ಹಳ್ಳಿಯಲ್ಲಿ ನಡೆಯುವ ಆ ಕೊಲೆಗೆ ಕಾರಣ ಏನು?; ಸೆಟ್ಟೇರಿದ ‘Choo Bana’

Choo Bana

ಹಳ್ಳಿಯಲ್ಲಿ ನಡೆಯುವ ಕೊಲೆಯ ಹಿಂದಿನ ರಹಸ್ಯದ ಕುರಿತ ಕೆರೆ ಬೇಟೆ, ಅಜ್ಞಾತವಾಸಿ ಸಿನಿಮಾಗಳು ಇತ್ತೀಚೆಗೆ ಕನ್ನಡದಲ್ಲಿ ಬಂದಿವೆ. ಇವುಗಳು ಒಂದು ರೀತಿ ಸಸ್ಪೆಂಸ್‌ ಥ್ರಿಲ್ಲರ್‌ಗಳಾಗಿವೆ. ಈ ಚಿತ್ರಗಳಂತೆ ಸ್ಯಾಂಡಲ್‌ವುಡ್‌ನಲ್ಲಿ ಕೊಲೆಯ ಹಿಂದಿನ ರಹಸ್ಯ ಬೇಧಿಸುವ ಮತ್ತೊಂದು ಕಥೆ ಸೆಟ್ಟೇರಿದೆ. ಅದೇ‘ಛೂ ಬಾಣ’ (Choo Bana).

ಬಸವೇಶ್ವರ ನಗರದಲ್ಲಿರುವ ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ಛೂ ಬಾಣ ಚಿತ್ರಕ್ಕೆ ಮುಹೂರ್ತ ನಡೆಯಿತು. ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ ಕ್ಯಾಮಾರ ಚಾಲನೆ ಮಾಡಿದರು.

ಎಸ್. ಕೆ. ಭಾಷಾ ಫಿಲಂಸ್ ಅಡಿಯಲ್ಲಿ ವಿಜಯವಾಡದ ಇಂಜಿನಿಯರ್ ಎಸ್. ಕೆ. ಫಿರೋಜ್‌ಭಾಷ ಬಂಡವಾಳ ಹೂಡುವುದರ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಎಸ್. ಆರ್. ಪ್ರಮೋದ್ ಕಥೆ, ಸಾಹಿತ್ಯ ರಚಿಸಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಹಾಸನ ಮೂಲದ ರೇಖಾ ರಮೇಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ನಾಯಕನ ತಂಗಿಯಾಗಿ ತನಿಖಾನಾರಾಯಣ್ ಇರಲಿದ್ದಾರೆ. ಕೆವಿನ್ ಎಂ. ಸಂಗೀತ, ಮೈಸೂರು ಸೋಮು ಛಾಯಾಚಿತ್ರಗ್ರಹಣ, ಅಯುರ್‌ ಸಂಕಲನ ಈ ಚಿತ್ರಕ್ಕಿದೆ.

ನಿರ್ದೇಶಕ ಎಸ್. ಆರ್. ಪ್ರಮೋದ್ ಮಾತನಾಡಿ, ‘ಸಮಾಜದಲ್ಲಿ ಎಷ್ಟೋ ಸಲ ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪವಾಗಿ, ಒಂದು ಹಂತದಲ್ಲಿ ಕೊಲೆಗೆ ತಲುಪುತ್ತದೆ. ಅದೇ ರೀತಿ ಹಳ್ಳಿಯಲ್ಲಿ ನಡೆಯುವ ಕಥೆಯಿದು. ಹಳೆಯ ವೈಷಮ್ಯದಿಂದ ಅಪರಾಧಗಳು ನಡೆಯುತ್ತವೆ. ಊರಿನ ಗೌಡರ ಮನೆಯಲ್ಲಿ ಕೊಲೆಗಳು ಆಗುತ್ತಿರುತ್ತವೆ. ಅವುಗಳನ್ನು ಮಾಡೋರು ಯಾರು? ಯಾವ ಕಾರಣಕ್ಕೆ? ಎಂಬಿತ್ಯಾದಿ ವಿಷಯಗಳೇ ಚಿತ್ರಕಥೆ. ಮೈಸೂರಿನಲ್ಲಿ ಸೆಟ್‌ ಹಾಕಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯಿದೆ. ಎರಡು ಹಾಡುಗಳು ಹಾಗೂ ಎರಡು ಫೈಟ್‌ಗಳು ಚಿತ್ರದಲ್ಲಿವೆ’ಎಂದರು.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. Тарился РІ этом магазе Летом разок Рё РІ Сентябре разок))) https://www.grepmed.com/ababoubicugo РўРЈРў САМЫЙ ЛУЧШИЙ МАГАЗИН РЎ САМЫМ ЛУЧШИМ РўРћР’РђР РћРњ!!! ЖЕЛАЮ…

  2. народ а трек через скока по времени примерно приходит? https://form.jotform.com/252483130751048 и качество всегда на уровне))

One thought on “ಹಳ್ಳಿಯಲ್ಲಿ ನಡೆಯುವ ಆ ಕೊಲೆಗೆ ಕಾರಣ ಏನು?; ಸೆಟ್ಟೇರಿದ ‘Choo Bana’

Leave a Reply

Your email address will not be published. Required fields are marked *