ಸರ್ಕಾರಿ ಶಾಲೆ ಉಳಿಸುವುದೇ ಈ ವಿದ್ಯಾರ್ಥಿಗಳ ಏಕೈಕ ‘ಗುರಿ’ …

ಡಾ. ರಾಜಕುಮಾರ್ ಅವರ ಜನಪ್ರಿಯ ಚಿತ್ರಗಳ ಪೈಕಿ ‘ಗುರಿ’ ಸಹ ಒಂದು. ಈಗ ಇದೇ ಹೆಸರಿನ ಇನ್ನೊಂದು ಚಿತ್ರವು ಸದ್ದಿಲ್ಲದೆ ಮುಗಿದಿದ್ದು, ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ‘ಗುರಿ’ (Guri) ಒಂದು ಆ್ಯಕ್ಷನ್-ಸೆಂಟಿಮೆಂಟ್ ಚಿತ್ರವಾದರೆ, ಇದು ಸರ್ಕಾರಿ ಶಾಲೆಗಳನ್ನು ಉಳಿಸುವ ಒಂದು ಪ್ರಯತ್ನ. ಅದಕ್ಕೆ ಪೂರಕವಾಗಿ ಚಿತ್ರಕ್ಕೆ ’ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹ ಸಹ ಇದೆ.
ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ ಎಸ್.ಆರ್ ಮತ್ತು ಚಿತ್ರಲೇಖಾ ಎಸ್ ನಿರ್ಮಾಣ ಮಾಡಿರುವ ‘ಗುರಿ’ ಚಿತ್ರಕ್ಕೆ ಸೆಲ್ವಂ ಮಾದಪ್ಪನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ಧವಿದ್ದು, ಪ್ರಚಾರದ ಮೊದಲ ಹಂತವಾಗಿ ಪಳನಿ ಡಿ. ಸೇನಾಪತಿ ಸಂಗೀತ ಸಂಯೋಜನೆಯ ಎರಡು ಹಾಡುಗಳು ಹಾಗೂ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ ಎನ್ನುತ್ತಾರೆ ನಿರ್ದೇಶಕ ಸೆಲ್ವಂ ಮಾದಪ್ಪನ್. ‘ಒಮ್ಮೆ ಕೋಲಾರದ ತೇರಳ್ಳಿ ಬೆಟ್ಟದ ಕಡೆ ಹೋಗಿದ್ದಾಗ, ಅಲ್ಲಿ ಸರ್ಕಾರಿ ಶಾಲೆ ಮುಚ್ಚಲಾಗಿತ್ತು. ಮಕ್ಕಳು ಶಿಕ್ಷಕರೊಂದಿಗೆ ಕೆರೆಯಲ್ಲಿ ಆಟವಾಡುತ್ತಿದ್ದರು. ಸ್ಥಳೀಯರೊಂದಿಗೆ ವಿಚಾರಣೆ ನಡೆಸಿದಾಗ, ಒಂದಷ್ಟು ಅಂಶಗಳು ಸಿಕ್ಕಿತ್ತು. ಅದನ್ನೇ ಬಳಸಿ ಚಿತ್ರಕಥೆ ಮಾಡಿದ್ದೇವೆ’ ಎಂದರು.
ಈ ಚಿತ್ರದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂದವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷಗಳು ಎಲ್ಲವನ್ನೂ ತೋರಿಸಲಾಗುತ್ತದಂತೆ. ‘ಒಂದು ಹಂತದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹಂತ ತಲುಪುತ್ತದೆ. ವಿಷಯ ತಿಳಿದ ಮೂರನೇ ತರಗತಿಯ ಇಬ್ಬರು ಬುದ್ದಿವಂತ, ಧೈರ್ಯಶಾಲಿ ವಿದ್ಯಾರ್ಥಿಗಳು ಇದರ ವಿರುದ್ದ ಹೋರಾಟ ನಡೆಸಿ, ಹೇಗೆ ಸಪಲರಾಗುತ್ತಾರೆ ಎಂಬುದು ಚಿತ್ರದ ಕಥೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದರು.
‘ಗುರಿ’ ಚಿತ್ರದಲ್ಲಿ ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್, ಅಚ್ಯುತ್ ಕುಮಾರ್, ಜಯಶ್ರೀ, ‘ಉಗ್ರಂ’ ಮಂಜು, ಸಂದೀಪ್ ಮಲಾನಿ ಮುಂತಾದವರು ನಟಿಸಿದ್ದಾರೆ.


ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] ಕೆ.ಆರ್ ಮಾರುಕಟ್ಟೆಯಲ್ಲಿ ‘Kamal Sridevi’ ಚಿತ್ರಕ್ಕೆ ಫೋಟೋ ಶೂಟ್ […]
https://the.hosting/
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
2 thoughts on “ಸರ್ಕಾರಿ ಶಾಲೆ ಉಳಿಸುವುದೇ ಈ ವಿದ್ಯಾರ್ಥಿಗಳ ಏಕೈಕ ‘ಗುರಿ’ …”