ತೆರೆಗೆ ಬರಲು ‘X&Y’ ಸಜ್ಜು; ಜೂನ್ 26ರಂದು ಚಿತ್ರದ ಬಿಡುಗಡೆ

‘ರಾಮ ರಾಮಾ ರೇ’ ಖ್ಯಾತಿಯ ಡಿ. ಸತ್ಯಪ್ರಕಾಶ್ ಈಗಾಗಲೇ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಹೊಸದೊಂದು ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದು, ಆ ಚಿತ್ರವು ಜೂನ್ 26ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಆ ಚಿತ್ರದ ಹೆಸರು ‘X&Y’. ಈ ಚಿತ್ರದಲ್ಲಿ ಸತ್ಯಪ್ರಕಾಶ್ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘X&Y’ ಚಿತ್ರದ ಮೂಲಕ ತಂದೆ-ತಾಯಿ ಆಗಲು ಹೊರಟಿರುವ ಇವತ್ತಿನ ತಲೆಮಾರಿನವರ ಕಥೆ ಹೇಳುವುದಕ್ಕೆ ಹೊರಟಿದ್ದಾರೆ ಸತ್ಯಪ್ರಕಾಶ್. ತಮ್ಮ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ‘ಆಂಬು ಆಟೋ’ ಎಂಬ ಹೊಸ ಆಟೋ ಪರಿಚಯಿಸಲಾಗಿದೆ. ಈ ಆಟೋದ ವಿಶೇಷತೆ ಎಂದರೆ, ಆಂಬುಲೆನ್ಸ್ ನಲ್ಲಿರುವಂತೆ ಎಲ್ಲ ಸೌಲಭ್ಯಗಳಿವೆ. ಈ ಆಟೋವನ್ನು ಚಿತ್ರದಲ್ಲಿ ಒಬ್ಬ ಕಲಾವಿದನಂತೆ ಕಲಾತ್ಮಕವಾಗಿ ಬಳಸಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ಈ ‘ಆಂಬು ಆಟೋ’ ಪ್ರಮುಖ ಪಾತ್ರವಹಿಸುತ್ತದಂತೆ.
‘X&Y’, ಸತ್ಯಪ್ರಕಾಶ್ ನಿರ್ದೇಶನದ ನಾಲ್ಕನೇ ಚಿತ್ರ. ‘ರಾಮ ರಾಮಾ ರೇ’ ನಂತರ ‘ಒಂದಲ್ಲ ಎರಡಲ್ಲ’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳನ್ನು ಸತ್ಯ ಈ ಹಿಂದೆ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರವನ್ನು ತಾವೇ ತಮ್ಮ ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣವಾಗಿದೆ.
ಚಿತ್ರದಲ್ಲಿ ಸತ್ಯಪ್ರಕಾಶ್ ಜೊತೆಗೆ ಅಥರ್ವ ಪ್ರಕಾಶ್, ಬೃಂದಾ ಆಚಾರ್ಯ, ಸುಂದರ್ ವೀಣಾ, ದೊಡ್ಡಣ್ಣ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್ ಸಂಗೀತ ಮತ್ತು ಲವಿತ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದನ್ನೂ ಓದಿ:-
ಸ್ಯಾಂಡಲ್‌ವುಡ್ ಸ್ಟೋರಿಗಳು ಇನ್ನಷ್ಟೂ ಇವೆ ಇಲ್ಲಿ..
Обращайтесь к нам снова https://bio.site/kkediogi конспирация достойная, товар оказался отличным, кроли заценили. будем еще работать
Hi there, I discovered your web site by way of Google even as looking for a related subject, your site…
Hey! I understand this is sort of off-topic but I needed to ask. Does building a well-established blog like yours…
хороших отзывов – полно ) просто РјРЅРѕРіРёРµ РЅРµ пишут РѕСЃРѕР±Рѕ Рѕ качестве товара. пришло, прёт, зашибись. http://www.pageorama.com/?p=ufyiicohyf Заказал РІ понедельник…
Мы гарантируем корректность оформления документов и соблюдение сроков поставки груза: таможенный брокер в Москве
2 thoughts on “ತೆರೆಗೆ ಬರಲು ‘X&Y’ ಸಜ್ಜು; ಜೂನ್ 26ರಂದು ಚಿತ್ರದ ಬಿಡುಗಡೆ”