ಹಸು, ಹುಲಿಯಾದ ಕಥೆ ‘Maarnami’; ಟೀಸರ್ ಬಿಡುಗಡೆ

‘ಗಿಣಿರಾಮ’ ಧಾರಾವಾಹಿಯಲ್ಲಿ ಗಮನಸೆಳೆದಿದ್ದ ರಿತ್ವಿಕ್ ಮಾತಾಡ್, ಇದೀಗ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಾರ್ನಮಿ’ (Maarnami) ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಶೇಷವೆಂದರೆ, ಇತ್ತೀಚೆಗೆ ರಿತ್ವಿಕ್ ಹುಟ್ಟುಹಬ್ಬದಂದೇ ಟೀಸರ್ ಬಿಡುಗಡೆ ಆಗಿದೆ. ‘ಸಿಂಪಲ್’ಸ ಸುನಿ ಮತ್ತು ಕಾರ್ತಿಕ್ ಮಹೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

‘ಮಾರ್ನಮಿ’ ಚಿತ್ರವನ್ನು ಗುಣಾಧ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿ, ಶಿಲ್ಪಾ ನಿಶಾಂತ್ ನಿರ್ಮಿಸಿದ್ದಾರೆ. ರಿತ್ವಿಕ್‍ಗೆ ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಸೋನು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ರಿಶಿತ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ. ರಾಷ್ಟ್ರ ಪ್ರಶಸ್ತಿ ಪಡೆದ ‘ಪಿಂಗಾರ’ ತಂಡದಲ್ಲಿ ಅವರು ಕೆಲಸ ಮಾಡಿದ್ದರು. ಈ ಚಿತ್ರಕ್ಕೆ ಸುಧಿ ಆರ್ಯನ್ ಕಥೆ ರಚಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ರಿಷಿತ್ ಶೆಟ್ಟಿ, ‘‘ಗಿಣಿರಾಮ’ ಧಾರಾವಾಹಿಗೆ ನಾನು ಸಹನಿರ್ದಶಕನಾಗಿ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ದೇವಸ್ಥಾನವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನನ್ನನ್ನು ಗರ್ಭಗುಡಿಗೆ ಕರೆದುಕೊಂಡು ಹೋದ ರಿತ್ವಿಕ್, ‘ಮುಂದೊಂದು ದಿನ ನಿರ್ದೇಶಕರಾಗುತ್ತೀರಾ’ ಎಂದು ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿದೆ’ ಎಂದರು.
ನನಗೆ ರಿತ್ವಿಕ್ ಪ್ಯಾಶನ್ ಬಹಳ ಇಷ್ಟವಾಯ್ತು ಎಂದ ರಿಷಿತ್ ಶೆಟ್ಟಿ, ‘ಸಿನಿಮಾ ಮಾಡಬೇಕು ಎಂದು ಕಿರುತೆರೆಯಲ್ಲಿ ಗ್ಯಾಪ್ ತೆಗೆದಕೊಂಡರು. ಈ ಚಿತ್ರದಲ್ಲಿ ಅವರು ಚೇತು ಎಂಬ ಪಾತ್ರ ಮಾಡಿದ್ದಾರೆ. ಟೀಸರ್ ನೋಡಿದರೆ ಇದು ಹಸುವಿನ ಕಥೆಯಾ? ಅಥವಾ ಹಸು ಹುಲಿಯಾದ ಕಥೆಯಾ? ಎಂದನಿಸಬಹುದು. ಇಲ್ಲಿ ಚೇತು ಪಾತ್ರದಲ್ಲಿ ಹಸು, ಹುಲಿ ಎರಡೂ ಇದೆ. ಅವೆರಡರಲ್ಲಿ ಅವನು ಯಾರು? ಎಂಬುದೇ ಚಿತ್ರದ ಕಥೆ’ ಎಂದು ಹೇಳಿದರು.
ಬರ್ಥ್‍ಡೇ ಬಾಯ್ ರಿತ್ವಿಕ್ ಮಾತನಾಡಿ, ‘ಹಸು ತರಹ ಇರುವ ಮನುಷ್ಯನೊಬ್ಬ ಸಮಯ, ಸಂದರ್ಭಕ್ಕೆ ತಕ್ಕ ಹಾಗೆ ಹೇಗೆ ಹುಲಿಯಾಗಿ ಬದಲಾಗುತ್ತಾನೆ ಎಂಬುದು ನನ್ನ ಪಾತ್ರ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡೆ. ಅದರಲ್ಲೂ ಹುಲಿಕುಣಿತ ಕಲಿತಿದ್ದೇನೆ. ಸಾಕಷ್ಟು ತರಬೇತಿ ಪಡೆದು ಈ ಚಿತ್ರದಲ್ಲಿ ನಟಿಸಿದ್ದೇನೆ. ಇನ್ನು, ಚಿತ್ರದ ಬರವಣಿಗೆ ಹಂತದಿಂದ ನಾನು ಜೊತೆಗಿದ್ದೆ. ಹಾಗಾಗಿ, ಚೇತು ಹೇಗೆ ಎಂಬುದು ಗೊತ್ತು. ಅದರಿಂದ ನಟಿಸುವುದಕ್ಕೆ ಸುಲಭವಾಯ್ತು’ ಎಂದರು.


ತಮ್ಮ ನಿಜಜೀವನಕ್ಕೂ ಈ ಚಿತ್ರದ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದ ಚೈತ್ರಾ, ‘ಈ ಚಿತ್ರದಲ್ಲಿ ನಾನು ದೀಕ್ಷಾ ಎಂಬ ಯುವತಿಯ ಪಾತ್ರ ಮಾಡಿದ್ದೇನೆ. ತುಂಬಾ ಎಮೋಷನಲ್ ಆದ ಹುಡುಗಿ ಅವಳು. ತನಗನಿಸಿದ್ದನ್ನು ಮಾತಾಡುತ್ತಾಲೆ. ಈ ಪಾತ್ರಕ್ಕೆ ಸಾಧ್ಯವಾದಷ್ಟೂ ನ್ಯಾಯ ಸಲ್ಲಿಸಿದ್ದೇನೆ’ ಎಂದರು.
ಛಾಯಾಗ್ರಾಹಕ ಶಿವಸೇನ ತಮ್ಮ ಕೆಲಸದಿಂದ ಸೋನು ಗೆದ್ದರಂತೆ. ‘ನನ್ನ ಮೊದಲ ಶಾಟ್ ರಾತ್ರಿ 12ಕ್ಕಿತ್ತು. ಮೊದಲ ದೃಶ್ಯವೇ ವಾವ್ ಎನ್ನುವಂತಿತ್ತು. ಈ ಅವಕಾಶ ಬಂದಾಗ, ಇಂಥದ್ದೊಂದು ಪಾತ್ರ ಬಂದಾಗ, ಒಪ್ಪಲೋ, ಬೇಡವೋ ಎಂಬ ಗೊಂದಲವಿತ್ತು. ಆದರೆ, ಈ ಪಾತ್ರ ಮಾಡಿದ ಖುಷಿ, ತೃಪ್ತಿ ಇದೆ. ಕರಾವಳಿಯ ಹಿನ್ನೆಲೆಯ ಚಿತ್ರವಾದರೂ, ಇದು ಬರೀ ಕರಾವಳಿಗೆ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಸಲ್ಲುವ ಚಿತ್ರ’ ಎಂದರು.
‘ಮಾರ್ನಮಿ’ ಚಿತ್ರದಲ್ಲಿ ರಾಧಾ ರಾಮಚಂದ್ರ, ಪ್ರಕಾಶ್ ತುಮ್ಮಿನಾಡು, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಹಾಗೂ ಶಿವಸೇನ ಛಾಯಾಗ್ರಹಣವಿದೆ.
Maarnami Kannada Movie Teaser Leed by Ritvvikk Chaithra J Achar and Shilpa Nishanth
ಇದನ್ನೂ ಓದಿ:-
ಓದು ಮುಂದುವರೆಸಿ ಇಲ್ಲಿ..
You ought to be a part of a contest for one of the greatest blogs online. I’m going to highly…
Its like you read my mind! You appear to know so much about this, like you wrote the book in…
Обращайтесь к нам снова https://bio.site/kkediogi конспирация достойная, товар оказался отличным, кроли заценили. будем еще работать
Hi there, I discovered your web site by way of Google even as looking for a related subject, your site…
Hey! I understand this is sort of off-topic but I needed to ask. Does building a well-established blog like yours…
3 thoughts on “ಹಸು, ಹುಲಿಯಾದ ಕಥೆ ‘Maarnami’; ಟೀಸರ್ ಬಿಡುಗಡೆ”