ಉಪೇಂದ್ರ ಅಭಿಮಾನಿಯ ‘Black Sheep’; ಟ್ರೇಲರ್ ಮತ್ತು ಹಾಡು ಬಿಡುಗಡೆ

ಉಪೇಂದ್ರ ಅವರಿಂದ ಪ್ರೇರಣೆಗೊಂಡು ಹಲವರು ಚಿತ್ರ ನಿರ್ದೇಶಕರಾಗಿದ್ದಾರೆ. ಉಪೇಂದ್ರ ಅವರ ಶೈಲಿಯಲ್ಲೇ ಚಿತ್ರಗಳನ್ನು ಮಾಡಿದ್ದಾರೆ. ಈಗ ಆ ಸಾಲಿಗೆ ಜೀವನ್‍ ಹಳ್ಳಿಕಾರ್‌ ಸಹ ಸೇರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೃತ್ಯಪಟುವಾಗಿ ಮತ್ತು ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಮಡಿರುವ ಜೀವನ್‍, ಈಗ ಸದ್ದಿಲ್ಲದೆ ‘Black Sheep’ ಎಂಬ ಚಿತ್ರ ಮಾಡಿ ಮುಗಿಸಿದ್ದರೆ.

ಈ ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆ ಆಗಿದೆ. ಗ್ಲಿಟ್ಟರರ್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಗುರುಚರಣ್ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಕಾಸ್ಟ್ಯೂಮ್‍ ಡಿಸೈನರ್‌ ಆಗಿ ಸಹ ಕೆಲಸ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಜೀವನ್‍, ‘ಇದೊಂದು ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಉಪೇಂದ್ರ ಅಭಿಮಾನಿಯಾಗಿ, ಅವರಿಂದ ಸ್ಪೂರ್ತಿಗೊಂಡು ಭೂತಕಾಲ, ವರ್ತಮಾನಕಾಲದ ಸನ್ನಿವೇಶಗಳನ್ನು ಈ ಚಿತ್ರದಲ್ಲಿ ಸೃಷ್ಟಿಸಲಾಗಿದೆ. ಒಂದಷ್ಟು ನೈಜ ಘಟನೆಗಳನ್ನು ಸಿನಿಮಾಕ್ಕೆ ಬಳಸಲಾಗಿದೆ. ಹೀರೋ ಮತ್ತು ವಿಲನ್ ಮಧ್ಯೆ ನಡೆಯುವ ಸಂಘರ್ಷದಲ್ಲಿ, ನಾಯಕ ಕೆಲವು ಘಟನೆಗಳನ್ನು ಮರೆತು ಜೀವನ ಸಾಗಿಸಿರುತ್ತಾನೆ. ಹಾಗೆ ಮರೆತ ವಿಷಯಗಳು ಹೇಗೆ ನೆನಪಿಗೆ ಬರುತ್ತದೆ ಮತ್ತು ಮುಂದೇನಾಗುತ್ತದೆ ಎನ್ನುವುದರ ಸುತ್ತ ಚಿತ್ರ ಸುತ್ತುತ್ತದೆ. ಬೆಂಗಳೂರು, ಮಂಗಳೂರು, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ’ ಎಂದರು.

ಫಿಟ್‌ನೆಸ್ ಮಾಡಲ್ ಆಗಿರುವ ವಿಶಾಲ್‌ ಕಿರಣ್ ಸಿಬಿಐ ಅಧಿಕಾರಿಯಾಗಿ ನಟಿಸಿದ್ದಾರೆ. ಶಿವಾಂಗಿದಾವೆ ನಾಯಕಿಯಾದರೆ. ಖಳನಾಗಿ ಪ್ರಶಾಂತ್ ವಿ.ಹರಿ ಇದ್ದಾರೆ. ಮಿಕ್ಕಂತೆ ನಿಶಾ ಹೆಗಡೆ, ‘ಸಿದ್ಲುಂಗು’ ಶ್ರೀಧರ್, ಕೃಷ್ಣ ಹೆಬ್ಬಾಳೆ, ಸುಂದರ್‌ ವೀಣಾ, ಪುನೀತ್, ದೀಪಿಕಾ ಅಡ್ತಲೆ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ, ದೇವು ಛಾಯಾಗ್ರಹಣವಿದೆ.

ಇದನ್ನೂ ಓದಿ:-


ಓದು ಇಲ್ಲಿ ಮುಂದುವರೆಸೋಣ…

  1. Обращайтесь к нам снова https://bio.site/kkediogi конспирация достойная, товар оказался отличным, кроли заценили. будем еще работать

2 thoughts on “ಉಪೇಂದ್ರ ಅಭಿಮಾನಿಯ ‘Black Sheep’; ಟ್ರೇಲರ್ ಮತ್ತು ಹಾಡು ಬಿಡುಗಡೆ

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ