ಒಂದೇ ಚಿತ್ರದಲ್ಲಿ ಅಜ್ಜಿ, ಮಗ ಹಾಗೂ ಮೊಮ್ಮಗ; ‘GST’ ಸದ್ಯದಲ್ಲೇ ತೆರೆಗೆ

GST

ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ಸೃಜನ್‍ ಲೋಕೇಶ್‍ ನಿರ್ದೇಶನದ ಮತ್ತು ನಟನೆಯ ‘GST’. ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ‘U/A’ ಪ್ರಮಾಣಪತ್ರವನ್ನು ಪಡೆದಿದ್ದು,, ಸದ್ಯದಲ್ಲೇ ಬಿಡುಗಡೆ ಆಗಲಿದೆ.

‘GST’ ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ. ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಪ್ರಮುಖ ಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದನ್ನು ನಿರ್ದೇಶಕ ಸೃಜನ್ ಲೋಕೇಶ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ಈ ಚಿತ್ರದಲ್ಲಿ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನನ್ನು ನಿರ್ದೇಶಿಸಿದ್ದಾರೆ. ಮನೋರಂಜನೆಯೇ ಪ್ರಧಾನವಾಗಿರುವ ‘GST’ ಚಿತ್ರಕ್ಕೆ ‘ಘೋಸ್ಟ್ ಇನ್ ಟ್ರಬಲ್’ ಎಂಬ ಅಡಿಬರಹವಿದೆ.

ಸೃಜನ್‍ ಲೋಕೇಶ್‍ ಅವರ ತಾತ ಸುಬ್ಬಯ್ಯ ನಾಯ್ಡು ನಟಿಸಿ-ನಿರ್ದೇಶಿಸಿದ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ, ಲೋಕೇಶ್‍ ಬಾಲ ಕಲಾವಿದನಾಗಿ ನಟಿಸಿದ್ದರು. ಲೋಕೇಶ್‍ ನಟಿಸಿ-ನಿರ್ದೇಶಿಸಿದ ‘ಭುಜಂಗಯ್ಯನ ದಶಾವತಾರ’ ಚಿತ್ರದಲ್ಲಿ ಸೃಜನ್‍ ಬಾಲನಟನಾಗಿ ನಟಿಸಿದ್ದರು. ಈಗ ಸೃಜನ್‍ ನಟನೆಯ ಮತ್ತು ನಿರ್ದೇಶನದ ‘ಜಿಎಸ್ಟಿ’ ಚಿತ್ರದಲ್ಲಿ ನನ್ನ ಮಗ ಸುಕೃತ್ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾನೆ ಎನ್ನುವುದು ವಿಶೇಷ.

ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ.  ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. Получив достаточно быстро трек отправления, Р° РІ качестве курьерки продавцом была выбрана РїРѕРЅРё экспресс, СЏ стал проверять бьется ли трек.…

2 thoughts on “ಒಂದೇ ಚಿತ್ರದಲ್ಲಿ ಅಜ್ಜಿ, ಮಗ ಹಾಗೂ ಮೊಮ್ಮಗ; ‘GST’ ಸದ್ಯದಲ್ಲೇ ತೆರೆಗೆ

Leave a Reply

Your email address will not be published. Required fields are marked *