ದೆವ್ವದ ಜೊತೆಗೆ ಬಂದ ಸುಧಾರಾಣಿ, ಎರಡೇ ಪಾತ್ರಗಳ ಸುತ್ತ ‘ಘೋಸ್ಟ್’

ಶಿವರಾಜಕುಮಾರ್ ಅಭಿನಯದ ‘ಆನಂದ್’ ಚಿತ್ರದ ಮೂಲಕ ನಾಯಕಿಯಾದ ಸುಧಾರಾಣಿ, ಕಳೆದ 39 ವರ್ಷಗಳಲ್ಲಿ ನೂರಾರು ಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ. ಈಗ ಮೊದಲ ಬಾರಿಗೆ ಅವರು ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಚಿತ್ರ ನಿರ್ಮಾಣ ಎಂದರೆ ಅದು ಪೂರ್ಣಪ್ರಮಾಣದ ಚಿತ್ರವಲ್ಲ, ಕಿರುಚಿತ್ರ. ಹೆಸರು ‘ಘೋಸ್ಟ್ – ದಿ ದೆವ್ವ’ (Ghost – The Devva).
ಸುಧಾರಾಣಿ (Sudharani) ನಿರ್ಮಿಸಿ, ನಟಿಸಿದ ‘ಘೋಸ್ಟ್’, ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದ್ದು, ಜಗತ್ತಿನಲ್ಲಿ ಒಳ್ಳೆಯದು ಹೇಗಿದೆಯೋ ಹಾಗೆಯೇ ಕೆಟ್ಟದ್ದು ಇದೆ ಎಂಬ ಅಂಶವನ್ನು ಸಾರುತ್ತದೆ. ದೇವರು, ದೆವ್ವದ ಎಲ್ಲವೂ ನಮ್ಮ ಕಲ್ಪನೆಗೆ ಬಿಟ್ಟದ್ದು ಎಂಬಂತಹ ಎಳೆಯನ್ನಿಟ್ಟುಕೊಂಡು ಈ ಕಿರುಚಿತ್ರ ಮಾಡಲಾಗಿದೆ. ಈ ಚಿತ್ರವನ್ನು ‘ಶ್ರೀರಸ್ತು ಶುಭಮಸ್ತು’ ನಿರ್ದೇಶಕ ಸುದೇಶ್ ರಾವ್ ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕಿಯಾಗಿರುವ ಕುರಿತು ಮಾತನಾಡಿರುವ ಸುಧಾರಾಣಿ, ‘ಈ ಚಿತ್ರ ಆಗೋದಕ್ಕೆ ಕಾರಣ ನಮ್ಮ ‘ಶ್ರೀರಸ್ತು ಶುಭಮಸ್ತು ತಂಡ. ಇದೇ ತರಹ ಸಿನಿಮಾ ನಿರ್ಮಾಣ ಮಾಡುವ ಆಸೆಯೂ ಇದೆ. ಇಡೀ ಸಿನಿಮಾ ನಿರ್ಮಿಸುವ ತಾಕತ್ತು ಇಲ್ಲ. ಚಿತ್ರರಂಗ ಜೀವನ ಕಟ್ಟಿಕೊಟ್ಟಿದೆ. ಚಿಕ್ಕ ಮಟ್ಟದಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸೆ ಇದೆ. ಈ ಕಿರುಚಿತ್ರವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರೋತ್ಸವಗಳಿಗೂ ಕಳಿಸುವ ಯೋಚನೆ ಇದೆ. ಇದೊಂದು ಸೈಕಲಾಜಿಕಲ್ ಚಿತ್ರ. ಸುದೇಶ್ ಅವರು ಕಥೆ ಹೇಳಿದಾಗ, ಇಷ್ಟ ಆಯ್ತು. ಹಾಗಾಗಿ ನಿರ್ಮಾಣಕ್ಕಿಳಿದೆ’ ಎಂದರು.
ನಿರ್ದೇಶಕ ಸುದೇಶ್ ಕೆ. ರಾವ್ ಮಾತನಾಡಿ ‘ಪ್ರಪಂಚದಲ್ಲಿ ಇರುವುದೆಲ್ಲವೂ ಪಾಸಿಟಿವ್. ನಾವೇ ಎಲ್ಲದರಲ್ಲೂ ನೆಗೆಟಿವ್ ಹುಡುಕಿ, ನಮ್ಮ ತಲೆ ಮತ್ತು ಮನಸ್ಸನ್ನು ಕೆಡಿಸಿಕೊಳ್ಳುತ್ತೇವೆ. ಅಂತಹ ಎಲ್ಲರಿಗೂ ಈ ಕಿರುಚಿತ್ರ ಪರಿಹಾರ ನೀಡಬಹುದು. ನಾವು ಮೂಢನಂಬಿಕೆ ಎಂದು ಹೇಳುತ್ತಲೇ ತಾಯ್ತ ಕಟ್ಟಿಕೊಳ್ಳುತ್ತೇವೆ. ದೆವ್ವ-ಭೂತ ಇಲ್ಲ ಎಂದು ಖಡಾಖಂಡಿತವಾಗಿ ಹೇಳುವುದು ಕಷ್ಟ. ಆದರೆ, ನನಗೆ ಅಂಥದ್ದೊಂದು ಅನುಭವ ಆಗಿಲ್ಲ’ ಎಂದು ಹೇಳಿದರು.

ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
https://the.hosting/
[…] […]
[…] ಹಳೆಯ ‘ರಾಜದ್ರೋಹಿ’ ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜು … […]
[…] […]
[…] 250 ದಿನಗಳ ಚಿತ್ರೀಕರಣದ ನಂತರ ‘Kantara Chapter 1’ ಸಂಪೂರ್ಣ […]
2 thoughts on “ದೆವ್ವದ ಜೊತೆಗೆ ಬಂದ ಸುಧಾರಾಣಿ, ಎರಡೇ ಪಾತ್ರಗಳ ಸುತ್ತ ‘ಘೋಸ್ಟ್’”