Shahid Kapur ಅಭಿನಯದ ಹೊಸ ಚಿತ್ರಕ್ಕೆ Rashmika Mandanna ನಾಯಕಿ
ರಶ್ಮಿಕಾ ಮಂದಣ್ಣ (Rahmika Mandanna) ಅಭಿನಯದ ಎರಡು ಹಿಂದಿ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಈ ಪೈಕಿ ‘ಚಾವಾ’ ಚಿತ್ರವು ಸೂಪರ್ ಹಿಟ್ ಆದರೆ, ಸಲ್ಮಾನ್ ಖಾನ್ ಜೊತೆಗೆ ಅವರು ನಟಿಸಿದ ‘ಸಿಕಂದರ’ ಚಿತ್ರವು ಸೂಪರ್ ಫ್ಲಾಪ್ ಆಗಿದೆ. ಈ ಮಧ್ಯೆ, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ರಶ್ಮಿಕಾ ಒಪ್ಪಿರುವ ಹೊಸ ಚಿತ್ರದ ಹೆಸರು ‘ಕಾಕ್ಟೇಲ್ 2’. 13 ವರ್ಷಗಳ ಹಿಂದೆ ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದಲ್ಲಿ ‘ಕಾಕ್ಟೇಲ್’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಆ ಚಿತ್ರವನ್ನು ನಿರ್ಮಿಸಿದ್ದ ದಿನೇಶ್ ವಿಜನ್, ಈಗ ‘ಕಾಕ್ಟೇಲ್ 2’ ಚಿತ್ರವನ್ನು ನಿರ್ಮಿಸುತ್ತಿದ್ದು, ಮೊದಲ ಚಿತ್ರವನ್ನು ನಿರ್ದೇಶಿಸಿದ್ದ ಹೋಮಿ ಅಡ್ಜಾನಿಯಾ ಈ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ.

‘ಕಾಕ್ಟೇಲ್ 2’ ಚಿತ್ರದ ಹಿಂದೆ ಹಳೆಯ ತಂಡವಿದ್ದರೂ, ಕಲಾವಿದರು ಬದಲಾಗಿದ್ದಾರೆ. ನಾಯಕನಾಗಿ ಶಾಹಿದ್ ಕಪೂರ್ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರಂತೆ. ಒಬ್ಬ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದ್ದರೆ, ಇನ್ನೊಬ್ಬ ನಾಯಕಿಯಾಗಿ ಕೃತಿ ಸನೋನ್ ನಟಿಸುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಈ ಚಿತ್ರದ ಚಿತ್ರೀಕರಣ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಲಿದೆಯಂತೆ. ಇನ್ನು, ಚಿತ್ರವು 2026ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಸದ್ಯ, ತೆಲುಗು ನಟ ನಾಗಾರ್ಜುನ ಮತ್ತು ತಮಿಳು ನಟ ಧನುಷ್ ಅಭಿನಯದ ‘ಕುಬೇರ’ ಚಿತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರವು ಜೂನ್ 20ರಂದು ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ‘ತಮ’ ಎಂಬ ಇನ್ನೊಂದು ಹಿಂದಿ ಹಾರರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಮತ್ತು ನವಾಜುದ್ದೀನ್ ಸಿದ್ದೀಖಿ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರವು ಇದೇ ವರ್ಷ ದೀಪಾವಳಿಯ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:-
ಇಲ್ಲಿದೆ ಇನ್ನಷ್ಟೂ ಓದು:-
If some one needs expert view concerning running a blog after that i propose him/her to pay a quick visit…
श्रेष्ठ गेम की स्क्रीन पर आप एक विमान को टेकऑफ़ करते हुए देखते हैं — और उसके पीछे चमकदार ट्रेल…
Курсы по наращиванию https://schoollegoart.ru ресниц, архитектуре и ламинированию бровей/ресниц с нуля: теория + практика на моделях, стерильность, карта бровей, классика/2D–4D,…
PRP-курс для косметологов обучение прп-терапии доказательная база, отбор пациентов, подготовка образца, техники введения (лицо, шея, кожа головы), сочетание с мезо/микронидлингом.…
Saved as a favorite, I love your website!





One thought on “Shahid Kapur ಅಭಿನಯದ ಹೊಸ ಚಿತ್ರಕ್ಕೆ Rashmika Mandanna ನಾಯಕಿ”