ಹೊಸ ಅವತಾರದಲ್ಲಿ Krishna Ajai Rao, ಹೊಸ ಚಿತ್ರ ಪ್ರಾರಂಭ ಇಂದಿನಿಂದ..

ಅಜೇಯ್‍ ರಾವ್‍ (Krishna Ajai Rao) ಅಭಿನಯದ ‘ಯುದ್ಧಕಾಂಡ’ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗಂತ ಅಜೇಯ್‍ ಸುಮ್ಮನಿಲ್ಲ. ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಒಂದು ಚಿತ್ರ ಶನಿವಾರ (ಜೂನ್‍ 21) ಪ್ರಾರಂಭವಾಗಲಿದೆ.

ಸಾಮಾನ್ಯವಾಗಿ ಲವ್ವರ್‌ ಬಾಯ್‍ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜೇಯ್‍ ರಾವ್, ಹೊಸ ಚಿತ್ರದಲ್ಲಿ ತಮ್ಮ ಪಥವನ್ನು ಬದಲಾಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಬೋಳು ತಲೆಯ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಅರ್ಧ ಒಡೆದಿರುವ ಕೂಲಿಂಗ್‍ ಗ್ಲಾಸ್ ತೊಟ್ಟು, ಟಯರ್‌ ಮೇಲೆ ಬೇಸ್‍ ಬಾಲ್‍ ಬ್ಯಾಟ್‍ ಹಿಡಿದು ಕೂತಿರುವ ಅಜೇಯ್‍ ಅವರ ಹೊಸ ಪೋಸ್ಟರ್‍ ಗಮನ ಸೆಳೆಯುತ್ತಿದೆ.

ಈ ಚಿತ್ರವನ್ನು ಬಾಹುಬಲಿ ಎಸ್‍.ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ‘ನನ್‍ ಮಗಳೇ ಹೀರೋಯಿನ್‍’ ಮತ್ತು ‘ಎಂ.ಆರ್‌.ಪಿ’ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದು, ಈ ಹೊಸ ಚಿತ್ರ ಅವರ ನಿರ್ದೇಶನದ ಮೂರನೆಯ ಚಿತ್ರವಾಗಿದೆ. ಈ ಚಿತ್ರವನ್ನು ಪಿ.ಕೆ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿ ಕಿರಣ್ ನಿರ್ಮಿಸುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸುಜ್ಞಾನ್‍ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‍ ಸಂಕಲನವಿದೆ. ಚಿತ್ರದ ಕುರಿತು ಶನಿವಾರ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. РЈ меня РЅРµ бьётся вторые РёС… трек. И Р±СЂРѕ РІ скайпе РЅРµ РІРёРґРЅРѕ. РњРѕР¶ приняли РёС… посылки РЅР° почте? РўРѕР¶Рµ…

One thought on “ಹೊಸ ಅವತಾರದಲ್ಲಿ Krishna Ajai Rao, ಹೊಸ ಚಿತ್ರ ಪ್ರಾರಂಭ ಇಂದಿನಿಂದ..

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ