‘Pinaka’ ಚಿತ್ರಕ್ಕೆ 500 ವರ್ಷಗಳ ಹಿಂದಿನ ದೇವಗಿರಿಯ ಸೆಟ್‍

ಗಣೇಶ್‍ ಅಭಿನಯದ ‘ಪಿನಾಕ’ (Pinaka) ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿತ್ತು. ಇದೀಗ ಚಿತ್ರಕ್ಕೆ ನೆಲಮಂಗಲದ ಅರಿಶಿನಕುಂಟೆ ಬಳಿ ಆರು ಎಕೆರೆ ಪ್ರದೇಶದಲ್ಲಿ ಚಿತ್ರಕ್ಕಾಗಿ ಒಂದು ಬೃಹತ್‍ ಸೆಟ್‍ ನಿರ್ಮಿಸಿಲಾಗಿದೆ. ಸುಮಾರು 500 ವರ್ಷಗಳ ಹಿಂದಿನ ದೇವಗಿರಿ ಸಾಮ್ರಾಜ್ಯದ ಸೆಟ್‍ ಇದಾಗಿದ್ದು, ಇಲ್ಲಿ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದೆ.

ಈ ಸೆಟ್‍ ಹೇಗಿದೆ ಎಂಬುದನ್ನು ಚಿತ್ರತಂಡ ಬಹಳ ಗೌಪ್ಯವಾಗಿಟ್ಟಿದೆ. ಚಿತ್ರಕ್ಕೆ ಕೆಲಸ ಮಾಡುತ್ತಿರುವವರನ್ನು ಹೊರತುಪಡಿಸಿದರೆ, ಒಳಗೆ ಯಾರನ್ನೂ ಬಿಡುತ್ತಿಲ್ಲ. ಒಳಗೆ ಹೋದವರು ಸಹ ಮೊಬೈಲ್‍ ಉಪಯೋಗಿಸುವಂತಿಲ್ಲ. ಚಿತ್ರದ ಫ್ಲಾಶ್‍ಬ್ಯಾಕ್‍ನಲ್ಲಿ ಬರುವ ಈ ಸನ್ನಿವೇಶಗಳಲ್ಲಿ ಗಣೇಶ್‍, ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರವೀಂದ್ರನಾಥ್‍, ಹೊನ್ನವಳ್ಳಿ ಕೃಷ್ಣ ಮುಂತಾದವರು ನಟಿಸುತ್ತಿದ್ದಾರೆ.

‘ಪಿನಾಕ’ ಕುರಿತು ಮಾತನಾಡುವ ಗಣೇಶ್, ‘ನಿರ್ಮಾಪಕರು ಬರುವಾಗಲೇ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂಬ ತೀರ್ಮಾನದೊಂದಿಗೆ ಬಂದಿದ್ದರು. ಈ ತರಹದ ಪಾತ್ರವನ್ನು ನನ್ನಿಂದ ಮಾಡಿಸಬಹುದು ಎಂದು ಮಾಡಿಸುತ್ತಿದ್ದಾರೆ. ಬಹಳ ಖುಷಿಕೊಟ್ಟ ಪಾತ್ರವಿದು. ನನಗೆ ಖುಷಿಕೊಟ್ಟರೆ ಪ್ರೇಕ್ಷಕರಿಗೂ ಖುಷಿಯಾಗುತ್ತದೆ ಎಂದು ನಂಬಿದವನು ನಾನು. ಇದು ಬೇರೆ ತರಹದ ಸಿನಿಮಾ. ನನ್ನ ಚಿತ್ರಜೀವನದಲ್ಲಿ ವಿಭಿನ್ನವಾದ ಸಿನಿಮಾ ಇದು. ಅದನ್ನು ನಿಜವಾಗಿಸಲು ಸಂಪೂರ್ಣವಾಗಿ ಪ್ರಯತ್ನ ಮಾಡುತ್ತೇನೆ’ ಎಂದರು.

ಸೆಟ್‍ ಕುರಿತು ಮಾತನಾಡುವ ಗಣೇಶ್‍, ‘ಈ ಸೆಟ್‍ ಈ ಮಟ್ಟಕ್ಕೆ ಬರಬೇಕೆಂದರೆ ಅವರು ಮತ್ತು ನಿರ್ದೇಶಕ ಧನಂಜಯ್‍ ಕಾರಣ. ನಾಲ್ಕೈದು ತಿಂಗಳು ನಿಂತು ಸೆಟ್‍ ಹಾಕಿಸಿದ್ದಾರೆ. ಧನು ಮೊದಲ ಚಿತ್ರದಲ್ಲೇ ಇಂಥದ್ದೊಂದು ದೊಡ್ಡ ಪ್ರಯತ್ನ ಮಾಡುತ್ತಿದ್ದಾನೆ. ಅವನು ಹೇಗೆ ಮಾಡಬಹುದು ಎಂಬ ಪ್ರಶ್ನೆ ನನಗೂ ಇತ್ತು. ಆದರೆ, ಇಲ್ಲಿ ನೂರಕ್ಕೆ ನೂರು ತೆಗೆದಿದ್ದಾನೆ. ಪ್ರತಿ ದಿನ ಸೆಟ್‍ನಲ್ಲಿ ನಾಲ್ಕು ಕ್ಯಾಮೆರಾಳಿವೆ. 32 ದಿನಗಳಲ್ಲಿ 64 ದಿನಗಳ ಕೆಲಸವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪಿನಾಕ’ ಎಂದರೆ ಒಬ್ಬ ರಕ್ಷಕ ಎನ್ನುವ ಧನಂಜಯ್, ‘ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ. ಗಣೇಶ್‍ ಜೊತೆಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರ ಜೊತೆಗೊಂದು ಒಳ್ಳೆಯ ಸಂಬಂಧ ಇದೆ. ಅವರೊಂದಿಗೆ ಕೆಲಸ ಮಾಡುವುದು ಖುಷಿಯ ವಿಚಾರ. ಈ ಚಿತ್ರಕ್ಕೆ ಅವರ ಸಹಕಾರ ದೊಡ್ಡದು. ಸಂತೋಷ್‍ ಪಾಂಚಲ ಮತ್ತು ತಂಡದವರು ಈ ಸೆಟ್‍ ನಿರ್ಮಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ 800 ಜನ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ಗ್ರಾಫಿಕ್ಸ್ ಕೆಲಸ ಸತತವಾಗಿ ನಡೆಯುತ್ತಿದೆ’ ಎಂದರು.

‘ಪಿನಾಕ’ ಚಿತ್ರದಲ್ಲಿ ಗಣೇಶ್‍ಗೆ ನಯನ್‍ ಸಾರಿಕಾ ಮತ್ತು ಅರ್ಚನಾ ಅಯ್ಯರ್‌ ನಾಯಕಿಯರಾಗಿ ನಟಿಸುತ್ತಿದ್ದಾರೆ. ಕರಮ್‍ ಚಾವ್ಲಾ ಛಾಯಾಗ್ರಹಣವಿರುವ ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. РЈ меня РЅРµ бьётся вторые РёС… трек. И Р±СЂРѕ РІ скайпе РЅРµ РІРёРґРЅРѕ. РњРѕР¶ приняли РёС… посылки РЅР° почте? РўРѕР¶Рµ…

One thought on “‘Pinaka’ ಚಿತ್ರಕ್ಕೆ 500 ವರ್ಷಗಳ ಹಿಂದಿನ ದೇವಗಿರಿಯ ಸೆಟ್‍

Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ