ಮತ್ತೆ ಹಳೆಯ ಶೈಲಿಗೆ ಮರಳಿದ Prabhas; ‘The Raja Saab’ ಚಿತ್ರದ ಟೀಸರ್ ಬಿಡುಗಡೆ

ಪ್ರಭಾಸ್ (Prabhas) ಒಂದು ಕಾಲಕ್ಕೆ ರೊಮ್ಯಾಂಟಿಕ್ ಕಾಮಿಡಿ ಮತ್ತು ಫ್ಯಾಮಿಲಿ ಚಿತ್ರಗಳಲ್ಲಿ ನಟಿಸುತ್ತಿದ್ದರು. ಆದರೆ, ‘ಬಾಹುಬಲಿ’ ನಂತರ ಅವರು ಹೆಚ್ಚಾಗಿ ಆ್ಯಕ್ಷನ್ ಚಿತ್ರಗಳಲ್ಲೇ ನಟಿಸುತ್ತಿದ್ದಾರೆ. ಈಗ ಬಹಳ ಗ್ಯಾಪ್‍ನ ನಂತರ ಅವರು ಹಾರರ್ ಕಾಮಿಡಿಯೊಂದರಲ್ಲಿ ನಟಿಸಿದ್ದಾರೆ. ಅದೇ ‘ದಿ ರಾಜಾ ಸಾಬ್’ (The Raja Saab). ಈ ಚಿತ್ರವು ಡಿ.05ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಇತ್ತೀಚೆಗೆ ಹೈದರಾಬಾದ್‍ನ ಪ್ರಸಾದ್ ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರದ ಐದು ಭಾಷೆಗಳ ಟೀಸರ್ ಬಿಡುಗೆಡಯಾಗಿದೆ. ಇದೇ ಸಂದರ್ಭದಲ್ಲಿ ಪ್ರಭಾಸ್ ಅವರ 40 ಅಡಿ ಕಟೌಟ್ ಅನಾವರಣ ಮಾಡಲಾಗಿದೆ. ಈ ಚಿತ್ರವನ್ನು ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದೆ. ಟಿ.ಜಿ. ವಿಶ್ವ ಪ್ರಸಾದ್ ಚಿತ್ರದ ನಿರ್ಮಾಣ ಮಾಡಿದರೆ, ಮಾರುತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಎರಡು ನಿಮಿಷ ಅವಧಿಯ ಈ ಟೀಸರ್‍ನಲ್ಲಿ ಹಾರರ್ ಮತ್ತು ಫ್ಯಾಂಟಸಿ ಅಂಶಗಳಿವೆ. ಗ್ರಾಫಿಕ್ಸ್ ಬಳಕೆ ಹೆಚ್ಚಾಗಿದ್ದು, ಪ್ರಭಾಸ್ ಎರಡು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಂದಲೇ ಈ ಟೀಸರ್ ಪ್ರಾರಂಭವಾಗುತ್ತದೆ.
‘ದಿ ರಾಜಸಾಬ್’ ಚಿತ್ರಕ್ಕಾಗಿ ಹೈದರಾಬಾದ್‍ನಲ್ಲಿ ಬೃಹತ್ ಬಂಗಲೆಯ ಸೆಟ್ ನಿರ್ಮಿಸಲಾಗಿದ್ದು, ಆ ಸೆಟ್‍ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡು ಮತ್ತು ಸ್ವಲ್ಪ ಮಾತಿನ ಭಾಗದ ಚಿತ್ರೀಕರಣ ಬಾಕಿ ಇದ್ದು, ಸದ್ಯದಲ್ಲೇ ಚಿತ್ರೀಕರಣ ಮುಗಿಸಿ, ಡಿ. 05ರಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಪ್ರಭಾಸ್‍ಗೆ ಮೂವರು ನಾಯಕಿಯರಿದ್ದಾರೆ. ನಿಧಿ ಅಗರ್ವಾಲ್, ಮಾಳವಿಕಾ ಮೋಹನ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ಚಿತ್ರದಲ್ಲಿ ಸಂಜಯ್ ದತ್, ಜರೀನಾ ವಹಾಬ್, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದಾರೆ.

ಹೆಚ್ಚಿನ ಓದಿಗೆ:-
помощь наркозависимым
помощь наркозависимым
На сайте https://sprotyv.org/ представлено огромное количество интересной, актуальной и содержательной информации на самую разную тему: экономики, политики, войны, бизнеса, криминала,…
помощь наркозависимым
помощь наркозависимым
2 thoughts on “ಮತ್ತೆ ಹಳೆಯ ಶೈಲಿಗೆ ಮರಳಿದ Prabhas; ‘The Raja Saab’ ಚಿತ್ರದ ಟೀಸರ್ ಬಿಡುಗಡೆ”