha Men Love Violence’ ಜೊತೆಗೆ ಬಂದ ವಿಜಯ್‍ ನಾಗೇಂದ್ರ

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ