ಯೂಟ್ಯೂಬ್ ʻಪೇ ಪರ್ ವೀವ್ʼಗೆ ತೆಲೆಕೆಡಿಸಿಕೊಂಡ Netflix; OTTಗೆ ಪರ್ಯಾಯ ಆಗುತ್ತಾ YouTube
ಉಚಿತ ಮನರಂಜನೆಗಳನ್ನು ನೀಡುತ್ತಿರುವ YouTube ಮುಂದೊಂದು ದಿನ ಓಟಿಟಿಗಳಿಗೆ ದೊಡ್ಡ ಸ್ಪರ್ಧಾಳು ಆಗಲಿದೆಯಾ ಎಂಬ ಪ್ರಶ್ನೆ ಇತ್ತೀಚೆಗೆ ಮೂಡಿ ಬಂದಿದೆ. ಇದಕ್ಕೆ ಕಾರಣ ಇತ್ತೀಚೆಗೆ ನೆಟ್‌ಫಿಕ್ಸ್ ನಡೆ.
ಹೌದು, ಆಮೀರ್ ಖಾನ್ ಅಭಿನಯದ ‘Sitaare Zameen Par’ ಚಿತ್ರವು ಜೂನ್.20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಕ್ಕುಗಳನ್ನು ಪಡೆಯುವುದಕ್ಕೆ Netflix 125 ಕೋಟಿ ರೂ. ಆಫರ್ ನೀಡಿದೆ ಎಂದು ಹೇಳಲಾಗುತ್ತಿದೆ.
125 ಕೋಟಿ ಕೊಟ್ಟದ್ದು ದೊಡ್ಡ ವಿಷಯವೇನಲ್ಲ ಏಕೆಂದರೆ, ‘ಪುಷ್ಪಾ 2’ ಚಿತ್ರದ ಹಕ್ಕುಗಳಿಗೆ ನೆಟ್‍ಫ್ಲಿಕ್ಸ್, 270 ಕೋಟಿ ರೂ ನೀಡಿದ್ದು ಸುದ್ದಿಯಾಗಿತ್ತು. ‘ಪುಷ್ಪಾ 2’ಗೆ ಹೋಲಿಸಿದರೆ, ‘ಸಿತಾರೆ ಜಮೀನ್ ಪರ್’ ಚಿತ್ರದ ಹಕ್ಕುಗಳು ದೊಡ್ಡ ಮೊತ್ತ ಅಲ್ಲ. ಆದರೆ, 125 ಕೋಟಿ ಕೊಡಲು ಕಾರಣವಾದ ವಿಷಯ ಮಹತ್ವ ಪಡೆದುಕೊಂಡಿದೆ.

ಅಮೀರ್ ಖಾನ್ ‘ಸಿತಾರೆ ಜಮೀನ್ ಪರ್’ ಚಿತ್ರವನ್ನು ಓಟಿಟಿಗೆ ಡಿಜಿಟಲ್ ಹಕ್ಕುಗಳನ್ನು ಕೊಡುವ ಬದಲು ತಮ್ಮದೇ ಯೂಟ್ಯೂಬ್ ಚಾನಲ್‍ನಲ್ಲಿ Pay-Per-View ಮಾದರಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಿದ್ದರು. ಚಿತ್ರವನ್ನು ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿದರೆ, ಆಗ ಹಕ್ಕುಗಳು ಸಹ ಜೊತೆಗಿರುತ್ತದೆ ಮತ್ತು ಜಾಸ್ತಿ ದುಡಿಯುವ ಸಾಧ್ಯತೆಯೂ ಇರುತ್ತದೆ ಎಂಬ ಸುದ್ದಿ ಹರಿದಾಟಿತ್ತು.
60 ಕೋಟಿಗೆ ನೆಟ್‍ಫ್ಲಿಕ್ಸ್ ‘ಸಿತಾರೆ ಜಮೀನ್ ಪರ್’ಚಿತ್ರವನ್ನು ಖರೀದಿಸುವ ಉಮೇದಿನಲ್ಲಿತ್ತು, ಆದರೆ ಯಾವಾಗ ಅಮೀರ್ ಇಂಥದ್ದೊಂದು ನಿರ್ಧಾರಕ್ಕೆ ಬಂದರೋ, ಆಗ 60 ಕೋಟಿ ಬದಲು 125 ಕೋಟಿ ರೂ ಕೊಟ್ಟು ಡಿಜಿಟಲ್ ಹಕ್ಕುಗಳನ್ನು ಪಡೆಯುವುದಕ್ಕೆ ಮುಂದಾಯಿತು.
ಅಮೀರ್ ಖಾನ್ ಅವರ ಈ Pay-Per-View ಹೆಚ್ಚಿನ ಮನ್ನಣೆ ಪಡೆದರೆ ಮುಂದಿನ ದಿನಗಳಲ್ಲಿ ಚಲನ ಚಿತ್ರ ನಿರ್ಮಾಪಕರು ಓಟಿಟಿಗಳತ್ತ ಮುಖ ಮಾಡುವುದಿಲ್ಲ. ಹೀಗಾಗಿ ನೆಟ್‌ಫ್ಲಿಕ್ಸ್ ಹೆಚ್ಚಿನ ಮೊತ್ತ ಕೊಟ್ಟು ಖರೀದಿಸಿದೆ. Aamir Khan Talkies ಎಂಬ ಯುಟ್ಯೂಬ್ ಚಾನೆಲ್‌ಗೆ 2 ಲಕ್ಷದ 70 ಸಾರಿರ ಜನ ಹಿಂಬಾಲಕರಿದ್ದಾರೆ. ಅಲ್ಲಿ ಹಾಕಿದ ವಿಡಿಯೋಗಳು ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ. ಕೈಗೆಟುಕುವ ದರದಲ್ಲಿ ಪ್ರೈಮ್ ಸಿನಿಮಾಗಳು ಯುಟ್ಯೂಬ್‌ನಲ್ಲಿ ಸಿಕ್ಕರೆ ಜನ ಓಟಿಟಿಯಿಂದ ವಿಮುಖರಾಗುವುದಂತೂ ಖಂಡಿತಾ. ಏಕೆಂದರೆ, ಒಂದು ಕಂಟೆಂಟ್‌ಗೆ ಪೇ ಮಾಡಿ ನೋಡುವ ಅವಕಾಶ ಇಲ್ಲಿದೆ. ಅದೇ ಓಟಿಟಿಯಲ್ಲಿ ಒಂದು ವಿಡಿಯೋಕ್ಕಾಗಿ ಕನಿಷ್ಠ ಒಂದು ತಿಂಗಳ ಯೋಜನೆ ಖರೀದಿಸ ಬೇಕಾಗುತ್ತದೆ. ಈ ಎಚ್ಚರಿಗೆ ಓಟಿಟಿಗಳಿದೆ.
ಇದನ್ನೂ ಓದಿ:-
smartshoppinghub – Clean and practical, ideal for modern online shoppers and deals.
Good day! Would you mind if I share your blog with my twitter group? There’s a lot of folks that…
changan uni v цена https://changan-v-spb.ru
Wow that was strange. I just wrote an extremely long comment but after I clicked submit my comment didn’t show…
да уж совсем не впечатлили. Используйте наш промокод при регистрировании, [url=https://1win-q2f5n.top/]1win games[/url] для получения лучший бонус на улучшенных условиях. изучите…





Really interesting update! 🎬 The way YouTube is changing the game feels like how players look out for dice dreams free rewards daily — always something exciting to grab and keep moving forward.