‘ಸ್ಪಿರಿಟ್’ ಬಿಟ್ಟು ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿಯಾದ Deepika Padukone

ಪ್ರಭಾಸ್ (Prabhas) ಅಭಿನಯದ ‘ಸ್ಪಿರಿಟ್’ ಚಿತ್ರದಿಂದ ದೀಪಿಕಾ ಪಡುಕೋಣೆ (Deepika Padukone) ಹೊರಬಂದಿದ್ದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಚಿತ್ರದಲ್ಲಿ ನಟಿಸುವುದಕ್ಕೆ ದೀಪಿಕಾ 30 ಕೋಟಿ ರೂ. ಕೋಟಿ ಸಂಭಾವನೆ, ತಮ್ಮ ತಂಡದ ಸದಸ್ಯರಿಗೆ ಫೈವ್ ಸ್ಟಾರ್ ಹೋಟೆಲ್ ವಸತಿ, ಮುಂಬೈನಿಂದ ಚಿತ್ರೀಕರಣಕ್ಕೆ ಹೋಗುವುದಕ್ಕೆ ಖಾಸಗಿ ಜೆಟ್, ಪ್ರತಿ ದಿನ ಆರು ತಾಸು ಕೆಲಸ ಮುಂತಾದ ಡಿಮ್ಯಾಂಡ್ ಇಟ್ಟಿದ್ದರು ಎಂಬ ಗುಸುಗುಸು ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಅವರನ್ನು ಬಿಟ್ಟು, ಚಿತ್ರಕ್ಕೆ ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿಕೊಂಡಿತ್ತು.

‘ಸ್ಪಿರಿಟ್’ ಕೈಬಿಟ್ಟರೂ, ದೀಪಿಕಾ ಪಡುಕೋಣೆ ಈಗ ದೊಡ್ಡ ಚಿತ್ರವೊಂದನ್ನೇ ಒಪ್ಪಿಕೊಂಡಿದ್ದಾರೆ. ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ದೀಪಿಕಾ ನಾಯಕಿಯಾಗಿ ಆಯ್ಕೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಆಕೆಯನ್ನು ಬರಮಾಡಿಕೊಂಡಿದೆ.
ಈ ಚಿತ್ರವನ್ನು ದಕ್ಷಿಣ ಭಾರತದ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ‘ಜವಾನ್’, ‘ಬಿಗಿಲ್’, ‘ಮರ್ಸಲ್’, ‘ಥೇರಿ’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿರುವ ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನದ ಆರನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು, ಅಲ್ಲು ಅರ್ಜುನ್ (Allu Arjun) ಅಭಿನಯದ 22ನೇ ಚಿತ್ರವಾಗಿದೆ. ಚಿತ್ರಕ್ಕೆ ಸದ್ಯಕ್ಕೆ AA22 * A6 ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದೆ. ಅಲ್ಲು ಅರ್ಜುನ್ ಜೊತೆಗೆ ದೀಪಿಕಾ ಇದೇ ಮೊದಲ ಬಾರಿಗೆ ನಟಿಸುತ್ತಿದ್ದರೂ, ಅಟ್ಲಿ (Atlee) ನಿರ್ದೇಶನದಲ್ಲಿ ಅವರು ‘ಜವಾನ್’ ಚಿತ್ರದಲ್ಲಿ ನಟಿಸಿದ್ದರು.
ಹಿಂದೆಂದೂ ನೋಡಿರದ ವೈಜ್ಞಾನಿಕ ಆಕ್ಷನ್ ಚಿತ್ರ ಇದಾಗಿದ್ದು ಭಾರತ ಮತ್ತು ಅಮೇರಿಕಾದ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಚಿತ್ರದ VFX ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಅಲ್ಲು ಅರ್ಜನ್ ಮತ್ತು ಅಟ್ಲಿ ಲಾಸ್ ಏಂಜಲೀಸ್ನಲ್ಲಿರುವ VFX ಸ್ಟುಡಿಯೋಗಳಿಗೆ ಭೇಟಿ ನೀಡಿ, ಹಾಲಿವುಡ್ನ ಹಲವಾರು ಹೆಸರಾಂತ ತಜ್ಞರೊಂದಿಗೆ ಚಿತ್ರದ ಕೆಲಸದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:-
ಇನ್ನಷ್ಟೂ ಸುದ್ದಿಗಳು ನಿಮಗಾಗಿ..
[…] Darling Krishna Brat; ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರ… […]
[…] […]
[…] ಹಸು, ಹುಲಿಯಾದ ಕಥೆ ‘Maarnami’; ಟೀಸರ್ ಬಿಡುಗಡೆ […]
[…] ಕಾಡಿನ ನೆಂಟರು ಕಥಾ ಸಂಕಲನ ಆಧರಿತ ಚಿತ್ರ Timmana Mottegalu; ಟ್ರೈಲರ್ ನೋಡಿದ್ರಾ.. […]
[…] Darling Krishna Brat; ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ […]
One thought on “‘ಸ್ಪಿರಿಟ್’ ಬಿಟ್ಟು ಅಲ್ಲು ಅರ್ಜುನ್ ಚಿತ್ರಕ್ಕೆ ನಾಯಕಿಯಾದ Deepika Padukone”