Padmagandhi; ಬ್ರಹ್ಮನ ಆಸನದಿಂದ ಪ್ರಶಸ್ತಿಗಳವರೆಗೂ… ಒಂದು ಹೂವಿನ ಸುತ್ತ
ಸುಚೇಂದ್ರ ಪ್ರಸಾದ್ (Suchendra Prasad) ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ‘ಮಾವು ಬೇವು’, ‘ಏಕಚಕ್ರಂ’ ಚಿತ್ರಗಳ ನಂತರ ಅವರು ಇದೀಗ ‘ಪದ್ಮಗಂಧಿ’ (Padmagandhi) ಎಂಬ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ‘ಮಾವು ಬೇವು’ ಕನ್ನಡ ಚಿತ್ರವಾದರೆ, ‘ಏಕಚಕ್ರಂ’ ಸಂಸ್ಕೃತ ಚಿತ್ರವಾಗಿತ್ತು. ಇದೀಗ ‘ಪದ್ಮಗಂಧಿ’ ಚಿತ್ರವನ್ನು ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ತಯಾರಾಗಿದೆ.
‘ಪದ್ಮಗಂಧಿ’ ಚಿತ್ರಕ್ಕೆ ನಾಗರಾಜ್ ಆಧೋನಿ ಮತ್ತು ಗಿರಿಧರ್ ದಿವಾನ್ ಛಾಯಾಗ್ರಹಣ, ನಾಗೇಶ್ ಸಂಕಲನ ಮತ್ತು ಪಳನಿ ಡಿ. ಸೇನಾಪತಿ ಸಂಗೀತವಿದೆ. ಡಾ.ಎಸ್.ಆರ್. ಲೀಲಾ ನಿರ್ಮಾಣದ ಈ ಚಿತ್ರವು ಬಿಡುಗಡೆಯ ಹಂತಕ್ಕೆ ಬಂದಿದ್ದು, ಅದಕ್ಕೂ ಮೊದಲು ‘ಪದ್ಮಗಂಧಿ’ಯ ಗೀತಗುಚ್ಛ ಹಾಗೂ ಚಿತ್ರದ ಪ್ರದರ್ಶನ ಇತ್ತೀಚೆಗೆ ನಡೆಯಿತು.

ಸುಮಾರು ಒಂಬತ್ತು ವರ್ಷಗಳ ಹಿಂದೆ ಶುರುವಾದ ಇಂಥದ್ದೊಂದು ಯೋಚನೆ ಈಗ ಚಿತ್ರವಾಗಿ ಹೊರಬರುತ್ತಿದೆ ಎನ್ನುವ ನಿರ್ಮಾಪಕಿ ಲೀಲಾ, ‘ಇದು ಕಮಲ ಪುಷ್ಪದ ಕುರಿತಾದ ಚಿತ್ರ. ಈ ಜಗತ್ತಿನಲ್ಲಿ ಲಕ್ಷಾಂತರ ಹೂವುಗಳಿವೆ. ಕೆಲವು ಪುಷ್ಪಗಳು ಮಾತ್ರ ನಾಗರೀಕತೆಗಳ ಜೊತೆಜೊತೆಯಾಗಿ ಸಾಗಿ ಬಂದಿವೆ. ಈ ಪೈಕಿ, ಕಮಲ ಸಹ ಒಂದು. ಪುರಾಣದಿಂದ ಇಲ್ಲಿಯವರೆಗೂ ಕಮಲದ ಪ್ರಸ್ತಾಪ ಸಾಕಷ್ಟು ಕಡೆ, ಬೇರೆಬೇರೆ ಕಾಲಘಟ್ಟದಲ್ಲಿ ಆಗಿದೆ. ಪುರಾಣದಲ್ಲಿ ಬ್ರಹ್ಮನ ಆಸನ ಕಮಲ ಆಗಿತ್ತು. ಈಗ ಪದ್ಮ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಕಮಲ ಪುಷ್ಪವು, ಭಾರತೀಯಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಹಾಸು ಹೊಕ್ಕಾಗಿದೆ’ ಎಂದರು.
ನಮ್ಮ ತಂತ್ರ, ಮಂತ್ರ, ಯುದ್ಧ, ಕಲೆ, ಸಾಹಿತ್ಯ, ಆಯುರ್ವೇದದಲ್ಲಿ ಕಮಲದ ಪ್ರಸ್ತಾಪ ಸಾಕಷ್ಟು ಬಾರಿಯಾಗಿವೆ ಎನ್ನುವ ಡಾ. ಲೀಲಾ, ‘ಅವೆಲ್ಲವನ್ನೂ ಸೇರಿಸಿ ಈ ಚಿತ್ರ ಮಾಡಿದ್ದೇವೆ. ಇಲ್ಲಿ ಬರೀ ಮಾಹಿತಿಯಷ್ಟೇ ಇರುವುದಿಲ್ಲ. ಒಂದು ಸುಂದರ ಕಥೆಯೂ ಇದೆ. ಹಲವು ಕಾಲಘಟ್ಟಗಳಲ್ಲಿ ಕಮಲದ ಬಗ್ಗೆ ಆಗಿರುವ ಪ್ರಸ್ತಾಪವನ್ನು ಸೇರಿಸಿ ಸುಚೇಂದ್ರ ಪ್ರಸಾದ್ ಒಂದು ಸುಂದರವಾದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ’ ಎಂದರು.
ಕಮಲಕ್ಕೆ 36 ಸಾವಿರ ಪರ್ಯಾಯ ಪದಗಳಿವೆ ಎನ್ನುವ ನಿರ್ದೇಶಕ ಸುಚೇಂದ್ರ ಪ್ರಸಾದ್, ‘ಪ್ರಾಚೀನ ಕಾಲದಿಂದ ಇಲ್ಲಿಯವರೆಗೂ ಕಮಲದ ಕುರಿತಾದ ಹಲವು ಘಟನೆಗಳನ್ನು ಈ ಚಿತ್ರದಲ್ಲಿ ಸೂಚ್ಯವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಕಮಲದ ಕುರಿತಾದ ಪ್ರಸ್ತಾಪ ಮೊಗದೆಷ್ಟೂ ಸಿಗುತ್ತವೆ. ಗುರುಕುಲದ ಹಿನ್ನೆಲಯಲ್ಲಿ ನಡೆಯುವ ಕಥೆ ಇದು. ಈ ಚಿತ್ರ ರೂಪಿಸುವ ನಿಟ್ಟಿನಲ್ಲಿ ಅನೇಕ ವಿದ್ವಾಂಸರು ನಮಗೆ ಸಹಾಯ ಮಾಡಿದ್ದಾರೆ. ಚಿತ್ರ ಮುಗಿದಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ’ ಎಂದರು.
ಇದನ್ನೂ ಓದಿ:-
ಓದು ಇಲ್ಲಿ ಮುಂದುವರೆಸಿ..
purestylehub.click – Clean and chic outfits available, exploring trends was enjoyable and seamless.
http://everameds.com/# EveraMeds
What a helpful and well-structured post. Thanks a lot!
Main gratis Starlight Princess & Lucky Neko di platform TESLATOTO memungkinkan pemain mencoba slot populer tanpa lag, tanpa perlu isi…
Main gratis Starlight Princess & Lucky Neko di platform TESLATOTO memungkinkan pemain mencoba slot populer tanpa lag, tanpa perlu isi…





Interesting read! Pattern recognition is key in baccarat, and a solid platform helps. Checking out big bunny casino for a streamlined mobile experience – security is a must, especially with KYC these days! 👍